ಕೆರೆಯಂಗಳದಲ್ಲಿ ಚಿರತೆಗಳು : ಭಯಭೀತರಾದ ಜನ

ಚಿಕ್ಕನಾಯಕನಹಳ್ಳಿ :

      ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಮಲಗೊಂಡನಹಳ್ಳಿ ಕೆರೆ ಅಂಗಳದ ಕುರುಚಲ ಗಿಡದಲ್ಲಿ 3 ಚಿರತೆಗಳು ಸೇರಿಕೊಂಡಿದ್ದು, ಮಧ್ಯಾಹ್ನದ ವೇಳೆಯಲ್ಲಿಯೇ ಕುರಿಗಳನ್ನು ಎತ್ತಿಕೊಂಡು ಹೋಗುತ್ತಿವೆ. ಇದರಿಂದ ಈ ಭಾಗದ ಜನ ಭಯಭೀತರಾಗಿದ್ದಾರೆ.

      ಮಲಗೊಂಡನಹಳ್ಳಿ ಕೆರೆಯಲ್ಲಿ ಹೆಚ್ಚು ಕುರುಚಲ ಗಿಡಗಳು ಬೆಳೆದಿದ್ದು, ಕಾಡು ಪ್ರಾಣಿಗಳ ವಾಸಸ್ಥಾನವಾಗಿದೆ. ಚಿರತೆ ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ಇಲ್ಲಿನ ಜನರು ರಾತ್ರಿ ವೇಳೆಯಲ್ಲಿ ತೋಟಗಳಿಗೆ ಹೋಗಲು ಭಯ ಪಡುತ್ತಿದ್ದಾರೆ. ನಿತ್ಯ ಒಂದಿಲ್ಲೊಂದು ಕುರಿಗಳ ಮೇಲೆ ದಾಳಿ ಮಾಡಿ ಕುರಿಗಳನ್ನು ಹೊತ್ತೊಯ್ದು ತಿಂದು ಹಾಕುತ್ತಿವೆ. ಈಗಾಗಲೇ 10 ರಿಂದ 15 ಕುರಿಗಳನ್ನು ತಿಂದಿರುವ ಚಿರತೆಗಳು ಮನುಷ್ಯರ ಮೇಲೂ ದಾಳಿ ಮಾಡುವ ಭೀತಿ ಇದೆ.

      ಚಿರತೆ ಹಾವಳಿ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ದೂರವಾಣಿ ಮುಖಾಂತರ ತಿಳಿಸಿದರೆ ಕುಪ್ಪೂರಿನಲ್ಲಿ ಕಬ್ಬಿಣದ ಬೋನು ಇದೆ ನೀವೇ ಬಂದು ತೆಗೆದುಕೊಂಡು ಹೋಗಿ ಎಂದು ಉತ್ತರಿಸುತ್ತಾರೆ, ಇದಕ್ಕೆ ತಗಲುವ ಖರ್ಚು ಯಾರು ಕೊಡುತ್ತಾರೆ ಎಂದು ರೈತರು ಪತ್ರಿಕೆ ಮುಂದೆ ಅಳಲು ತೋಡಿಕೊಂಡಿದ್ದಾರೆ.

      ಈ ಬಗ್ಗೆ ರೈತ ಪ್ರಕಾಶ್ ಮಾತನಾಡಿ, ಚಿರತೆ ಹಾವಳಿ ಬಗ್ಗೆ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆವಿಗೂ ಕ್ರಮ ಕೈಗೊಂಡಿಲ್ಲ, ಕುರಿಗಳನ್ನು ಸಾಕಿ ಜೀವನ ನಡೆಸುತ್ತಿರುವ ನಾವುಗಳು ಬೇರೆ ಆದಾಯವಿಲ್ಲದೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಆದಷ್ಟೂ ಬೇಗ ಸರ್ಕಾರ ಚಿರತೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ಆ ಭಾಗದ ಹಳ್ಳಿ ಜನ ಅರಣ್ಯಾಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link