ಕಾಮಗಾರಿಯಲ್ಲಿ ಅವ್ಯವಹಾರ : ಲೋಕಾಯುಕ್ತಾಗೆ ದೂರು : ಎಂಟಿಕೆ

ತುರುವೇಕೆರೆ:

     ತಾಲೂಕಿನಲ್ಲಿ ನೂರಾರು ಕೋಟಿ ಕಳಪೆ ಕಾಮಗಾರಿಗಳ ಜೊತಗೆ ಕಾಮಗಾರಿ ಮಾಡದೇ ಕೋಟಿಗಟ್ಟಲೇ ಹಣ ಲೂಟಿಯಾಗಿದೆ ಕೂಡಲೇ ಲೋಕಾಯುಕ್ತಕ್ಕೆ ದೂರು ನೀಡಿ ತನಿಖೆ ಮಾಡುವಂತೆ ಒತ್ತಾಯಿಸಲಾಗುವುದು ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಲೋಕಪಯೋಗಿ ಇಲಾಕೆಯಲ್ಲಿನ ೧೦ ಕೋಟಿ ಎ.ಆರ್ ಅನುದಾನದ ಕಾಮಗಾರಿ ಮಾಡದೇ ಬಿಲ್ ಪಡೆಯಲಾಗಿದೆ. ತಾಲೂಕಿನ ಹಲವು ರಸ್ತೆಗಳ ಗುಂಡಿ ಮುಚ್ಚಲು ಅನುದಾನ ಬಿಡುಗಣೆಯಾದರೂ ಯಾವುದೇ ರಸ್ತೆಗಳ ಗುಂಡಿ ಮುಚ್ಚದೆ ಬಿಲ್ ಪಡೆದಿದ್ದಾರೆ.

    ಬೋಚಿಹಳ್ಳಿಯಿಂದ ದೆಬ್ಬೇಘಟ್ಟ ರಸ್ತೆ ಕಾಮಗಾರಿ ಕಳಪೆಯಾಗಿದ್ದು ರಸ್ತೆ ಪಕ್ಕದಲ್ಲಿ ಗ್ರಾವೇಲ್ ನಿಂದ ಮುಚ್ಚಬೇಕಾಗಿದ್ದು ರಸ್ತೆ ಪಕ್ಕದ ಚರಂಡಿಯಲ್ಲಿ ಮಣ್ಣು ತೆಗೆದು ರಸ್ತ ಪಕ್ಕಕ್ಕೆ ಹಾಕಿ ಸಾವಿರಾರು ಲೋಡ್ ಗ್ರಾವೇಲ್ ಮಣ್ಣು ಹೊಡೆಯಲಾಗಿದೆ ಎಂದು ಬಿಲ್ ಮಾಡಿಕೊಂಡಿದ್ದಾರೆ. ವೆಡ್   ಸರಿಯಾಗಿ ಹಾಕದೇ ರೋಲ್ ಮಾಡದೆ ಸಂಪೂರ್ಣ ಕಳಪೆ ಕಾಮಗಾರಿ ಮಾಡಲಾಗುತ್ತಿದೆ ಈ ವರ್ಷದಂತೆ ಮಳೆಯಾದರೆ ಕೇವಲ ೧ ತಿಂಗಳಲ್ಲಿ ಕಿತ್ತು ಹೋಗಲಿದೆ. ಈಗಾಘಲೇ ತಾಲೂಕಿನ ಶ್ರೀರಾಮಪುರ ರಸ್ತೆ, ಗೊಟ್ಟಿಕೆರೆ ರಸ್ತೆ, ತೊರೆಮಾವಿನಹಳ್ಳಿ ರಸ್ತೆ, ಮಾವಿನಹಳ್ಳಿ ರಸ್ತೆಗಳ ಸ್ಥಿತಿಗಳನ್ನು ಜನರು ನೋಡಿದ್ದಾರೆ ಡಾಂಬರ್ ರಸ್ತೆ ಮಾಡಿದ ಒಂದು ವಾರದಲ್ಲಿ ಕಿತ್ತು ಹೋಗಿವೆ. ಶಾಸಕರು ದೆಬ್ಬೇಘಟ್ಟ ರಸ್ತೆಯಲ್ಲಿ ಸಂಚರಿಸಿದರೂ ಕ್ವಾಲಿಟಿ ನೋಡದೇ ಅದಿಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಗುತ್ತಿಗೆದಾರರು ಅಧಿಕಾರಿಗಳು ಸೇರಿ ಕಳಪೆ ಕಾಮಗಾರಿ ಮಾಡುತ್ತಿದ್ದರು ಸುಮ್ಮನಿರುವುದು ಗಮನಿಸಿದರೆ ಶಾಸಕರು ಶಾಮೀಲಾಗಿದ್ದಾರೆ ಎಂಬ ಸಂಶಯ ಬರುತ್ತಿದೆ ಎಂದು ಆರೋಪಿಸಿದರು.

     ಸಣ್ಣ ನೀರಾವರಿ ಇಲಾಖೆಯಿಂದ ಬಿಡುಗಡೆಯಾದ ೧೧ ಕೋಟಿ ಅನುದಾನವನ್ನು ಸರ್ಕಾರ ಟೆಂಡರ್ ಮಾಡದೇ ಶಾಸಕರು ತಮ್ಮ ಬೇಕಾದವರಿಗೆ ತುಂಡು ಗುತ್ತಿಗೆ ಮಾಡಿ ಕಮಿಷನ್ ಪಡೆದಿದ್ದಾರೆ. ಲ್ಯಾಂಡ್ ಆರ್ಮಿ ಕಾಮಗಾರಿಗಳು ಸಹ ಕಳಪೆ ಕಾಮಗಾರಿಗಳಾಗಿದ್ದು ಕೆಲವು ಕಾಮಗಾರಿ ಮಾಡದೇ ಬಿಲ್ ಪಡೆಯಲಾಗಿದೆ. ಓಬಿಸಿ ಚಾನಲ್ ವೈಡಿಂಗ್ ನಲ್ಲಿ ಬಾರಿ ಬ್ರಷ್ಟಚಾರವಾಗಿದೆ. ಮಳೆಗಾಲ ಹೆಚ್ಚಾಗಿದ್ದು ಚಾನಲ್ ನಲ್ಲಿ ನೀರು ಹರಿಯುತ್ತಿದ್ದರು ೨೦ ಕೋಟಿ ಬಿಲ್ ನೀಡಲಾಗಿದೆ. ಬಿಲ್ ನೀಡದಂತೆ ಇ.ಇ ಗೆ ಮನವಿ ಮಾಡಿದ್ದರು ಬಿಲ್ ನೀಡಿದ್ದಾರೆ ಈ ಎಲ್ಲ ಕಾಮಗಾರಿಗಳ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಸಮಗ್ರ ತನಿಕೆಯಾದರೆ ತಪ್ಪತಸ್ತರಿಗೆ ತಕ್ಕ ಶಿಕ್ಷೆಯಾಗಲಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link