ಚಿ.ನಾ.ಹಳ್ಳಿ : ಹಿಂದೂ-ಮುಸ್ಲಿಂರ ಭಾವೈಕ್ಯತೆಯ ಸಂಕೇತ ತಾತಯ್ಯ ಉರಸ್

 ಚಿಕ್ಕನಾಯಕನಹಳ್ಳಿ : 

      ಪಟ್ಟಣದಲ್ಲಿ ಹಿಂದು ಮುಸ್ಲಿಂ ಭಾವೈಕ್ಯತೆಯಾಗಿರುವ ತಾತಯ್ಯನವರ ಉರುಸ್ ಇದೇ ಮಾರ್ಚ್ 22 ರಿಂದ 3 ದಿನಗಳ ಕಾಲ ನಡೆಯಲಿದೆ.

      22ರಂದು ರಾತ್ರಿ 10ಗಂಟೆಗೆ ಆರಂಭವಾಗುವ ಉರುಸ್ ಕಾರ್ಯಕ್ರಮದಲ್ಲಿ ತಾತಯ್ಯನಗೋರಿಯಿಂದ ಉತ್ಸವ ಹೊರಡುತ್ತದೆ, ಈ ವೇಳೆ ಗೋರಿಯ ಕುದುರೆ ಹಾಗೂ ಅಲಂಕಾರಿಕ ನಂಬಿಕೆಯ ಪ್ರತೀಕಗಳು ಇರುತ್ತವೆ, ಉತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.

      23ರಂದು ಜಿದ್ದಾಜಿದ್ದಿನ ಖವ್ವಾಲಿ ಕನ್ನಡ ಸಂಘದ ವೇದಿಕೆಯಲ್ಲಿ ನಡೆಯಲಿರುವ ಖವ್ವಾಲಿ ವೀಕ್ಷಿಸಲು ರಾಜ್ಯಾದ್ಯಂತ ಸಾವಿರಾರು ಮಂದಿ ಆಗಮಿಸಲಿದ್ದಾರೆ, ಈ ವೇಳೆ ತಾಲ್ಲೂಕಿನಿಂದ ಬೇರೆ ಕಡೆ ವಲಸೆ ಹೋಗಿರುವವರೂ ಖವ್ವಾಲಿ ವೀಕ್ಷಿಸಲು ತಮ್ಮ ಜೊತೆಗೆ ಇತರರನ್ನೂ ಕರೆತರುತ್ತಾರೆ, ಸಾವಿರಾರು ಮುಸ್ಲಿಂ ಬಾಂಧವರು ಆಗಮಿಸಿ ಖವ್ವಾಲಿ ವೀಕ್ಷಿಸುತ್ತಾರೆ.

      24ರಂದು ಕನ್ನಡ ಆರ್ಕೇಷ್ಟ್ರಾ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು ರಾಜ್ಯದಲ್ಲಿ ಹೆಸರು ಗಳಿಸಿರುವ ಸೆಲೆಬ್ರಿಟಿಗಳು ಆಗಮಿಸಿ ತಾತಯ್ಯನ ಗೋರಿ ಜಾತ್ರೆಗೆ ಆಗಮಿಸುವ ಜನರನ್ನು ರಂಜಿಸಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link