ಚಿಕ್ಕನಾಯಕನಹಳ್ಳಿ :
ಹೆಸರಹಳ್ಳಿ ಕೆರೆಗೆ ಹೇಮಾವತಿ ನೀರು ಹರಿಸಿದ್ದೇನೆ, ಶಾಲೆಗೆ ಎರಡು ನೂತನ ಕೊಠಡಿ ಉದ್ಘಾಟನೆ ಮಾಡುತ್ತಿದ್ದೇನೆ, ಗೌಡನಹಳ್ಳಿಯಿಂದ ಮತಿಘಟ್ಟ ಕೂಡು ರಸ್ತೆ ನಿರ್ಮಿಸಲು ಒಂದು ಕಾಲು ಕೋಟಿ ರೂ ಮಂಜೂರು ಮಾಡಿಸಿದ್ದೇನೆ ಇನ್ನೇನು ಬೇಕು ಕೇಳಿ ನಿಮ್ಮೂರಿಗೆ ಎಂದು ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತಾಲೂಕಿನ ಹೆಸರಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವುದರಿಂದ ಹೆಚ್ಚು ಜನರು ಒಂದೆಡೆ ಸೇರ ಬೇಡಿ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಡಿ, ಸಮುದಾಯದ ಆರೋಗ್ಯ ರಕ್ಷಣೆ ಕಡೆ ಹೆಚ್ಚು ಗಮನ ನೀಡಿ ಎಂದರು.
ಕೊಠಡಿ ಉದ್ಘಾಟನೆ ಮಾಡಿದ ತಕ್ಷಣ ಕಾರ್ಯಕ್ರಮದ ಸಿದ್ಧತೆ ನೋಡಿ, ಇದೆಲ್ಲಾ ಮಾಡಬಾರದು, ಹೆಚ್ಚು ಜನರು ಒಂದೆಡೆ ಸೇರಬಾರದು ಎಂದವರೆ ನೇರ ವೇದಿಕೆಯನ್ನೇರಿ, ಸರ್ಕಾರದಿಂದ ಗ್ರಾಮಕ್ಕೆ ಆಗಿರುವ ಅನುಕೂಲಗಳನ್ನು ಹೇಳಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ಈ ಸಂದರ್ಭದಲ್ಲಿ ಬಿ.ಇ.ಓ. ಕಾತ್ಯಾಯಿನಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಪಂಚಾಕ್ಷರಯ್ಯ, ಗುಡಿ ಗೌಡರು ಬಸವರಾಜು, ಗ್ರಾ.ಪಂ. ಸದಸ್ಯರುಗಳಾದ ಗೋಪಾಲಯ್ಯ, ಪ್ರಿಯಾಂಕ, ಶಾಂತಕುಮಾರ್, ಹಾಲಿನ ಡೈರಿ ಅಧ್ಯಕ್ಷರಾದ ಮಂಜುನಾಥ್, ಮುಖ್ಯೋಪಾಧ್ಯಾಯರಾದ ಗಂಗಾಧರಯ್ಯ, ಶಾಲಾ ಶಿಕ್ಷಕರು, ಗ್ರಾಮಸ್ಥರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ