ಚಿಕ್ಕನಾಯಕನಹಳ್ಳಿ : ಶವಸಾಗಿಸಲು ಖಾಸಗಿ ವಾಹನಗಳ ಮೊರೆ

ಚಿಕ್ಕನಾಯಕನಹಳ್ಳಿ : 

      ಮೊದಲೆಲ್ಲಾ ಮನೆಯೊಂದರಲ್ಲಿ ಸಾವಾಗಿದೆ ಸಾವಾದ ಮೃತದೇಹವನ್ನು ಹೊರಲು ಜನರು ಒಟ್ಟಾಗಿ ಬರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮೃತದೇಹವನ್ನು ಸ್ಮಶಾನದವರೆಗೆ ಹೊರಲು ಜನರೇ ಬರುತ್ತಿಲ್ಲ, ಮೃತದೇಹವನ್ನು ಹೊರುವ ಜನರು ಸಿಗದೆ ಕುಟುಂಬಸ್ಥರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ, ಬರುವ ಖಾಸಗಿ ವಾಹನಗಳು ಮೃತದೇಹ ಹೊರುವುದಾದರೆ ದುಪ್ಪಟ್ಟು ಹಣದ ಬೇಡಿಕೆ ಇಡುತ್ತಾರೆ, ಇವೆಲ್ಲದರ ನಡುವೆ ಪಟ್ಟಣಕ್ಕೆ ಮೋಕ್ಷ ರಥ ಕೈಲಾಸ ರಥದ ಒತ್ತಾಯವೂ ಇದೆ.

     ಪಟ್ಟಣಕ್ಕೆ ಅತ್ಯವಶ್ಯಕವಾಗಿ ಮೋಕ್ಷ ರಥವನ್ನು ತರಲೇಬೇಕೆಂಬ ಕೂಗು ಪುರಸಭೆಯ ಆಡಳಿತದಿಂದಲೂ ಇದೆ ಆದರೆ ಈವರೆಗೂ ಕೂಗು ಆಡಳಿತದಿಂದ ಪ್ರತಿಕ್ರಿಯೇ ಹೊರಬಂದಿಲ್ಲ.

     ಸಾಮಾನ್ಯವಾಗಿ ಮೃತರಾದ ಬಳಿಕ ಮೊದಲಿನಿಂದಲೂ ಜನರು ಸಾರ್ವಜನಿಕವಾಗಿ ಮೆರವಣಿಗೆ ಮೂಲಕ ಸ್ಮಶಾನದತ್ತ ಮೃತದೇಹವನ್ನು ಕೊಂಡೊಯ್ಯಲಾಗುತ್ತಿತ್ತು. ಆ ಸಂಪ್ರದಾಯ ಈಗಲೂ ನಡೆದುಕೊಂಡು ಬಂದಿದೆ ಆದರೆ ಮೊದಲು ಮೃತದೇಹವನ್ನು ನಾಲ್ಕಾರು ಜನರು ಸ್ಮಶಾನದವರೆಗೂ ಹೊತ್ತೊಯ್ಯುತ್ತಿದ್ದರು ಆದರೆ ಈಗಿನ ದಿನಮಾನಗಳಲ್ಲಿ ಮೃತದೇಹವನ್ನು ಹೊತ್ತೊಯ್ಯಲು ಬರುವುದು ಬೆರಳಣಿಕೆಯಷ್ಟಾಗಿದೆ, ಬರುವವರೂ ತಮ್ಮ ಕೆಲಸದ ನಿಮಿತ್ತ ಬೇರೆ ಊರಿಗೆ, ಅನ್ಯ ಕಾರ್ಯದಲ್ಲಿ ತೊಡಗಿಸಿಕೊಂಡರೆ ಮೃತದೇಹವನ್ನು ಸ್ಮಶಾನದವರೆಗೂ ಕೊಂಡೊಯ್ಯಲು ಸಾಮಾನ್ಯ ಜನರಿಗೆ ಕಷ್ಠವಾಗುತ್ತಿದೆ.

     ಮೃತದೇಹವನ್ನು ಸ್ಮಶಾನದವರೆಗೂ ಕೊಂಡೊಯ್ಯಲು ಜನರು ಸಿಗದೇ ಇದ್ದಾಗ ಖಾಸಗಿ ವಾಹನದ ಮೊರೆ ಹೋಗಲಾಗುತ್ತಿದೆ, ಮೃತದೇಹವನ್ನು ಹೊರಲು ಎಲ್ಲಾ ಖಾಸಗಿ ವಾಹನದ ಮಾಲೀಕರು ಮುಂದೆ ಬರುವುದಿಲ್ಲ, ಪರಿಚಯಸ್ಥರಾದರೆ ಅದರಲ್ಲೂ ಕೆಲವರು ಮಾತ್ರ ಮೃತದೇಹವನ್ನು ಸ್ಮಶಾನದವರೆಗೂ ಕೊಂಡೊಯ್ಯಲು ಮುಂದೆ ಬರುತ್ತಾರೆ, ಬರುವ ಖಾಸಗಿ ವಾಹನ ಮಾಲೀಕರು ಮೃತದೇಹವನ್ನು ಬಾಡಿಗೆಯಲ್ಲಿ ಕೊಂಡೊಯ್ಯಲು ದುಪ್ಪಟ್ಟು ಹಣದ ಬೇಡಿಕೆ ಇಡುತ್ತಾರೆ, ಬರುವ ಖಾಸಗಿ ವಾಹನಗಳಿಗೆ ದುಪ್ಪಟ್ಟು ವಾಹನ ನೀಡಿ ಸ್ಮಶಾನದವರೆಗೂ ಸಾಗಲು ಬಡವರಿಗೆ ಸಾಧ್ಯವಾಗುತ್ತಿಲ್ಲ. ಇತ್ತ ಮೃತದೇಹವನ್ನು ಸ್ಮಶಾನದ ವರೆಗೆ ವರುವ ಜನರು ಸಿಗದೆ, ಖಾಸಗಿ ವಾಹನ ಮಾಲೀಕರಿಗೆ ದುಪ್ಪಟ್ಟು ಹಣ ನೀಡಿ ಸಾಗಿಸಲು ಆಗದೆ ಸಾಮಾನ್ಯ ಜನರು ಬಳಲುತ್ತಿದ್ದಾರೆ.

ಹೆಗಲು ಕೊಟ್ಟು ಹೊತ್ತೊಯ್ಯುವಂತಹ ಸ್ಥಿತಿ ಪಟ್ಟಣದಲ್ಲಿ ಕಾಣಲಾಗುತ್ತಿಲ್ಲ  :

     ಜನರ ಇಚ್ಚಾಶಕ್ತಿಯ ಕೊರತೆಯಿಂದಾಗಿ ಮೃತದೇಹವನ್ನು ಹೆಗಲು ಕೊಟ್ಟು ಹೊತ್ತೊಯ್ಯುವಂತಹ ಸ್ಥಿತಿ ಪಟ್ಟಣದಲ್ಲಿ ಕಾಣಲಾಗುತ್ತಿಲ್ಲ, ಕಡು ಬಡವರು ಸಹ ಇತ್ತಿಚಿನ ದಿನಗಳಲ್ಲಿ ಬಾಡಿಗೆ ಹಣ ಕೊಟ್ಟು ಖಾಸಗಿ ವಾಹನಗಳಲ್ಲಿ ಮೃತದೇಹವನ್ನು ಸಾಗಿಸುತ್ತಿರುವ ಪ್ರಕರಣಗಳು ನಮ್ಮ ಕಣ್ಣು ಮುಂದೆಯೇ ಕಾಣಬಹುದಾಗಿದೆ. ಈ ಸ್ಥಿತಿ ಈಗಾಗಲೇ ಎರಡು, ಮೂರು ವರ್ಷಗಳಿಂದ ಪಟ್ಟಣದಲ್ಲಿ ಪ್ರಚಲಿತದಲ್ಲಿದೆ, ಪುರಸಭೆಯ ಸಭೆಯಲ್ಲಿಗೂ ಆಗಾಗ್ಗೆ ಈ ಬಗ್ಗೆ ಸದಸ್ಯರಿಂದ ಕೂಗು ಕೇಳಿಬಂದರೂ ಆ ಕೂಗಿಗೆ ಪುರಸಭೆ ಅಡಳಿತ ಮುಂದುವರೆಯುತ್ತಿಲ್ಲ, ಅತ್ಯವಶ್ಯಕವಾಗಿರುವ ಮೋಕ್ಷ ರಥ, ಕೈಲಾಸರಥ ಕ್ಕೆ ಸಾರ್ವಜನಿಕರಿಂದಲೂ ಒತ್ತಾಯವಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link