ಚಿಕ್ಕನಾಯಕನಹಳ್ಳಿ :
ಸೋಮವಾರ ಸುರಿದ ಮಳೆಯಿಂದಾಗಿ ಪಟ್ಟಣ ಹಾಗೂ ಮಸಾಲ್ತಿಗುಡ್ಲು ಗ್ರಾಮದಲ್ಲಿ ಮನೆಯ ಮೇಲೆ ತೆಂಗಿನ ಮರ ಬಿದ್ದಿರುವ ಘಟನೆ ನಡೆದಿದೆ.
ಪಟ್ಟಣದ 16ನೇ ವಾರ್ಡ್‍ನಲ್ಲಿ ವಾಸವಾಗಿರುವ ಜಾಕಿರ್‍ಹುಸೇನ್ ಎಂಬುವವರ ಮನೆಯು ಸೋಮವಾರ ಸುರಿದ ಮಳೆಯಿಂದಾಗಿ ಪೂರ್ಣ ಕುಸಿದಿದೆ.
ಮನೆಯ ಗೋಡೆ, ಸೂರು, ಕಿಟಕಿ, ಮರದ ತೀರು ಮುರಿದಿದೆ ಹಾಗೂ ಪಟ್ಟಣದ ಹೊರವಲಯದ ಮಸಾಲ್ತಿಗುಡ್ಲು ಗ್ರಾಮದ ಬಳಿ ವಾಸವಿರುವ ಲಕ್ಕಮ್ಮ ಎಂಬುವವರ ಮನೆ ಮಳೆಯಿಂದ ಕುಸಿದಿದೆ ಹಾಗೂ ಮನೆಯ ಮೇಲೆ ತೆಂಗಿನ ಮರ ಬಿದ್ದು ಅಪಾರ ನಷ್ಟ ಉಂಟಾಗಿದೆ. ಜಾಕಿರ್‍ಹುಸೇನ್ ಅವರ ಮನೆಯಲ್ಲಿ ಅವರ ಪತ್ನಿ ಮತ್ತು ಮಗ ಹಾಗೂ ಅವರ ವಿಕಲಚೇತನ ತಂದೆ ಇದ್ದು, ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಬೇಕಿದೆ ನೆರವಿನ ಹಸ್ತ :
ಸದ್ಯದ ಪರಿಸ್ಥಿತಿಯಲ್ಲಿ ಜಾಕಿರ್‍ಹುಸೇನ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಆರ್ಥಿಕ ಪರಿಸ್ಥಿತಿ ಕೈ ಮೀರಿರುವ ನಡುವೆ ಈ ದುರ್ಘಟನೆ ನಡೆದಿದೆ. ತಾಲ್ಲೂಕು ಆಡಳಿತ, ಪುರಸಭೆ ಅಥವಾ ಶಾಸಕರ ಪರಿಹಾರ ನಿಧಿಯಿಂದ ಇವರಿಗೆ ಸಹಾಯ ಮಾಡಿದರೆ ಜಾಕಿರ್ ಕುಟುಂಬಕ್ಕೆ ನೆರವಾಗುತ್ತದೆ ಎಂದು ತರಬೇನಹಳ್ಳಿಯ ಷಡಕ್ಷರಿ ಸಂಬಂಧ ಪಟ್ಟವರಿಗೆ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ