ಚಿಕ್ಕನಾಯಕನಹಳ್ಳಿ : ಗ್ರಾ.ಪಂ.ಚುನಾವಣೆಯಲ್ಲಿ ಸೊಸೆಯನ್ನು ಮಣಿಸಿದ ಅತ್ತೆ

 ಚಿಕ್ಕನಾಯಕನಹಳ್ಳಿ : 

      ಈ ಬಾರಿ ತಾಲೂಕಿನ ಗ್ರಾ.ಪಂ.ಚುನಾವಣೆಯಲ್ಲಿ ಅತ್ತೆ, ಸೊಸೆ ವಿರುದ್ದ ಜಯಗಳಿಸಿರುವುದು, ಎಂ.ಫಿಲ್ ಪದವೀಧರ ಗೆಲುವು ದಾಖಲಿಸಿರುವುದು, ಕೇವಲ ಎರಡು ಮತಗಳ ಅಂತರದ ಜಯ, ಎರಡನೇ ಬಾರಿ ಆಯ್ಕೆ ಹೀಗೆ ಹಲವು ಸಂಗತಿಗಳು ಫಲಿತಾಂಶದಲ್ಲಿ ಗಮನಸೆಳೆದಿವೆ.

      ತಾಲ್ಲೂಕಿನ ಹೊನ್ನೆಬಾಗಿ ಗ್ರಾಮ ಪಂಚಾಯಿತಿಯ ಹೊಸಹಳ್ಳಿ ಕ್ಷೇತ್ರದ ಸಾಮಾನ್ಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಅತ್ತೆ ಭಾರತಿ 178 ಮತ ಪಡೆದು ತನ್ನ ಸೊಸೆ ವಿದ್ಯಾ ವಿರುದ್ದ ಜಯಗಳಿಸಿದ್ದಾರೆ. ತಾಲ್ಲೂಕಿನ ಗಾಣದಾಳು ಪಂಚಾಯಿತಿಯ ಗುರುವಾಪುರದಲ್ಲಿ ಶ್ರೀನಿವಾಸ್ 217 ಮತ ಪಡೆದು ತನ್ನ ಪ್ರತಿಸ್ಪರ್ಧಿ ಶುಭಕರ್ ರವರಿಗಿಂತ 2 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.

      ಬೆಳಗುಲಿ ಗ್ರಾಮ ಪಂಚಾಯಿತಿ ತಾರೀಕಟ್ಟೆ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಫಿಲ್ ಅಭ್ಯರ್ಥಿ ಶಾಂತರಾಜುರವರನ್ನು ಮತದಾರರು ಕೈ ಹಿಡಿದಿದ್ದಾರೆ. ಹೊನ್ನೆಬಾಗಿ ಗ್ರಾಮ ಪಂಚಾಯ್ತಿಯ ಕಾಡೇನಹಳ್ಳಿ ಶಶಿಕಲಾ 226 ಮತ ಪಡೆದು ಎರಡನೇ ಬಾರಿ ಪಂಚಾಯ್ತಿ ಪ್ರವೇಶಿಸಿದ್ದಾರೆ.

      ಗಾಣದಾಳು ಪಂಚಾಯ್ತಿಯ ಕಾರೇಹಳ್ಳಿ ಪ್ರಕಾಶ್ 233 ಮತ, ಹೊಯ್ಸಳಕಟ್ಟೆ ಬ್ಲಾಕ್ -2 ಗಿರೀಶ್ 333 ಮತ, ರಘುವೀರ್-345 ಮತ, ಮತಿಘಟ್ಟ ಪಂಚಾಯ್ತಿಯ ಚೌಳಕಟ್ಟೆಯ ವಿಜಯ್ ಕುಮಾರ್ 365ಮತ, ಸುಮಾ 367 ಮತ ಪಡೆದಿದ್ದಾರೆ. ಸಿದ್ದನಕಟ್ಟೆಯ ಶ್ರೀಧರ 242 ಮತ, ಶೆಟ್ಟಿಕೆರೆ ಮಾದಿಹಳ್ಳಿಯ ಮಹಾಲಕ್ಷ್ಮೀ.ಎನ್ 185 ಮತ ಹಾಗೂ ಕಂದಿಕೆರೆ 1ನೇ ಬ್ಲಾಕ್ ನ ಪ್ರದೀಪ್ 331 ಮತ, ಮೇಲನಹಳ್ಳಿಯ ಶಶಿ 296 ಮತ, ಕುಪ್ಪೂರು ಪಂಚಾಯ್ತಿಯ ಬೇವಿನಹಳ್ಳಿ ಕ್ಷೇತ್ರದಲ್ಲಿ ದೇವರಾಜು ಗೆಲುವು ಸಾಧಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link