ಚಿಕ್ಕನಾಯಕನಹಳ್ಳಿ :
ಪಟ್ಟಣದ ಬಿ.ಎಚ್.ರಸ್ತೆಯಲ್ಲಿ ರಸ್ತೆ ನವೀಕರಣ ಗೊಳಿಸುತ್ತಿಲಾದ್ದು ಸಿವಿಲ್ ಬಸ್ಟಾಂಡ್ ನಿಂದ ನೆಹರು ಸರ್ಕಲ್ ವರೆಗೆ ರಸ್ತೆ ವಿಭಾಜಕವನ್ನು ಅವೈಜ್ಞಾನಿಕವಾಗಿ ನಿರ್ಮಿಸುತ್ತಿದ್ದಾರೆ. ಎಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣದ ಮಾರುತಿ ಮೆಡಿಕಲ್ ಮುಂಭಾಗ ಈ ಮೊದಲು ಡಿವೈಡರ್ ಇದ್ದಾಗ ವಾಹನಗಳು ತಿರುಗಿಸಿಕೊಳ್ಳಲು ಜಾಗವಿತ್ತು, ಈ ಭಾಗದ ಮೂಲಕ ಮಹಾಲಕ್ಷ್ಮೀ ಬಡಾವಣೆ. ಕರಿದೇವರ ಮಠ ಬೀದಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿತ್ತು. ಅದೆ ರೀತಿ ಡಾ.ದಾಸ್ ಆಸ್ಪತ್ರೆಯ ಬಳಿ ತೆರೆದಿದ್ದ ಜಾಗವನ್ನು ಮುಚ್ಚಿದ್ದಾರೆ. ಹೀಗೆ ಪಟ್ಟಣದ ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಜಾಗವನ್ನು ರಸ್ತೆ ನಿರ್ಮಾಣ ಮಾಡುವವರು ಮುಚ್ಚುತ್ತಿದ್ದು, ಇದು ಸಾರ್ವಜನಿಕರಿಗೆ ಸಾಕಷ್ಟು ಕಿರಿ ಕಿರಿ ಉಂಟು ಮಾಡುತ್ತಿದೆ, ಅಲ್ಲದೆ ಈ ಭಾಗಗಳಲ್ಲಿ ಏನಾದರೂ ಅವಘಡಗಳು ಸಂಭವಿಸದರೆ ಅಗ್ನಿ ಶಾಮಕ ವಾಹನ ಆಂಬ್ಯುಲೆನ್ಸ್ ಗಳು ಬರಲು ಹೋಗಲು ಅನುಕೂಲವಾಗಿತ್ತು. ಆದರೆ ಈಗ ರಾತ್ರೋ ರಾತ್ರಿ ಸಂಪರ್ಕ ರಸ್ತೆಗಳನ್ನು ಮುಚ್ಚಿರುವ ಡಿವೈಡರ್ ನಿರ್ಮಾಣವಾಗಿದೆ. ಇದರಿಂದ ಅಗ್ನಿಶಾಮಕ ವಾಹನಗಳು ಸೇರಿದಂತೆ ತುರ್ತು ವಾಹನಗಳು ಓಡಾಡಲು ಅನಾನೂಕಲವಾಗಿದೆ ಹಾಗೂ ಹಲವು ಪ್ರಮುಖ ಬೀದಿಗೆ ಸಂಪರ್ಕ ಕಲ್ಪಿಸುವ ಸ್ಥಳವನ್ನು ಪೂರ್ಣ ಡಿವೈಡರ್ ನಿಂದ ಮುಚ್ಚಲಾಗಿದೆ, ಇದರಿಂದ ಸಾರ್ವಜನಿಕರು ಈ ರಸ್ತೆ ವಿಭಜಕ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದೆ, ಮೊದಲಿನಂತೆ ಎಲ್ಲಿ ತೆರೆದಿದ್ದ ಜಾಗವಿತ್ತು ಆ ಭಾಗಗಳಲ್ಲಿ ಪುನಃ ತೆರೆದ ಸ್ಥಿತಿಯಲ್ಲಿರುವಂತೆ ಡಿವೈಡರ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
