ಚಿ.ನಾ.ಹಳ್ಳಿ : ಪುರಸಭೆ ಅನುದಾನದಲ್ಲಿ ಪೌರ ಕಾರ್ಮಿಕರಿಗೆ ವೇತನ

ಚಿಕ್ಕನಾಯಕನಹಳ್ಳಿ :

      ಪಟ್ಟಣದ ಪುರಸಭೆಯ ಗುತ್ತಿಗೆ ಪೌರ ಕಾರ್ಮಿಕರಿಗೆ ಪುರಸಭೆಯಿಂದ ಸಂಬಳ ನೀಡಲಾಗುವುದಿಲ್ಲ, ಸರ್ಕಾರ ಶೇ.75 ರಷ್ಟು ಅನುದಾನ ನೀಡಿದರೆ ಪುರಸಭಾ ನಿಧಿಯಿಂದ ಶೇ.25 ರಷ್ಟು ಹಣ ಸೇರಿಸಿ ಗುತ್ತಿಗೆ ಪೌರಕಾರ್ಮಿಕರಿಗೆ ಸಂಬಳ ನೀಡಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್ ಹೇಳಿದರು.

      ಪಟ್ಟಣದ ಪುರಸಭೆಯಲ್ಲಿ ಪುರಸಭಾಧ್ಯಕ್ಷೆ ಪುಷ್ಪಹನುಮಂತಯ್ಯನವರ ಅಧ್ಯಕ್ಷತೆಯಲ್ಲಿ ನಡೆಸ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

      ಜೂನ್, ಜುಲೈ, ಆಗಸ್ಟ್‍ವರೆಗೆ ಸಂಬಳ ನೀಡುತ್ತೇವೆ, ನಂತರ ಸಂಬಳ ನೀಡಲು ಸಾಧ್ಯವಿಲ್ಲ ಎಂದು ಮುಖ್ಯಾಧಿಕಾರಿ ಹೇಳಿದರು. ಈ ಬಗ್ಗೆ ಪೌರಾಡಳಿತ ಸಚಿವರನ್ನು ಭೇಟಿ ಮಾಡಲು ಸಭೆ ತೀರ್ಮಾನಿಸಿತು.

ಪುರಸಭೆಗೆ ಕತ್ತೆ ಕಾಯೋಕೆ  ಬಂದಿಲ್ಲ :

       ಪುರಸಭಾ ಸದಸ್ಯೆ ಉಮಾಪರಮೇಶ್ ಮಾತನಾಡಿ, ಆಗಸ್ಟ್ 14 ರಂದು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಿದ್ದೀರಿ, ಆದರೆ ಪುರಸಭಾ ಸದಸ್ಯರಿಗೆ ಆಹ್ವಾನ ಕೊಟ್ಟಿಲ್ಲ ನಾವು ಜನರಿಂದ ಆಯ್ಕೆಯಾಗಿದ್ದೇವೆ, ಪುರಸಭೆಗೆ ಕತ್ತೆ ಕಾಯೋಕೆ ಬಂದಿಲ್ಲ ಎಂದು ಸದಸ್ಯೆ ವ್ಯಂಗ್ಯವಾಡಿದರು. ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್ ಪ್ರತಿಕ್ರಿಯಿಸಿ ನಮ್ಮಿಂದ ತಪ್ಪಾಗಿದೆ ಕ್ಷಮಿಸಿ ಎಂದರು. ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ಕಂಡುಬರುತ್ತಿದ್ದು ಸ್ವಚ್ಛತೆಯ ಬಗ್ಗೆ ಪಟ್ಟಣದ ಎಲ್ಲಾ ವಾರ್ಡ್‍ನ ಸದಸ್ಯರು ಆರೋಗ್ಯ ನಿರೀಕ್ಷಕರಾದ ವಿದ್ಯಾರವರಿಗೆ ದೂರವಾಣಿ ಮಾಡಿದರೆ ಅವರು ಸರಿಯಾಗಿ ಸ್ಪಂದಿಸುವುದಿಲ್ಲ ಈ ಬಗ್ಗೆ ಇವರಿಗೆ ನೋಟಿಸ್ ನೀಡಿ ಎಂದು ಸದಸ್ಯರು ಒತ್ತಾಯಿಸಿದರು.

ಸರ್ಕಾರಿ ಅನುದಾನ :

      ಸದಸ್ಯರಿಗೆ ಮಾಹಿತಿ ಇಲ್ಲ : ಪಟ್ಟಣದ ಅಭಿವೃದ್ಧಿಯ ಬಗ್ಗೆ ಸರ್ಕಾರದ ಸುತ್ತೋಲೆಗಳು ತಕ್ಷಣವೇ ಸದಸ್ಯರ ಗಮನಕ್ಕೆ ತನ್ನಿ ಎಂದು ಸದಸ್ಯ ರಾಜಶೇಖರ್ ಸಭೆಯಲ್ಲಿ ಹೇಳಿದರು. ಸರ್ಕಾರ ಪುರಸಭೆಗೆ 2021-22 ರಲ್ಲಿ ಒಂದು ಕೋಟಿ ಐವತ್ತು ಲಕ್ಷ ರೂ ಬಿಡುಗಡೆ ಮಾಡಿದೆ. ಆದರೆ ಇದುವರೆಗೆ ಸಭೆಗೆ ತಿಳಿಸಿರುವುದೇ ಇಲ್ಲ ಎಂದು ಸದಸ್ಯ ಸಾಮಿಲ್ ಬಾಬು ಹೇಳಿದಾಗ ಅನುದಾನ ಬಂದಿದ್ದರೂ ಕ್ರಿಯಾಯೋಜನೆ ಮಾಡುವಾಗ ಸದಸ್ಯರ ಗಮನಕ್ಕೆ ತರಲಾಗುವುದು ಎಂದು ಮುಖ್ಯಾಧಿಕಾರಿ ಶ್ರೀನಿವಾಸ್ ಹೇಳಿದರು.

ಜನತೆ ಛೀ ಮಾರಿ : 

     ಸದಸ್ಯರಿಗೆ ಅವಮಾನ : ಪುರಸಭೆಯ ಕೆಲವು ನೌಕರರೇ ವಾಹನಗಳ ಬಿಡಿಭಾಗಗಳನ್ನು ಕದ್ದು ಮಾರಾಟ ಮಾಡುತ್ತಾರೆ ಇದರ ಬಗ್ಗೆ ತನಿಖೆ ನಡೆಸುವಂತೆ ಪುರಸಭಾ ಮುಖ್ಯಾಧಿಕಾರಿಗಳಿಗೆ ಸದಸ್ಯೆ ರೇಣುಕಾಗುರುಮೂರ್ತಿ ಆಗ್ರಹಿಸಿದರು. ಪುರಸಭಾ ನೌಕರರು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ಪಟ್ಟಣದ ಪುರಸಭಾ ಸದಸ್ಯರಿಗೆ ಜನತೆ ಛೀ ಮಾರಿ ಹಾಕುತ್ತಿದ್ದಾರೆ ಇದರಿಂದ ಸದಸ್ಯರಿಗೆ ಅವಮಾನವಾಗುತ್ತಿದೆ ಎಂದು ಸದಸ್ಯರು ಆರೋಪಿಸಿದರು.

ಪೌರ ಕಾರ್ಮಿಕರಿಗೆ ಟೆಂಡರ್ ಕರೆಯುತ್ತಿಲ್ಲ :

      ಈ ಸಂದರ್ಭದಲ್ಲಿ ಸಭೆಗೆ 22 ಮಂದಿ ಪೌರ ಕಾರ್ಮಿಕರು ಆಗಮಿಸಿ, ವಿದ್ಯುತ್ ಹಾಗೂ ನೀರು ಬಿಡುವವರಿಗೆ ಟೆಂಡರ್ ಕರೆದು ಸಂಬಳ ನೀಡುತ್ತೀರಾ ಆದರೆ ಪೌರ ಕಾರ್ಮಿಕರಿಗೆ ಏಕೆ ಟೆಂಡರ್ ಕರೆಯುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೆ, ನಾವು ಪೌರ ಕಾರ್ಮಿಕರು ಬೆಳಗಿನ ಜಾವ ಎದ್ದು ಊರನ್ನು ಸ್ವಚ್ಛಗೊಳಿಸುತ್ತೀವಿ ನಮಗೆ ಏಕೆ ತಾರತಮ್ಯ ಮಾಡುತ್ತಿದ್ದೀರ ಎಂದು ಪ್ರಶ್ನಿಸಿದರು.

     ಸಭೆಯಲ್ಲಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯರಾದ ಸಿ.ಬಸವರಾಜು, ಮಲ್ಲೇಶ್, ಕೆಂಗಲ್ ದಯಾನಂದ್, ಶ್ಯಾಮ್, ಮಂಜುನಾಥಗೌಡ, ರತ್ನಮ್ಮ ಕಳಸೇಗೌಡ, ಜಯಮ್ಮ, ಲಕ್ಷ್ಮೀ ಪಾಂಡುರಂಗಯ್ಯ, ಸಿ.ಡಿ.ಸುರೇಶ್, ನಾಗರಾಜು, ಪೂರ್ಣಿಮ, ನಾಮಿನಿ ಸದಸ್ಯರುಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap