ಚಿಕ್ಕನಾಯಕನಹಳ್ಳಿ : ಸುಳ್ಳು ಕಾಮಗಾರಿ ಬಿಲ್ ಮಾಡಿದರೆ ಪಿಡಿಒಗಳಿಗೆ ತೊಂದರೆ

 ಚಿಕ್ಕನಾಯಕನಹಳ್ಳಿ:

      ಎಸ್.ಸಿ-ಎಸ್.ಟಿ ಹಣವನ್ನು ಖರ್ಚು ಮಾಡಬೇಕಾದರೆ, ನಿಜವಾದ ಫಲಾನುಭವಿಗಳಿಗೆ ಮಾತ್ರ ಹಣ ದೊರೆಯಬೇಕು, ಈ ಹಣವನ್ನು ಖರ್ಚು ಮಾಡುವಾಗ ಮೀಸಲಿರುವುದಕ್ಕೆ ಬಿಟ್ಟು ಸಾಮಾನ್ಯ ಕಾಮಗಾರಿಗಳಿಗೆ ಬಳಸಬಾರದು ಎಂದು ತಾ.ಪಂ.ಸದಸ್ಯ ಸಿಂಗದಹಳ್ಳಿ ರಾಜ್ ಕುಮಾರ್ ಹೇಳಿದರು.

      ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ನಡೆದ ಎಸ್.ಸಿ.ಪಿ, ಟಿ.ಎಸ್.ಪಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲೂ ಗ್ರಾಮ ನೈರ್ಮಲ್ಯ ಎಂದು ಹೇಳಿದ್ದೀರಿ. ಆದರೆ ಎಲ್ಲಿಂದ ಎಲ್ಲಿಯವರೆಗೆ ಎಂದು ತಿಳಿಸಿಲ್ಲ, ಕೆಲವು ಗ್ರಾಮಗಳಲ್ಲಿ ರಿಪೇರಿ ಎಂದು ತೋರಿಸಿದ್ದೀರಿ ಆದರೆ ಯಾವುದನ್ನು ರಿಪೇರಿ ಮಾಡಿದೆ ಎಂದು ತಿಳಿಸಿಲ್ಲ ಎಂದು ರಾಜ್ ಕುಮಾರ್ ಪ್ರಶ್ನಿಸಿದರು. ದಾಖಲೆಗಳಲ್ಲಿ ಎಸ್.ಟಿ ಇರುವ ಕಡೆ ಎಸ್.ಟಿ ಎಂದು ಹಾಗೂ ಎಸ್.ಸಿ ಇರುವ ಕಡೆ ಎಸ್.ಸಿ ಎಂದೇ ಪೂರ್ಣವಾಗಿ ನಮೂದಾಗಬೇಕು. ಅದಲು, ಬದಲಾದರೆ ಬೇರೆಯವರಿಗೆ ತೊಂದರೆಯಾಗಲಿದೆ. ಬರಶಿಡ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಚಂದ್ರಯ್ಯನವರ ಮನೆ ಇಂದ ಹೊಸಕೆರೆವರೆಗೂ ಪಾದಚಾರಿ ರಸ್ತೆ ಎಂದು ಬರೆದಿದ್ದಾರೆ, ಆ ಜಾಗದಲ್ಲಿ ರಸ್ತೆ ಎಲ್ಲಿದೆ ಇದಕ್ಕೆ 70ಸಾವಿರ ಖರ್ಚು ಎಂದು ತೋರಿಸಿದ್ದೀರಾ ಎಂದು ರಾಜ್ ಕುಮಾರ್ ಪ್ರಶ್ನಿಸಿದರು. ಕೆಲವು ಗ್ರಾಮಗಳಲ್ಲಿ ಪಾದಚಾರಿ ರಸ್ತೆಗೆ ಖರ್ಚು ತೋರಿಸಿದ್ದರೂ ಊರ ಒಳಗೆ ಯಾವ ಪಾದಚಾರಿ ರಸ್ತೆ ಮಾಡುತ್ತೀರಾ ಎಂದು ಕೇಳಿದರು.

      ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಅಥಿಕ್ ಪಾಷ ಮಾತನಾಡಿ, ತೀರ್ಥಪುರ ಪಂಚಾಯ್ತಿಯಲ್ಲಿ ಅಂಬೇಡ್ಕರ್ ಜಯಂತಿಗೆ 2ಸಾವಿರ ಹಣ ಖರ್ಚು ತೋರಿಸಿದ್ದಾರೆ, ಈ ಹಣವನ್ನು ಹೇಗೆ ಖರ್ಚು ಮಾಡಿದ್ದೀರಿ ಎಂದು ಇಓ ಪ್ರಶ್ನಿಸಿದರು.

ಕಾತ್ರಿಕೆಹಾಲ್ ನಲ್ಲಿ 2019-2020 ನೇ ಸಾಲಿನಲ್ಲಿ ಪರಿಶಿಷ್ಠ ಪಂಗಡದಲ್ಲಿ ಕೊಳವೆ ಬಾವಿಗೆ ಮೋಟಾರ್ ಜೊತೆ ಕೇಬಲ್ ಬಿಟ್ಟಿದ್ದಕ್ಕೆ 70ಸಾವಿರ ಹಣ ಖರ್ಚು ಹಾಕಿದ್ದೀರಿ ಕೇವಲ ಕೇಬಲ್ ಗೆ 70ಸಾವಿರ ಖರ್ಚಾಗುತ್ತದೆಯೇ ಎಂದು ಜಿ.ಪಂ.ಸದಸ್ಯ ಮಹಾಲಿಂಗಪ್ಪನವರು ಪ್ರಶ್ನಿಸಿದರು.

      ತಾ.ಪಂ.ಸದಸ್ಯೆ ಚೇತನಗಂಗಾಧರ್ ಮಾತನಾಡಿ, ಒಂದು ವಾರದೊಳಗೆ ಬರಗೂರಿನ ಪಿಡಿಓ ರವರನ್ನು ರಿಲೀವ್ ಮಾಡಿ ಅವರ ಜಾಗಕ್ಕೆ ಹೊಸ ಪಿಡಿಓ ರವರನ್ನು ಹಾಕಲೇಬೇಕು ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಅಥಿಕ್ ಪಾಷರವರಿಗೆ ಸಭೆಯಲ್ಲಿ ಒತ್ತಾಯಿಸಿದರು. ಅಲ್ಲದೆ, ತಾಲ್ಲೂಕಿನಲ್ಲಿ ಬೇರೆ ಪಿಡಿಓಗಳನ್ನು ಬೇರೆ ಕಡೆ ಹಾಕಿ ಕೆಲಸ ಮಾಡಿಸುವುದಿಲ್ಲವೇ ಹಾಗೆ ಬರಗೂರಿಗೆ ಹೊಸ ಪಿಡಿಓ ಹಾಕಿ ಎಂದು ಒತ್ತಡ ಹಾಕಿದರು.

      ಜಿ.ಪಂ.ಸದಸ್ಯ ಮಹಲಿಂಗಯ್ಯ ಮಾತನಾಡಿ, ಪಿಡಿಓಗಳು ಗ್ರಾ.ಪಂ.ಗಳಿಗೆ ಬರುವ ಹಣವನ್ನು ಸರಿಯಾದ ರೀತಿಯಲ್ಲಿ ಬಳಸುತ್ತಿಲ್ಲ ಹಾಗಾಗಿ ಎಲ್ಲಾ ಪಿಡಿಓಗಳಿಗೆ ಹಣ ಬಳಸುವುದರ ಬಗ್ಗೆ ತರಬೇತಿ ನೀಡಬೇಕೆಂದು ಸಭೆಯಲ್ಲಿ ತಿಳಿಸಿದರಲ್ಲದೆ, ಸಾಲ್ಕಟ್ಟೆ ಕಾಲೋನಿಯಲ್ಲಿ ಅಂಬೇಡ್ಕರ್ ಭವನದ ಸುತ್ತಲಿನ ಕಾಮಗಾರಿಗೆ 65421 ರೂ ಖರ್ಚು ಮಾಡಲಾಗಿದೆ. ಆದರೆ ಇಲ್ಲಿ ಯಾವ ಕಾಮಗಾರಿಯೂ ಆಗಿಲ್ಲ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ಸಭೆಯಲ್ಲಿ ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ ಸೇರಿದಂತೆ ತಾಲ್ಲೂಕಿನ ಎಲ್ಲಾ ಪಿಡಿಓಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap