ಪ್ರಯಾಣಿಕರ ಪರದಾಟ, ಖಾಸಗಿ ಬಸ್ ಮಾಲೀಕರುಗಳಿಗೆ ಹಬ್ಬದೂಟ

ಚಿಕ್ಕನಾಯಕನಹಳ್ಳಿ :

      6ನೇ ವೇತನ ಆಯೋಗ ಶಿಫಾರಸ್ಸಿಗೆ ಆಗ್ರಹಿಸಿ ಸಾರಿಗೆ ನೌಕರರು ರಾಜ್ಯಾದ್ಯಂತ ಹಮ್ಮಿಕೊಂಡಿರುವ ಮುಷ್ಕರ ತಾಲ್ಲೂಕಿನಲ್ಲೂ ಬಿಸಿ ಕಂಡಿತು, ದುಪಟ್ಟು ಬಸ್ ಚಾರ್ಚ್ ಕೊಟ್ಟು ನೌಕರಿಗೆ ತೆರಳಲು ಪರದಾಡುತ್ತಿದ್ದರು, ಗಾರ್ಮೆಂಟ್ಸ್ ನೌಕರರು, ಕಚೇರಿ ಬ್ಯಾಂಕ್ ಮತ್ತಿತರ ಕೆಲಸಗಳಿಗೆಂದು ಹೊರಟ್ಟಿದ್ದ ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಖಾಸಗಿ ವಾಹನಗಳಿಗೆ ಹಂಬಲಿಸುತ್ತಿದದ್ದು ಸಾಮಾನ್ಯವಾಗಿತ್ತು.
ಪಟ್ಟಣದಲ್ಲಿ ಸರ್ಕಾರಿ ಬಸ್‍ಗಳನ್ನೇ ಅವಲಂಬಿಸಿಕೊಂಡು ಪ್ರತಿನಿತ್ಯ ಓಡಾಡುತ್ತಿದ್ದ ಸಾರ್ವಜನಿಕರು ಇಂದು ಬಸ್ ಗಳಿಲ್ಲದೆ ಪರದಾಡಿದರು, ಖಾಸಗಿ ವಾಹನಗಳು ಇವೆ ಎಂದು ಬಸ್ ಸ್ಟಾಂಡ್‍ಗೆ ಆಗಮಿಸಿದರೆ ಕೆಲವೇ ರೂಟ್ ಗಳಿಗೆ ಮಾತ್ರ ಕೆಲವು ಮಾತ್ರ ಖಾಸಗಿ ವಾಹನಗಳು ಸಂಚರಿಸಿದ್ದು ಕಂಡುಬಂದಿತು.

      ಖಾಸಗಿ ಬಸ್ ಸ್ಟಾಂಡನಲ್ಲೂ ಆಗೊಮ್ಮೆ, ಈಗೊಮ್ಮೆ ಮಾತ್ರ ಬಸ್ ಗಳು ಕಂಡವು, ಬಸ್ ಗಳು ಸಮಯಕ್ಕೆ ಸರಿಯಾಗಿ ದೊರಕದೆ ಇದ್ದುದರಿಂದ ಆಟೋ, ಕಾರ್ ಮಾಡಿಕೊಂಡು ತೆರಳಿದ್ದೂ ಉಂಟು. ಕಾಲೇಜು ವಿದ್ಯಾರ್ಥಿಗಳು ಖಾಸಗಿ ವಾಹನಗಳಿಗೆ ದುಪಟ್ಟು ಹಣಕೊಟ್ಟು ಸಂಚರಿಸಬೇಕಾಗಿದ್ದಕ್ಕೆ ಬೇಸರಿಸಿಕೊಳ್ಳುತ್ತಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap