ಚಿಕ್ಕನಾಯಕನಹಳ್ಳಿ :

ತಾಲ್ಲೂಕಿನ ಸಿಂಗದಹಳ್ಳಿ ಕೆರೆಯಲ್ಲಿ ಗಣಪತಿ ವಿಸರ್ಜನೆ ಮಾಡಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕುಶಾಲ್ (17) ಮೃತ ದುರ್ದೈವಿ.
ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯನ್ನು ಭಾನುವಾರ ಯುವಕರ ತಂಡ ಅದೇ ಗ್ರಾಮದಲ್ಲಿನ ಸಿಂಗದಹಳ್ಳಿ ಕೆರೆಗೆ ವಿಸರ್ಜನೆ ಮಾಡಲು ತೆರಳಿದ್ದು, ಜೊತೆಗಿದ್ದ ಬರಶಿಡ್ಲಹಳ್ಳಿಯ ಕುಶಾಲ್ ಗಣೇಶ ಮೂರ್ತಿಯನ್ನು ವಿಸರ್ಜಿಸಲು ಹೋದ ಸಮಯದಲ್ಲಿ ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾನೆ. ಕುಶಾಲ್ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








