ಹಸಿವಿನಿಂದ ಅಸುನೀಗಿದ ಸೂರಪ್ಪ: ಕಾಳ ಸಂತೆ ಸೃಷ್ಟಿಸುತ್ತಿರುವ ವ್ಯಾಪಾರಿಗಳು

ಚಿಕ್ಕನಾಯಕನಹಳ್ಳಿ : 

      ಕೊರೋನಾದಿಂದ ಸಾವಿಗೀಡಾದವರ ಸಂಖ್ಯೆ ದ್ವಿ ದಶಕವನ್ನು ದಾಟಿದ್ದು. ಇದರ ಜೊತೆಗೆ ಹಸಿವಿನಿಂದ ಸಾವಿಗೀಡದವರು ಸಂಖ್ಯೆಯೂ ಆರಂಭವಾಗಿದೆ, ಕೊರೋನಾ ಸೋಂಕಿತರ ಸಂಖ್ಯೆ ದಿನ ಒಂದಕ್ಕೆ ಮುನ್ನೂರರ ಗಡಿ ಮುಟ್ಟುತ್ತಿದೆ, ಹೀಗೆ ಮುಂದುವರೆದರೆ ಮುಂದಿನ ದಿನಗಳು ಹೇಗಪ್ಪ ಎನ್ನುವ ಆತಂಕದಲ್ಲಿ ಜನರು ದಿನ ದೂಡುತ್ತಿದ್ದಾರೆ.

      ಒಂದೆಡೆ ಏರುಗತಿಯಲ್ಲಿರುವ ಸೋಂಕು, ಇನ್ನೊಂದೆಡೆ ಲಾಕ್ ಡೌನ್ ನಿನ ಹೊಡೆತ ಜನ ಸಾಮಾನ್ಯರ ಬದುಕು ಸಂದಿಗ್ಧ ಸ್ಥಿತಿಗೆ ತಲುಪಿದೆ. ಈಗಾಗಲೇ ತಾಲ್ಲೂಕಿನಲ್ಲಿ ನಾಲ್ಕು ಪಂಚಾಯ್ತಿಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಿದ್ದು, ಪಟ್ಟಣದಲ್ಲೂ ನಾಲ್ಕು ವಾರ್ಡ್ ಗಳನ್ನು ಹಾಟ್ ಸ್ಪಾಟ್ ಎನ್ನಲಾಗುತ್ತಿದೆ, ಅದರಲ್ಲೂ ಮಹಾಲಕ್ಷ್ಮಿ ಬಡಾವಣೆಯೊಂದರಲ್ಲೇ ಅರವತ್ತಕ್ಕೂ ಹೆಚ್ಚು ಸೋಂಕಿತರಿರುವುದು ಭಯವನ್ನುಂಟು ಮಾಡಿದೆ.

      ಪಟ್ಟಣದಲ್ಲಿ ಸೋಂಕಿತರ ಸಾವಿನ ಸಂಖ್ಯೆ ತಲುಪಿದೆ, ದುರ್ದೈವೆಂದರೆ ಹಸಿವಿನಿಂದ ಒಬ್ಬರು ಸಾವಿಗೀಡಾಗಿರುವುದು ಜನರನ್ನು ಮಮ್ಮಲ ಮರುಗುವಂತೆ ಮಾಡಿದೆ. ಪಟ್ಟಣದ ಬ್ರಾಹ್ಮಣರ ಬೀದಿಯ ಸೂರಪ್ಪ ಎಂಬುವವರೆ ಹಸಿವಿನಿಂದ ಸಾವನ್ನಪ್ಪಿರುವುದು. ಇವರು ಮದುವೆಯಾಗಿರಲಿಲ್ಲ ಅಣ್ಣ-ತಮ್ಮ ಇಬ್ಬರೆ ಮನೆಯಲ್ಲಿ ವಾಸವಿದ್ದವರು. ಜನತಾ ಕರ್ಪ್ಯೂ ಇದ್ದ ಕಾರಣ ಇಬ್ಬರು ಮನೆಯಿಂದ ಈಚೆ ಬಾರದೆ, ಊಟಕ್ಕೆ ಹೊಟೆಲ್ಗೂ ಹೋಗಲು ಭಯ ಪಟ್ಟುಕೊಂಡು ಮನೆಯೊಳಗಿ ಇದ್ದಾರೆ, ಒಂದು ವಾರದಿಂದ ಊಟವಿಲ್ಲದೆ ನೀರು ಸಿಗದೆ ಸೂರಪ್ಪ ಪೂರ್ಣ ಸುಸ್ತಾದಾರೆ, ತಮ್ಮ ನೀಲಕಂಠ ಜೀವ ಕೈಯಲ್ಲಿ ಹಿಡಿದುಕೊಂಡವರಂತೆ ಮೂಲೆ ಸೇರಿ ಬಿಡ್ಡಿದ್ದಾರೆ, ವಿಷಯ ತಿಳಿದ ಇಲ್ಲಿನ ಆಸ್ಪತ್ರೆ ಸಿಬ್ಬಂದಿ ತುರ್ತು ವಾಹನದಲ್ಲಿ ಇಬ್ಬರನ್ನೂ ಕರೆದುಕೊಂಡು ಹೋದರಾದರೂ ರಾತ್ರಿಯ ವೇಳೆಗೆ ವಾಪಸ್ ಕರೆದುಕೊಂಡು ಬಂದು ಮನೆಯಲ್ಲೇ ಮಲಗಿಸಿ ಹೋಗಿದ್ದಾರೆ, ಮಾರನೆ ಬೆಳಗ್ಗೆಯ ವೇಳೆಗೆ ಸೂರಪ್ಪ ಸಾವನ್ನಪ್ಪಿದ್ದಾರೆ. ನೀಲಕಂಠನನ್ನು ಅವರ ಹಿರಿಯಣ್ಣ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಇದು ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆದಿದ್ದಾರಿಂದ ಹಸಿವಿನಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಇನ್ನು ಹಳ್ಳಿಗಳಲ್ಲಿ ವಿಶೇಷವಾಗಿ ಕಾಲೋನಿಗಳಲ್ಲಿ ಅದೆಷ್ಟು ಜೀವಗಳು ಇಂತಹ ದುಸ್ಥಿತಿಯಲ್ಲಿ, ನರಕ ಯಾತನೆ ಪಟ್ಟು ಗುಟುಕು ಜೀವ ಬಿಟ್ಟವೋ ಲೆಕ್ಕಕ್ಕೆ ಸಿಕ್ಕಿಲ್ಲ.

ಬಾಕ್ಸ್ ದಿನ ನಿತ್ಯದ ಸಾಮಗ್ರಿಗಳ ಬೆಲೆ ಏರಿಕೆ:

      ಕರ್ಪ್ಯೂ ಲಾಕ್ ಡೌನ್ ನಂತಹ ಶೋಚನಿಯ ಸ್ಥಿತಿಯಲ್ಲಿ ದುಡಿಮೆ ಇಲ್ಲದೆ, ತುತ್ತಿನ ಚೀಲ ತುಂಬಿಸಿಕೊಳ್ಳಲು ದಿನಸಿ ಕೊಳ್ಳಲು, ತರಕಾರಿ ಕೊಳ್ಳಲು ಹೋದರೆ ಸಾಮಗ್ರಿಗಳ ಬೆಲೆ ಕೇಳಿಯೆ ಸುಸ್ತಾಗುವಂತಹ ಪರಿಸ್ಥಿತಿ ತಲೆ ದೋರಿದಿದೆ, ಯಾವ ಅಂಗಡಿಗಳಲ್ಲೂ ದರ ಪಟ್ಟಿಯ ಫಲಕಗಳಿಲ್ಲ ಅವರು ಹೇಳಿದ್ದೇ ದರ ಮಾಡಿದ್ದೇ ಲೆಕ್ಕ ಅವರು ಹೇಳಿದಷ್ಟು ಹಣ ನೀಡದಿದ್ದರೆ ಸಾಮಗ್ರಿಗಳೆ ಖಾಲಿ ಮಾಲು ಬಂದಿಲ್ಲ ಎಂಬ ಉಡಾಫೆಯ ಉತ್ತರಕ್ಕೆ ಜನ ಹೆದರಿ ಅವರು ಕೇಳಿದಷ್ಟು ಹಣ ನೀಡಿ ಸಾಮಗ್ರಿಗಳನ್ನು ತಂದು ಅಡುಗೆ ಮಾಡುವಂತಾಗಿದೆ. ಹೀಗಾಗಿ ಎಷ್ಟೋ ಜನ ದಿನದಲ್ಲಿ ಎರಡು ಹೊತ್ತು ಮಾತ್ರ ಆಹಾರ ಸೇವಿಸುತ್ತಿದ್ದಾರೆ.

      ಇನ್ನು ತರಕಾರಿ ಹಣ್ಣುಗಳಂತೂ ಬಡವರ ಪಾಲಿನ ಗಗನ ಕುಸುಮಗಳಾಗಿವೆ ಕೈಗೆಟುಕದ ದರ, ತರ್ಕಕಕ್ಕೆ ನಿಲುಕದ ಲೆಕ್ಕ, ವ್ಯಾಪರಿಗಳು ಹೇಳಿದಷ್ಟು ಕೊಟ್ಟರೆ ಮಾತ್ರ ಹಣ್ಣು ತರಕಾರಿ ಕೈ ಸೇರುತ್ತವೆ. ಇಲ್ಲವೆಂದರೆ ಎದುರಿಗೆ ಕಾಣತ್ತಿದ್ದರೂ ತರಕಾರಿ, ಹಣ್ಣುಗಳನ್ನು ನಮ್ಮಲ್ಲಿ ಇಲ್ಲವೆನ್ನುವ ವ್ಯಾಪಾರಿ ದ್ರೋಹ ನಡೆಯುತ್ತಿದೆ. ಈ ಬಗ್ಗೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯವರಾಗಲಿ, ಸ್ಥಳೀಯ ಆಡಳಿತವಾಗಲಿ ಗಮನ ಹರಿಸಿಲ್ಲ, ಆಡಳಿತ ವ್ಯವಸ್ಥೆಗಳು ಏನಿದ್ದರೂ ಪೊಲೀಸರನ್ನು ಬಿಟ್ಟು ಹೆದರಿಸುವ ಕೆಲಸದಲ್ಲಿ ಮುಂದಾಗಿವೆಯೆ ಹೊರತು, ಜನರ ತುತ್ತಿನ ಚೀಲದ ಬಗ್ಗೆ ಗಮನ ಹರಿಸದಿರುವುದು ವ್ಯವಸ್ಥೆಯಲ್ಲಿನ ಲೋಪವೆನಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap