ಚಿಕ್ಕನಾಯಕನಹಳ್ಳಿ ಗ್ರಾಪಂ: ಶುರುವಾಯ್ತು ಸೋಲು-ಗೆಲುವಿನ ಲೆಕ್ಕಾಚಾರ

 ಚಿಕ್ಕನಾಯಕನಹಳ್ಳಿ : 

      ಗ್ರಾಮ ಪಂಚಾಯ್ತಿ ಮತದಾನ ಮುಗಿದ ನಂತರ ಹಳ್ಳಿಹಳ್ಳಿಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿವೆ. ಜೊತೆಗೆ ಪಂಥ ಕಟ್ಟಲು ಕುರಿ ಕೋಳಿಗಳನ್ನು ಬಳಸುತ್ತಿರುವುದು ಕಂಡುಬಂದಿದೆ.

      ತಾಲ್ಲೂಕಿನಾದ್ಯಂತ ಭಾನುವಾರ ನಡೆದ ಗ್ರಾ.ಪಂ.ಚುನಾವಣೆಯಲ್ಲಿ 127838 ಮಂದಿ ಮತ ಚಲಾಯಿಸಿದ್ದಾರೆ. ಗ್ರಾ.ಪಂ. ಚುನಾವಣೆಯಲ್ಲಿ ತಾಲ್ಲೂಕಿನಾದ್ಯಂತ 72165 ಪುರುಷ ಮತದಾರರಲ್ಲಿ 65017 ಮತ ಚಲಾಯಿಸಿದ್ದಾರೆ, 72217 ಮಹಿಳಾ ಮತದಾರರಲ್ಲಿ 62820 ಮತ ಚಲಾಯಿಸಿದ್ದಾರೆ, ಒಟ್ಟು 144383 ಮತದಾರರಲ್ಲಿ 127838 ಮಂದಿ ಮತಚಲಾಯಿಸಿದ್ದಾರೆ. ಪುರುಷರು ಶೇ. 90.09 ಮಹಿಳೆಯರು ಶೇ. 86.99ರಷ್ಟು ಮತ ಚಲಾಯಿಸಿದ್ದಾರೆ.

      ಪಂಚಾಯ್ತಿವಾರು ಶೇಕಡ ಮತದಾನ:

      ಯಳನಡು-ಶೇ. 89, ಹೊಯ್ಸಳಕಟ್ಟೆ-ಶೇ. 88, ದೊಡ್ಡೆಣ್ಣೆಗೆರೆ-ಶೇ. 84, ದುಗಡಿಹಳ್ಳಿ-ಶೇ. 91, ಕೋರಗೆರೆ-ಶೇ. 88, ಬೆಳಗುಲಿ-ಶೇ. 91, ಕುಪ್ಪೂರು-ಶೇ. 90, ರಾಮನಹಳ್ಳಿ-ಶೇ. 92, ಕಂದಿಕೆರೆ-ಶೇ. 90, ಜೆ.ಸಿ.ಪುರ-ಶೇ. 87, ದಸೂಡಿ-ಶೇ. 80, ಮುದ್ದೇನಹಳ್ಳಿ-ಶೇ. 90, ಮತಿಘಟ್ಟ-ಶೇ. 90, ಗೋಡೆಕೆರೆ-ಶೇ. 89, ತೀರ್ಥಪುರ-ಶೇ. 91, ಕೆಂಕೆರೆ-ಶೇ. 84, ಹೊನ್ನೆಬಾಗಿ-ಶೇ. 91, ಬರಗೂರು-ಶೇ. 93, ಚೌಳಕಟ್ಟೆ-ಶೇ. 91, ತಿಮ್ಮನಹಳ್ಳಿ-ಶೇ. 86, ರಾಮನಹಳ್ಳಿ-ಶೇ. 92, ಬರಗೂರು-ಶೇ. 93ರಷ್ಟು ಮತದಾನವಾಗಿದೆ.

      ತಾಲ್ಲೂಕಿನ 27 ಪಂಚಾಯಿತಿಗೆ ನಡೆದ ಚುನಾವಣೆಯ ಮತಪೆಟ್ಟಿಗೆಗಳು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭದ್ರವಾಗಿವೆ. ಮತದಾನ ಮುಗಿಯುತ್ತಿದ್ದಂತೆ ಹಳ್ಳಿ ಭಾಗಗಳಲ್ಲಿ ಇಂತಹ ಅಭ್ಯರ್ಥಿಯೇ ಗೆಲ್ಲುತ್ತಾರೆಂಬ ಚರ್ಚೆಗಳು ನಡೆಯುತ್ತಿವೆ. ಇದರಲ್ಲಿ ತಮ್ಮ ಪರವಾದ ಅಭ್ಯರ್ಥಿಗಳು ಗೆಲ್ಲುತ್ತಾರೆಂದು ಬೆಟ್ ಕಟ್ಟಲು ಕುರಿ, ಕೋಳಿಗಳನ್ನು ಪಂಥಕ್ಕೆ ಇಟ್ಟಿದ್ದಾರೆ.

      ಪಂಚಾಯ್ತಿ ಚುನಾವಣೆ ಮುಗಿದ ಸಂಜೆ 5ರ ನಂತರ ಹಳ್ಳಿಭಾಗಗಳಲ್ಲಿ ಚುನಾವಣೆ ಸಮೀಪದಲ್ಲೇ ಇದ್ದ ಹಲವರು ತಮ್ಮ ಅಭ್ಯರ್ಥಿಗಳೇ ಗೆಲ್ಲುತ್ತಾರೆ, ಇಂತಿಷ್ಟು ಮತಗಳ ಅಂತರದಲ್ಲೇ ಗೆಲುವು ಕಾಣುತ್ತಾರೆ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ತಿಂಗಳ 30ರಂದು ಮತ ಎಣಿಕೆ ನಡೆದು ಗ್ರಾಮ ಪಂಚಾಯ್ತಿಗಳ ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap