ಚಿಕ್ಕನಾಯಕನಹಳ್ಳಿ :
ತಾಲ್ಲೂಕಿನ ಶೆಟ್ಟಿಕೆರೆ ಕೆರೆಗೆ ಈಜಾಡಲು ತೆರಳಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಗಿರೀಶ(26) ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಯುವಕ ತಿಪಟೂರಿನ ಕಟಿಗೇನಹಳ್ಳಿ ಗ್ರಾಮದವರು ಎಂದು ತಿಳಿದು ಬಂದಿದೆ. ಶೆಟ್ಟಿಕೆರೆಗೆ ಹೊಸ ನೀರು ಬಂದಿದ್ದರಿಂದ ಈಜಾಡಲು ಗಿರೀಶ್ ಹಾಗೂ ಅವರ ಸ್ನೇಹಿತ ಶೆಟ್ಟಿಕೆರೆ ಕೆರೆಗೆ ಆಗಮಿಸಿದ್ದರು. ಶೆಟ್ಟಿಕೆರೆ ಕೆರೆಯಲ್ಲಿ ಈಜಾಡುವ ವೇಳೆ ಗಿರೀಶ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಶೆಟ್ಟಿಕೆರೆ ಕೆರೆಗೆ ಹೊಸ ನೀರು ಹರಿದ ನಂತರ ಮೊದಲ ಸಾವು ಇದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
