60 ಸಹಚರರ ಜೊತೆ ಮೋಸ್ಟ್‌ ವಾಂಟೆಡ್‌ ನಕ್ಸಲ್‌ ಕಮಾಂಡರ್‌ ಶರಣಾಗತಿ

ಮುಂಬೈ: 

    ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ಮಲ್ಲೋಜುಲ ವೇಣುಗೋಪಾಲ್ ರಾವ್  ಅಲಿಯಾಸ್ ಭೂಪತಿ , ತನ್ನ 60 ಸಹಚರರೊಂದಿಗೆ ಮಂಗಳವಾರ ಗಡಚಿರೋಲಿ ಪೊಲೀಸರಿಗೆ ಶರಣಾಗಿದ್ದಾರೆ. ಈ ಶರಣಾಗತಿ ಪ್ರಕ್ರಿಯೆಯು ಮಹಾರಾಷ್ಟ್ರ ಫಡ್ನವೀಸ್ ಮುಖ್ಯಮಂತ್ರಿ ದೇವೇಂದ್ರ ಅವರ ಸಮ್ಮುಖದಲ್ಲಿ ನಡೆದಿದ್ದು, ಇದು ನಕ್ಸಲ್ ವಿರುದ್ಧದ ಹೋರಾಟದಲ್ಲಿ ಮಹತ್ವದ ಸಾಧನೆ ಎಂದೆನಿಸಿದೆ.

    ಈ ಕುರಿತು ಪ್ರತಿಕ್ರಿಸಿರುವ ಸಿಎಂ ಫಡ್ನವೀಸ್, “ಇದು ಮಹಾರಾಷ್ಟ್ರದ  ಇತಿಹಾಸದಲ್ಲಿ ಐತಿಹಾಸಿಕ ದಿನ. ಇಂದು ನಕ್ಸಲ್ ಕಮಾಂಡರ್ ಮಲ್ಲೋಜುಲ ವೇಣುಗೋಪಾಲ್ ರಾವ್ ತನ್ನ ಸಹಚರರೊಂದಿಗೆ ಶರಣಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಮ್ಮ ಪೊಲೀಸ್ ಇಲಾಖೆ ಅವರೊಂದಿಗೆ ಮಾತುಕತೆ ನಡೆಸಿ, ಮುಖ್ಯವಾಹಿನಿಗೆ ಮರಳುವಂತೆ ಮನವಿ ಮಾಡುತ್ತಿತ್ತು ಎಂದಿದ್ದಾರೆ. ಅಲ್ಲದೇ, “ನಕ್ಸಲ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಭೂಪತಿಗೆ ಸ್ಪಷ್ಟಪಡಿಸಲಾಗಿತ್ತು ಮತ್ತು ಆತನಿಗೆ ಶರಣಾಗಲು ಅವಕಾಶ ನೀಡಲಾಗಿತ್ತು. ಈ ಶರಣಾಗತಿಯೊಂದೆಗೆ ರಾಜ್ಯದಲ್ಲಿದ್ದ ನಕ್ಸಲಿಸಂನ ಬೆನ್ನೆಲಬನ್ನು ಮುರಿದಿದ್ದೇವೆ,” ಎಂದು ಅವರು ತಿಳಿಸಿದ್ದಾರೆ. 

   ಇನ್ನೂ ಈ ಕುರಿತು ಮುಖ್ಯಮಂತ್ರಿ ಕಚೇರಿ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ನಕ್ಸಲರು ಶರಣಾದ ಪೋಟೋ ಹಂಚಿಕೊಂಡಿದ್ದು, “ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸಮ್ಮುಖದಲ್ಲಿ 61 ಹಿರಿಯ ಮಾವೋವಾದಿ ಸದಸ್ಯರು ಶರಣಾಗಿದ್ದು, ಒಟ್ಟು ₹5,24,00,000 ಬಹುಮಾನವನ್ನು ಸ್ವೀಕರಿಸಿದ್ದಾರೆ” ಎಂದು ಬರೆಯಲಾಗಿದೆ. ಅಲ್ಲದೇ ರಾಜ್ಯ ಸರ್ಕಾರ ಗಡಚಿರೋಲಿ ಪೊಲೀಸರ ಸಾಧನೆಯನ್ನು ಗುರುತಿಸಿ, ₹1 ಕೋಟಿಯ ಬಹುಮಾನವನ್ನೂ ಘೋಷಿಸಿದೆ.

   ರಾಷ್ಟ್ರ ಮಟ್ಟದಲ್ಲಿ ನಕ್ಸಲಿಸಂ ನಿರ್ಮೂಲನೆಗಾಗಿ ಕೇಂದ್ರ ಸರ್ಕಾರ  ಅಭಿಯಾನ ಕೈಗೊಂಡಿರುವ ಮಧ್ಯೆಯೇ ಈ ಶರಣಾಗತಿ ಬಂದಿದೆ. ಇತ್ತೀಚಿಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ , “ಮಾರ್ಚ್ 31, 2026ರೊಳಗೆ ಭಾರತ  ನಕ್ಸಲಿಸಂ ನಿರ್ಮೂಲನೆ ಮಾಡುವ ಹಾದಿಯಲ್ಲಿದೆ,” ಎಂದು ಘೋಷಿಸಿದ್ದರು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತಾ ಕಾರ್ಯಾಚರಣೆ ಮತ್ತು ಪುನರ್ವಸತಿ ಕಾರ್ಯಕ್ರಮಗಳನ್ನು ಒಟ್ಟಿಗೆ ಜಾರಿಗೊಳಿಸಿ, ಶರಣಾಗತಿಯನ್ನು ಉತ್ತೇಜಿಸುವ ಕಾರ್ಯ ನಡೆಯುತ್ತಿದೆ.

   2014 ರಿಂದ 2025ರ ಅವಧಿಯಲ್ಲಿ ನಕ್ಸಲ್ ಬಾಧಿತ ಜಿಲ್ಲೆಗಳ ಸಂಖ್ಯೆ 126ರಿಂದ 18ಕ್ಕೆ ಇಳಿದಿದ್ದು, ಹಿಂಸಾತ್ಮಕ ಪ್ರಕರಣಗಳ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. 2024–25ರಲ್ಲೇ 300ಕ್ಕೂ ಹೆಚ್ಚು ನಕ್ಸಲರನ್ನು ಮಟ್ಟ ಹಾಕಲಾಗಿದ್ದು, ನೂರಾರು ಜನ ನಕ್ಸಲರು ಶರಣಾಗಿದ್ದಾರೆ.

   ಇನ್ನು ಕಳೆದ ವಾರವಷ್ಟೇ ಕೇಂದ್ರ ಸರ್ಕಾರದ ನಕ್ಸಲ್‌ ನಿಗ್ರಹ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿತ್ತು. ಛತ್ತೀಸ್‌ಗಢದ ನಕ್ಸಲ್ ಪೀಡಿತ ಬಿಜಾಪುರ ಪ್ರದೇಶದಲ್ಲಿ103 ಸಕ್ರಿಯ ನಕ್ಸಲರು ಏಕಕಾಲಕ್ಕೆ ಪೊಲೀಸರಿಗೆ ಶರಣಾಗಿದ್ದರು. ಪೊಲೀಸ್ ಎನ್‌ಕೌಂಟರ್ ಭೀತಿಯ ಹಿನ್ನೆಲೆ ಆರ್‌ಪಿಸಿ ಮಾವೋವಾದಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದ 22 ಮಹಿಳೆಯರು ಸೇರಿ 103 ಮಂದಿ ಮಾವೋದಿಗಳ ಗುಂಪು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದರು. ಇದು ಭದ್ರತಾ ಪಡೆಗಳ ನಿರಂತರ ನಕ್ಸಲ್‌ ನಿಗ್ರಹ ಕಾರ್ಯಾಚರಣೆಗೆ ದೊರೆತ ಮಹತ್ವದ ಯಶಸ್ಸು ಆಗಿತ್ತು. ಇದೀಗ ಮತ್ತೇ ಹಿರಿಯ ನಾಯಕ ಮಲ್ಲೋಜುಲ ವೇಣುಗೋಪಾಲ್ ಜೊತೆ 60 ಜನರ ಗುಂಪು ಸಮಾಜದ ಮುಖ್ಯವಾಹಿನಿಗೆ ಬಂದಿದ್ದು, ಮತ್ತೊಂದು ವಿಜಯ ಸಿಕ್ಕಿದಂತಾಗಿದೆ.

Recent Articles

spot_img

Related Stories

Share via
Copy link