ಕೋಲಾರ:
ಜಿಲ್ಲಾಡಳಿತದಿಂದ ಟವರ್ಗೆ ಪೂರ್ತಿ ಬಳಿ ಬಣ್ಣ ಹೊಡೆಯಲಾಗಿದೆ. ಟವರ್ಗೆ ತ್ರಿವರ್ಣ ಧ್ವಜದ ಬಣ್ಣ ಹೊಡೆದು ನಂತರ ಟವರ್ವ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ. ಸ್ಥಳಿಯ ಮುಸ್ಲಿಂ ಮುಖಂಡರ ಸಮ್ಮುಖದಲ್ಲಿ ಕಾರ್ಯ ನಡೆದಿದ್ದು, ಸ್ಥಳದಲ್ಲಿ ಜಿಲ್ಲಾಧಿಕಾರಿ ವೆಂಕಟರಾಜಾ ಎಸ್ಪಿ, ಡಿ.ದೇವರಾಜ್, ನಗರಸಭೆ ಆಯುಕ್ತ ಪ್ರಸಾದ್ ಮೊಕ್ಕಂ ಹೂಡಿದ್ದರು.
ಸದ್ಯ ಕ್ಲಾಕ್ ಟವರ್ ವೃತ್ತದಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಟವರ್ ಸುತ್ತ ಪೊಲೀಸರು ನಾಕಬಂಧಿ ಹಾಕಿದ್ದಾರೆ. ಇದೇ ವೇಳೆ ಕ್ಲಾಕ್ ಟವರ್ನಲ್ಲಿ ಬಿಗಿವಿನ ವಾತಾವರಣವಿದ್ದು, ಸ್ಥಳದಲ್ಲಿ ನೂರಾರು ಯುವಕರು ಜಮಾಯಿಸಿದ್ದರು. ಟವರ್ ಬಣ್ಣ ಬದಲಾಗುತ್ತಿದ್ದಂತೆ ಜನರ ಜಮಾವಣೆ ಹೆಚ್ಚಾಗುತ್ತಿದ್ದು, ಪೊಲೀಸರು ಜನರನ್ನು ಚದುರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
