ಚಿಕ್ಕನಾಯಕನಹಳ್ಳಿ :
ಗಣೇಶ ಪ್ರತಿಷ್ಠಾಪನೆಗೆ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದ ಕೆಲ ಅಂಗಡಿಗಳ ಮುಂದೆ ಗೌರಿ ಗಣೇಶ ಮೂರ್ತಿಗಳು ಮಾರಾಟಕ್ಕೆ ಬಂದಿವೆ.
ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿ ಗಣೇಶ ತಯಾರಿಕೆಯ ಕಲಾವಿದರು ವಿಧ-ವಿಧವಾದ ಗಣೇಶ ಮೂರ್ತಿಗಳ ಮಾರಾಟಕ್ಕೆ ಸಿದ್ದರಾಗಿದ್ದು ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಿದ್ದರಿಂದ ವ್ಯಾಪಾರದ ಮೂಲಕ ನಮ್ಮ ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಕೊಳ್ಳಬಹುದು ಎನ್ನುತ್ತಿದ್ದಾರೆ.
ಶೆಟ್ಟಿಕೆರೆ ಹೋಬಳಿಯ ಮಾಕಳ್ಳಿಯ ಭೈರಪ್ಪ ಹಾಗೂ ಶ್ರೀನಿವಾಸ್ ಗಣಪತಿ ಕಲಾವಿದರಾಗಿದ್ದು, ಪ್ರತಿ ವರ್ಷ ಮಣ್ಣಿನ ಗಣೇಶನ ಮೂರ್ತಿಗಳನ್ನು ಎರಡು ದಿನಗಳ ಮುಂಚೆಯೇ ಪಟ್ಟಣಕ್ಕೆ ತಂದು ಮಾರಾಟ ಮಾಡುತ್ತಾರೆ.
ಪ್ರತಿ ವರ್ಷ 1ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಗೌರಿ-ಗಣಪರ ಮೂರ್ತಿಗಳನ್ನು ತಯಾರಿಸುತ್ತೇವೆ, ಮಣ್ಣನ್ನು ಕೆರೆಗಳಿಂದ ತಂದು ಹದ ಮಾಡಿ ವಿಗ್ರಹವನ್ನು ಮಾಡುತ್ತೇವೆ, ಗಣೇಶಮೂರ್ತಿಗೆ ಹಾಕುವ ಬಣ್ಣದ ಬೆಲೆ ಹೆಚ್ಚಾಗಿದ್ದು, ಹಳ್ಳಿಗಳಿಂದ ತರಲು ಸಾಗಾಣಿಕೆ ವೆಚ್ಚ ಕೂಡ ಜಾಸ್ತಿಯಾಗಿದೆ. ಇದರಿಂದ ಈ ಬಾರಿ ಸ್ವಲ್ಪ ಗಣೇಶ ಮೂರ್ತಿಗಳ ಬೆಲೆ ಹೆಚ್ಚಾಗಲಿದೆ, ತಂದಿರುವ ಗಣೇಶ ಮೂರ್ತಿಗಳು ಮಾರಾಟವಾದರೆ ಲಾಭವಾಗುತ್ತದೆ, ಈ ಬಾರಿ ಕೊರೋನಾ ಇರುವುದರಿಂದ ಸರ್ಕಾರವೂ ಷರತ್ತು ಬದ್ಧ ಪ್ರತಿಷ್ಠಾಪನೆಗೆ ಅವಕಾಶ ಕೊಟ್ಟಿರುವುದರಿಂದ ಜನರು ಗಣೇಶಮೂರ್ತಿಗೆ ಪ್ರತಿಷ್ಠಾಪನೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಮಾರಾಟಗಾರ ಭೈರಪ್ಪ ತಿಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
