ಚಿಕ್ಕನಾಯಕನಹಳ್ಳಿ :
ಸಣ್ಣ ನೀರಾವರಿ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಅಡಿಯಲ್ಲಿ ತಾಲ್ಲೂಕಿನ 357ಮಂದಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದವರಿಗೆ ಬೋರ್ ವೆಲ್ ಕೊರೆಸಿ ಮೋಟಾರ್ ಪಂಪ್‍ನ್ನು ವಿತರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಫಲಾನುಭವಿಗಳಿಗೆ ಮೋಟಾರ್ ಪಂಪ್ ನ್ನು ವಿತರಿಸಿ ಮಾತನಾಡಿದ ಅವರು, 2019-20ನೇ ಸಾಲಿನಲ್ಲಿ ಈಗಾಗಲೇ ಕೊಳವೆ ಬಾವಿ ಕೊರೆದವರಿಗೆ ಮೋಟಾರ್ ಪಂಪ್ ವಿತರಿಸಲಾಗುತ್ತಿದೆ, ಮೋಟಾರ್ ಪಂಪ್‍ನ್ನು ಒಂದು ಘಟಕದ ವೆಚ್ಚ 4 ಲಕ್ಷ ರೂ ತಗುಲಲಿದೆ, ವಿಶೇಷ ಘಟಕ ಯೋಜನೆಯಲ್ಲಿ 200 ಮಂದಿಗೆ ಹಾಗೂ ಗಿರಿಜನ ಉಪಯೋಜನೆಯ 157 ಮಂದಿಗೆ ಟೆಂಡರ್ ಕರೆದು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ನಿರಂಜನ್ ಮೂರ್ತಿ, ಅಧಿಕಾರಿಗಳಾದ ಪ್ರಭಾಕರ್, ರಾಘು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ