ಕಲಿಯುಗದ ಕಲ್ಪವೃಕ್ಷ – ತೆಂಗು ನಂಬಿಕೆಟ್ಟವರಿಲ್ಲ!!!

ತಿಪಟೂರು :

     ಇಂಗು-ತೆಂಗು ಇದ್ದರೆ ಮಂಗನು ಚೆನ್ನಾಗಿ ಅಡುಗೆ ಮಾಡುತ್ತದೆ ಎಂಬ ಗಾದೆಮಾತಿದೆ, ಅದರಲ್ಲೂ ತಿಪಟೂರು ತೆಂಗು ಎಂದ ಮೇಲೆ ರುಚಿಯನ್ನು ಕೇಳಬೇಕೆ ಇಂತಹ ವಿಶಿಷ್ಠವಾದ ತೆಂಗನ್ನು ಹೊಂದಿರುವ ನಾಡೇ ನಮ್ಮ ಕಲ್ಪತರು ನಾಡು ತಿಪಟೂರು.ತೆಂಗನ್ನು ದೇವಲೋಕದ ಕಲ್ಪವೃಕ್ಷಕ್ಕೆ ಹೋಲಿಸಲಾಗಿದ್ದು ಈ ತೆಂಗಿನ ಯಾವುದೇ ಒಂದು ಭಾಗವು ಉಪಯೋಕ್ಕೆ ಬಾರದೆ ಎಸೆವಂತಹುದ್ದೇ ಇಲ್ಲ ಆದ್ದರಿಂದಲೇ ಇದನ್ನು ಕಲ್ಪವೃಕ್ಷವೆಂದು ಕರೆಯುತ್ತಾರೆ.

   ಕಲ್ಪವೃಕ್ಷ ನಾಡಿನ ತುಮಕೂರು ಜಿಲ್ಲೆ ತಿಪಟೂರು ಕೊಬರಿಯ ರುಚಿ ಸವಿಯಲು ದೆಹಲಿಯ ಇಂಡಿಯಾ ಗೇಟ್ ಬಳಿ ತುದಿಗಾಲಲ್ಲಿ ನಿಂತಿರುತ್ತಾರೆ.ಹಾಗೆಯೇ ವಿಶ್ವದ ಇನ್ನಿತರೆ ದೇಶಗಳಿಂದಲೂ ಈ ಕೊಬರಿಯ ಮಹತ್ವ ಅರಿತವರು, ಪ್ರತಿದಿನ ಆರೋಗ್ಯಕ್ಕಾಗಿ. ಊಟಕ್ಕಾಗಿಯೂ ಬಳಸುತ್ತಾರೆ.

ವಿಶ್ವ ತೆಂಗಿನ ದಿನ:

     ವಿಶ್ವ ತೆಂಗಿನಕಾಯಿ ದಿನವನ್ನು ಸೆಪ್ಟೆಂಬರ್ 2, 2020 ರಂದು ಆಚರಿಸಲಾಗುತ್ತದೆ. ವಿಶ್ವ ತೆಂಗಿನ ದಿನವನ್ನು ಏಷ್ಯನ್ ಮತ್ತು ಪೆಸಿಫಿಕ್ ತೆಂಗಿನಕಾಯಿ ಸಮುದಾಯ ಮತ್ತು ಅದರ ಸದಸ್ಯ ರಾಷ್ಟ್ರಗಳು ಪ್ರತಿವರ್ಷ ಆಚರಿಸುತ್ತವೆ.

ವಿಶ್ವ ತೆಂಗಿನಕಾಯಿ ದಿನದ ಇತಿಹಾಸ :

      ವಿಶ್ವ ತೆಂಗಿನ ದಿನವನ್ನು 2009 ರಲ್ಲಿ ಸ್ಥಾಪಿಸಲಾಯಿತು. ಯುನೈಟೆಡ್ ನೇಷನ್ಸ್ ಎಕನಾಮಿಕ್ ಅಂಡ್ ಸೋಶಿಯಲ್ ಕಮಿಷನ್ ಫಾರ್ ಏಷ್ಯಾ ಮತ್ತು ಪೆಸಿಫಿಕ್ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಎ.ಪಿ.ಸಿ.ಸಿ ರಚನೆಯ ದಿನವನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ತೆಂಗಿನಕಾಯಿಗಳ ಪ್ರಾಮುಖ್ಯತೆ ಮತ್ತು ಉಪಯೋಗಗಳನ್ನು ಎತ್ತಿ ಹಿಡಿಯಲು ವಿಶ್ವ ತೆಂಗಿನ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ತೆಂಗಿನ ದಿನವು ನೀತಿಗಳನ್ನು ವ್ಯಾಖ್ಯಾನಿಸಲು ಮತ್ತು ಈ ವಲಯದಲ್ಲಿ ಕ್ರಿಯೆಯ ಯೋಜನೆಯನ್ನು ವ್ಯಕ್ತಪಡಿಸಲು ಒಂದು ಸಂದರ್ಭವಾಗಿದೆ.

     ಎ.ಪಿ.ಸಿ.ಸಿ ಎನ್ನುವುದು ಅಂತರ್-ಸರ್ಕಾರಿ ಸಂಸ್ಥೆಯಾಗಿದ್ದು, ಇದು ಏಷ್ಯನ್ ಪೆಸಿಫಿಕ್ ಪ್ರದೇಶದ ತೆಂಗಿನಕಾಯಿ ಅಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸಲು, ಸಂಘಟಿಸಲು ಮತ್ತು ಸಮನ್ವಯಗೊಳಿಸಲು 18 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಭಾರತ ಸೇರಿದಂತೆ ತೆಂಗಿನಕಾಯಿ ಬೆಳೆಯುವ ಹಲವಾರು ಪ್ರಮುಖ ದೇಶಗಳು ಎ.ಪಿ.ಸಿ.ಸಿ ಸದಸ್ಯರಾಗಿದ್ದಾರೆ. ಇದರ ಪ್ರಧಾನ ಕಛೇರಿ ಇಂಡೋನೇಷ್ಯಾದ ಜಕಾರ್ತಾದಲ್ಲಿದೆ.

   ಇಂತಹ ತೆಂಗುನ್ನು (ಕೊಬ್ಬರಿ) ತಿಪಟೂರು, ತೆಂಗು ಮತ್ತು ಕೊಬ್ಬರಿಗೆ ಹೆಸರು ವಾಸಿಯಾದ ಊರು, ಏಷ್ಯಾದಲ್ಲಿಯೇ ವಿಸ್ತಾರವಾದ ಕೊಬ್ಬರಿ ಮಾರುಕಟ್ಟೆಯಿದೆ. ಇನ್ನು ತಿಪಟೂರು ಸುತ್ತಮುತ್ತಲಿನ ತಾಲೂಕಿನ ಜನರು ಕೂಡ ಇಲ್ಲಿಗೆ ತಾವು ಬೆಳೆದ ಕೊಬ್ಬರಿಯನ್ನು ಇಲ್ಲಿಗೆ ತಂದು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಪ್ರತಿ ಶನಿವಾರ ಮತ್ತು ಬುಧವಾರ ಹರಾಜು ಪ್ರಕ್ರಿಯೆ ಇಲ್ಲಿ ನಡೆಯುತ್ತದೆ.

ಮೈಸೂರು ದಸರಾ ನಂಟು :

     ತಿಪಟೂರು ತೆಂಗಿನ ಕಾಯಿಎಂದರೆ ಎಲ್ಲಾ ಕಡೆಯೂ ಪ್ರಸಿದ್ದಿ ಪಡೆದಿದೆ. ಆದರೆ ಇನ್ನೂ ಒಂದೆಂಬಂತೆ ಹೊನ್ನವಳ್ಳಿಯಲ್ಲಿ ಸಿಗುವ ಗಂಗಾಪಾಣಿ ಎಂಗ ಎಳನೀರು ತಳಿಯು ತನ್ನ ವಿಶಿಷ್ಟವಾದ ಸ್ವಾದದಿಂದ ಇನ್ನು ಹೆಚ್ಚಿನ ಹೆಸರನ್ನು ಪಡೆದಿತ್ತು. ಈ ಎಳನೀರು ಮೈಸೂರು ಮಹಾರಾಜರಿಗೆ ತುಂಬಾ ಬಾಂದವ್ಯವಿದ್ದು ದಸರಾ ಸಮಯದಲ್ಲಿ ವಿಶೇಷವಾದ ಸ್ಥಾನವನ್ನು ಪಡೆದು ಪ್ರತಿಬಾರಿ ದಸರೆಗೆ ಹೋಗಿ ಅಲ್ಲಿಗೆ ಬರುವ ವಿದೇಶಿಯರಿಗೂ ತನ್ನ ಸ್ವಾದವನ್ನು ಉಣಬಡಿಸುತ್ತಿತ್ತು.

    ಆದರೆ ಈಗ ಹೊನ್ನವಳ್ಳಿಯಲ್ಲೇ ಹುಡುಕಿದರು ಈ ತಳಿಯುಸಿಗದೇ ಇರುವಷ್ಟರಮಟ್ಟಿಗೆ ನಶಿಸಿಹೋಗಿದ್ದು ಇಂತಹ ತಳಿಯನ್ನು ಉಳಿಸಿ ತಮ್ಮ ಮುಂದಿನ ಪೀಳಿಗೆಗೆ ತೆಂಗಿನ ಮಹತ್ವವನ್ನು ತಿಳಿಸಿಬೇಕಾಗಿದೆ.

      ಕೈಕೊಡುವ ಮಳೆ ಜೊತೆಗೆ ಕಾಡುತ್ತಿದೆ ನುಸಿ, ರಸಸೋರಿಕೆ ಯಂತಹ ರೋಗಗಳು : ಮೊದಲು 50 ತೆಂಗಿನ ಗಿಡ ಇದ್ದರೆ ಸಾಕು ಎಂದು ಹೆಣ್ಣುಕೊಡುವ ದಿನವೊಂದಿತ್ತು. ಆದರೆ ಯಾವಾಗ ತೆಂಗಿನ ಮರಕ್ಕೆ ನುಸಿರೋಗವು ಬಂದು ಕೂತಿತೋ ಆಗ ಪ್ರಾಂಭವಾದ ನುಸಿರೋಗ ಬಂದ ನಂತರ 500 ಗಿಡ ತೆಂಗಿದ್ದರೂ 50 ಗಿಡದಲ್ಲಿ ಬೀಳುತ್ತಿದ್ದ ಕಾಯಿಯ ಸಮಾನಕ್ಕೆ ಬಂದು ನಿಂತಿದ್ದು ವಿಪರ್ಯಾಸ. ಇನ್ನೂ 1990-2000ರ ಸುಮಾರಿನ ಆಡುಮಕ್ಕಳು ಶಾಲೆಗೆ ಹೋಗಬೇಕಾದರೆ ಈ ತೆಂಗಿನ ಕಾಯಿಗಳೇಕೆ ಹೀಗೆ ಬೀಳುತ್ತವೆ ಎತ್ತಿಹಾಕಲು ಸಾಕಾಗುತ್ತದೆಂದು ಎಂದುಕೊಂಡು ಮಕ್ಕಳು ತೆಂಗಿನ ಮರಕ್ಕೆ ಶಾಪ ಹಾಕುತ್ತಿದ್ದರು. ಈಗ ಅದೇ ಮಕ್ಕಳು ಬೆಳೆದು ದೊಡ್ಡವರಾಗಿ ಇನ್ನೊಂದೆರಡು ಕಾಯಿಬಿದ್ದರೆ ಮಕ್ಕಳ ವಿದ್ಯಾಭ್ಯಾಸ ಖರ್ಚಿಗಾದರು ಸಾಕು ಎನ್ನುವಷ್ಟರ ಮಟ್ಟಿಗೆ ಬಂದಿದ್ದಾರೆ ಇದರ ಮದ್ಯೆ ಮಳೆ ಮತ್ತು ರೋಗಗಳು ತೆಂಗು ಬೆಳೆಗಾರರನ್ನು ಕಾಡುತ್ತಿವೆ.

ಬೆಲೆ ಕುಸಿತದ ಬೀತಿ :

      ತೆಂಗು ಬೆಳಗಾರರು ಎಷ್ಟೇ ಸಮಸ್ಯೆಗಳು ಎದುರಿಸಿ ಮಾರುಕಟ್ಟೆಗೆ ತೆಂಗನ್ನು ತೆಗೆದುಕೊಂಡು ಬಂದರೆ ಬೆಲೆಕುಸಿತವೆಂಬ ಭೂತ ಕಾಡುತ್ತಿದೆ. ಈಗ ಎ.ಪಿ.ಎಂ.ಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸಹ ರೈತರ ಬೆನ್ನೆಲುಬನ್ನೇ ಮುರಿದು ಖಾಸಗೀಕರಣ ಗೊಳಿಸಿರುವುದರಿಂದ ತನ್ನ ಬೆಲೆಕೇಳುವಹಕ್ಕನು ಕಳೆದುಕೊಳ್ಳುವ ಬೀತಿ ಎದುರಾಗಿದೆ.

     ನೆಲ ಅಟ್ಟಗಳಿಂದ ಗುಣಮಟ್ಟವನ್ನು ಕುಸಿಯುತ್ತಿದೆಯೇ?: ತನ್ನ ವಿಶಿಷ್ಟ ರುಚಿಯಿಂದ ಮನೆಮಾತಾಗಿದ್ದ ತಿಪಟೂರು ಕೊಬ್ಬರಿ ಆಧುನಿಕತೆ ಬೆಳೆದಂತೆ ಮನೆಗಳಲ್ಲಿ ಅಟ್ಟವಿಲ್ಲದಂತೆ ಆರ್.ಸಿ.ಸಿ ಮನೆಗಳಾಗಿ ಮಾರ್ಪಾಡಾದವು ಕೊಬ್ಬರಿಯನ್ನು ಹಾಕಲು ಮನೆಯ ಹೊರಗೆ ನೆಟ್ಟಗಳು ನಿಮಾರ್ಣವಾದು ಹೀಗಾಗಿ ಸ್ವಾಭಾವಿಕವಾಗಿ ಅಟದಲ್ಲಿ ಸಮವಾದ ಉಷ್ಣೆತೆ ಇಲ್ಲದೇ ಹೋಗಿ ನೆಲಅಟ್ಟದಲ್ಲಿನ ವಾತಾವರಣಕ್ಕೆ ಬದಲಾಗಿ ತನ್ನ ಗುಣಮಟ್ಟ ಕಡಿಮೆಯಾಗಿ ಬೆಲೆಯು ಕಡಿಮೆಯಾಗುತ್ತಿದೆ. ಇನ್ನು ಕೊಳ್ಳುವವರು ಎಂದು ಗುಂಟ್ಟದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಇರುವುದರಿಂದ ಕೊಬ್ಬರಿ ಕೇಳುವುದರಿಂದ ಬೆಲೆ ಇಳಿಕೆ ಕಾಣುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ತೆಂಗಿನ ಅಭಿವೃದ್ಧಿಗೆ ಆತ್ಮ ನಿರ್ಭರ ಮತ್ತು ಜಿ.ಐ ಮಾರ್ಕ್‍ನಿಂದ ಪರಿಹಾರ ಸಾಧ್ಯವೆ?

    ಕೊರೊನಾ ಬಂದ ಮೇಲೆ ಕೇಂದ್ರದ ಮೋದಿ ಸರ್ಕಾರ ಆತ್ಮನಿರ್ಭರ ಭಾರತ ಮತ್ತು ಸ್ಥಳೀಯ ಉತ್ಪನ್ನಗಳನ್ನೇ ಬಳಸಿ ಸ್ಥಳಿಯತೆಯನ್ನು ಅಭಿವೃದ್ಧಿ ಪಡಿಸಿ ಎಂದು ಕರೆನೀಡಿದ್ದಾರೆ. ಈ ಮಾತನ್ನು ಕೇಳಿಯಾದರು ನಮ್ಮಲ್ಲೇ ಬೆಳೆಯುವ ತೆಂಗು ಮತ್ತು ತೆಂಗಿನ ಉತ್ಪನ್ನಗಳನ್ನು ಎಲ್ಲರೂ ಸ್ಥಳೀಯವಾಗಿಯೇ ಬಳಸತೊಡಗಿದರೆ ತೆಂಗಿನ ಬೆಲೆಯನ್ನು ಕೊಂಚಮಟ್ಟಿಗಾದರು ಏರಿಸಬಹುದು.

    ನಮ್ಮ ಜನರು ಬುದ್ದಿವಂತಿಕಯೆ ಏನೋ ತಿಳಿಯದಾಗಿದ್ದು ಸ್ಥಳೀಯವಾಗಿ ಸಿಗುವ ಕೊಬ್ಬರಿ ಎಣ್ಣೆಯನ್ನು ಬಿಟ್ಟು ಮಲ್ಟಿನ್ಯಾಷನಲ್ ಕಂಪನಿಯ ತೆಂಗಿನ ಎಣ್ಣೆಯನ್ನು ಬಳಸುತ್ತಿದ್ದಾರೆ. ಏಕೆಂದು ಕೇಳಿದರೆ ಸಿದ್ದ ಉತ್ತರದಂತೆ ಗುಣಮಟ್ಟವಿರುವುದಿಲ್ಲ, ಕಳಪೆ, ಕಲೆಬೆರಕೆಯಾಗಿರುತ್ತದೆ ಎನ್ನುತ್ತಾರೆ. ಆದರೆ ಕೆಲವರಿಗೆ ಗೊತ್ತಿಲ್ಲ ನಗರದ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿಯೂ ಸಹ ನೈಸರ್ಗಿಕವಾಗಿ ಮತ್ತು ಯಂತ್ರದಮೂಲಕ ನಮ್ಮ ಮುಂದೆಯೇ ನಾವು ತೆಗೆದುಕೊಂಡು ಹೋದ ಕಾಯಿ ಕೊಬ್ಬರಿಗಳಿಂದಲೇ ಎಣ್ಣೆಯನ್ನು ತೆಗೆದುಕೊಡುತ್ತಿದ್ದಾರೆ ಇದನ್ನು ಬಳಸಿಕೊಂಡು ನಾವು ತೆಂಗು ಬೆಳೆಗಾರರನ್ನು ರಕ್ಷಿಸಬಹುದಾಗಿದೆ.

ಜಿ.ಐ.ಮಾರ್ಕ್ :

       ನಿಗದಿತ ಸ್ಥಳ ಸಂಬಂಧವನ್ನು ಬೆಸೆದುಕೊಂಡ ಅಥವಾ ಆ ಮೂಲಕ ಕೆಲವು ಉತ್ಪನ್ನಗಳ ಗುಣಮಟ್ಟ ಅಥವಾ ಲಕ್ಷಣಗಳು ನಿರ್ಧರಿತವಾಗುವ ಆ ಉತ್ಪನ್ನಗಳನ್ನು ಜನಸಾಮಾನ್ಯರು ಸದಾ ಅವುಗಳೊಂದಿಗೆ ಗುರುತಿಸಿ ಬಳಸುತ್ತಿರುವರು. ಅಂತಹ ಸ್ಥಳನಾಮ ಬಳಸುವಿಕೆಯನ್ನು ನಾವು ಭೌಗೋಳಿಕ ಸಂಕೇತಗಳೆನ್ನುತ್ತೇವೆ (ಉeogಡಿಚಿಠಿhiಛಿಚಿಟ Iಟಿಜiಛಿಚಿಣioಟಿs). ಭಾರತದಲ್ಲಿ ಅತಿ ಸಾಧಾರಣವಾಗಿ ಡಾರ್ಜಲಿಂಗ್ ಚಹಾವನ್ನು ಉದಾಹಣೆಯಾಗಿ ನೀಡುವರು.

       ಜಾಗತಿಕ ಮಟ್ಟದಲ್ಲಿ  ವೈನ್ ಹೆಸರುವಾಸಿ ಜಿ.ಐ ಯಾಗಿರುವುದು. ಸಾರ್ವಜನಿಕರನ್ನು ದಾರಿತಪ್ಪಿಸುವಿಕೆ ಮತ್ತು ಅನುಚಿತ ಪೈಪೋಟಿಯನ್ನು ನಿವಾರಿಸುವ ಸಲುವಾಗಿ ಡಬ್ಲೂಟಿಒ ಸದಸ್ಯರು ಟ್ರಿಪ್ಸ್ ಒಡಂಬಡಿಕೆ ಮಾಡಿಕೊಂಡು ಜಿ.ಐಗಳಿಗೆ ಕೆಲವು ಹಂತದ ರಕ್ಷಣೆಗಳನ್ನು ನೀಡಲು ಮುಂದಾಗಿರುವರು. ಉತ್ಪನ್ನಗಳ ವಿಶೇಷ ಗುಣಮಟ್ಟ ಅಥವಾ ಲಕ್ಷಣಗಳಿಗೆ ಭೌಗೋಳಿಕ ಮೂಲದೊಂದಿಗೆ ಸಂಬಂಧ ಕಲ್ಪಸಿಕೊಡುವುದರೊಂದಿಗೆ ಮಾರುಕಟ್ಟೆಯಲ್ಲಿ ಗಣ್ಯಸ್ಥಾನ ಗಳಿಸಿ ಹೊಸದೊಂದು ಆಯಾಮ ಕಂಡುಕೊಳ್ಳಲು ‘ಜಿಐ’ ರಕ್ಷಣೆಯು ಎಡೆ ಮಾಡಿಕೊಟ್ಟಿದೆ. ಕೃಷಿ ಉತ್ಪನ್ನ, ಜವಳಿ, ಕರಕುಶಲ ಮುಂತಾದ ಸುಮಾರು 100ಕ್ಕೂ ಹೆಚ್ಚು ನೋಂದಾಯಿತ ಭೌಗೋಳಿಕ ಸಂಕೇತಗಳು ಇಂದು ಭಾರತದಲ್ಲಿದೆ.

      ಈ ನಿಟ್ಟಿನಲ್ಲಿ ಪ್ರಪಂಚದಾದ್ಯಂತ ಪ್ರಸಿದ್ದಿ ಪಡೆದಿರುವ ತಿಪಟೂರು ಕೊಬ್ಬರಿಯೆಂದೇ ಖ್ಯಾತವಾಗಿರುವ ನಮ್ಮ ಹೆಮ್ಮೆಯ ಉತ್ಪನ್ನವನ್ನು ಜಿಐಗಾಗಿ ನೋಂದಾಯಿಸಲು ತುರ್ತು ಕೆಲಸವಾಗಬೇಕಾಗಿದೆ. ಆದುದರಿಂದ ಕಾಳಜಿಯುಳ್ಳ ಆಸಕ್ತ ವ್ಯಕ್ತಿಗಳು, ಸಂಸ್ಥೆಗಳು, ಎನ್.ಜಿ.ಓ ಗಳು ತಮ್ಮ ತಿಳಿವು, ಪರಿಣಿತಿ, ಅನುಭವ, ದಾಖಲೆ ಹಾಗು ಉತ್ಪನ್ನದ ಕುರಿತಾದ ತಾಂತ್ರಿಕ ವಿವರಗಳನ್ನು ಹಂಚಿಕೊಳ್ಳಲು ಶ್ರಮ ಮತ್ತು ಸಮಯ ವಿನಿಯೋಗಿಸಿದರೆ ನಾವೆಲ್ಲರೂ ಸೇರಿ ನಮ್ಮ ಪೂರ್ವಜರ ಸಾಂಪ್ರದಾಯಿಕ ವಿಧಾನದಿಂದ ತಯಾರಿಸಿದ ಕೊಬ್ಬರಿಗೆ, ಅನುಚಿತ ಪೈಪೋಟಿಯನ್ನು ತಪ್ಪಿಸಿ ದೇಶೀಯ ಹಾಗು ವಿದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಳ್ಳಲು ಪಣತೊಡೋಣ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link