ರಾಜ್ಯದಲ್ಲಿ ಬಿಗಿಗೊಂಡ ನೀತಿ ಸಂಹಿತೆ ಪರಿಪಾಲನೆ

ಬೆಂಗಳೂರು :

    ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಪರಿಪಾಲನೆ ಬಿಗಿಗೊಂಡಿದ್ದು, ಚುನಾವಣಾ ಆಯೋಗದ ಅಕ್ರಮ ತಡೆ ಕಣ್ಗಾವಲು ಪಡೆಗಳ ಕಠಿಣ ಕ್ರಮಗಳ ಪರಿಣಾಮ ನಗ, ನಗದು, ಉಡುಗೊರೆಗಳನ್ನು ವಶಪಡಿಸಿಕೊಳ್ಳುವ ಕಾರ್ಯ ತೀವ್ರಗೊಂಡಿದೆ.

    ಅಕ್ರಮಗಳ ತಡೆಗೆ ಹದ್ದಿನ ಕಣ್ಣಿಟ್ಟಿದ್ದು, ರಾಜ್ಯದೆಲ್ಲೆಡೆ ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಿ, ವಾಹನಗಳ ತಪಾಸಣೆ ಬಿಗಿಗೊಳಿಸಿ, ನಿತ್ಯವೂ ದಾಖಲೆಗಳಿಲ್ಲದ ಹಣ ವಶ, ಮತದಾರರಿಗೆ ನೀಡಲು ಸಂಗ್ರಹಿಸಿಟ್ಟಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದು. ಕೊಪ್ಪಳ, ಉತ್ತರ ಕನ್ನಡ, ತುಮಕೂರು ಜಿಲ್ಲೆಗಳಲ್ಲಿ ಬೆಳ್ಳಿಯ ವಸ್ತುಗಳು, ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ರಾಷ್ಟಿçÃಯ ಹೆದ್ದಾರಿ 66ರ ಸರ್ಪನಕಟ್ಟೆ ಚೆಕ್‌ಪೋಸ್ಟ್ ಬಳಿ ದಾಖಲೆಗಳಿಲ್ಲದ 14 ಲಕ್ಷಕ್ಕೂ ಹೆಚ್ಚು ಹಣವನ್ನು ಜಪ್ತಿ ಮಾಡಲಾಗಿದೆ. ಉಡುಪಿಯಿಂದ ಭಟ್ಕಳಕ್ಕೆ ತೆರಳುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಕಾರಿನಲ್ಲಿ 14 ಲಕ್ಷ ರೂ ಸಿಕ್ಕಿದೆ. ಈ ಸಂಬAಧ ಭಟ್ಕಳ ಮೂಲಕ ಯಶವಂತ್‌ಗೊAಡ, ಹೊನ್ನಾವರದ ಶ್ರೀನಿವಾಸ್‌ಗೌಡ, ರಘುನಾಯಕ ಎಂಬುವರನ್ನು ಬಂಧಿಸಿ ಭಟ್ಕಳ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

   ಕೊಪ್ಪಳದಲ್ಲಿ ಪೊಲೀಸರು ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಬೆಳ್ಳಿ ಮತ್ತು ಹಣವನ್ನು ತರುತ್ತಿದ್ದ ಇಬ್ಬರು ಉದ್ಯಮಿಗಳನ್ನು ವಶಕ್ಕೆ ಪಡೆದು ಅವರಿಂದ 9.67 ಲಕ್ಷ ರೂ. ಮೌಲ್ಯದ ಬೆಳ್ಳಿವಸ್ತು ಹಾಗೂ 1.10 ಲಕ್ಷ ಮೌಲ್ಯದ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ಉದ್ಯಮಿಗಳಾದ ಕೈಲಾಸ್‌ಜೈನ್ ಮತ್ತು ದೇವಿಚಂದ್ರ ಜೈನ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ನಂತರ ಬಿಡುಗಡೆ ಮಾಡಿದ್ದಾರೆ.

    ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಬಂಡಿಹಳ್ಳಿ ಚೆಕ್‌ಪೋಸ್ಟ್ನಲ್ಲಿ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ 6.84 ಲಕ್ಷ ರೂ.ಮೌಲ್ಯದ ಎಲ್‌ಇಡಿ ಬಲ್ಬ್ಗಳನ್ನು ಚುನಾವಣಾ ಸಂಚಾರಿ ಜಾಗೃತ ದಳದವರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ತಿಪಟೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಬೆಂಗಳೂರಿನಲ್ಲೂ ಜಾಗೃತ ದಳದವರು ಕಾರ್ಯಾಚರಣೆ ನಡೆಸಿ ದಾಸರಹಳ್ಳಿಯ ಜೆಡಿಎಸ್ ಅಭ್ಯರ್ಥಿ ಹಾಲಿ ಶಾಸಕ ಆರ್. ಮಂಜುನಾಥ್ ಅವರ ಭಾವಚಿತ್ರವಿರುವ 8.5 ಲಕ್ಷ ಮೌಲ್ಯದ 612 ಪ್ರೆಷರ್ ಕುಕ್ಕರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುಕ್ಕರ್‌ಗಳನ್ನು ಮಿನಿ ಟ್ರಕ್‌ವೊಂದರಲ್ಲಿ ಸಾಗಿಸಲಾಗುತ್ತಿತ್ತು, ಹಾಗೆಯೇ, ಬಿಟಿಎಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್‌ಶೆಟ್ಟಿ ಅವರ ಮನೆಯಿಂದ ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್ ಮತ್ತು ಇನ್ನಿತರ ಸಾಮಗ್ರಿಗಳನ್ನು ಜಿಎಸ್‌ಟಿ ತಂಡ ವಶಪಡಿಸಿಕೊಂಡಿತ್ತು. ಈ ಸಂಬAಧ ಚುನಾವಣಾಧಿಕಾರಿ ವರಲಕ್ಷ್ಮಿ ಮ್ಮ ಎಂಬುವರು ನೀಡಿದ ದೂರಿನ ಮೇರೆಗೆ ಕೋರಮಂಗಲ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap