ನೇಪಿಯರ್:

ನ್ಯೂಜಿಲ್ಯಾಂಡ್ ವಿರುದ್ಧದ ಭಾರತದ ಮಹಿಳಾ ತಂಡ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 9 ವಿಕೆಟ್ಗಳನ್ನು ಗಳಿಸುವ ಮೂಲಕ ನ್ಯೂಜಿಲ್ಯಾಂಡ್ ಮಹಿಳಾ ತಂಡವನ್ನು ಮಿಥಾಲಿ ರಾಜ್ ಪಡೆ ಬಗ್ಗುಬಡಿದಿದೆ.
ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ವೇಗವಾಗಿ ತಮ್ಮ ನಾಲ್ಕನೇ ಶತಕವನ್ನು ಪೂರೈಸಿ, ಈ ಗೆಲುವಿನಲ್ಲಿ ತಮ್ಮ ಪಾತ್ರವಹಿಸಿದ್ದಾರೆ.
Comprehensive win for #TeamIndia as they wrap the 1st ODI by 9 wickets. 1-0 ???? #NZvIND pic.twitter.com/MoU73CwSOX
— BCCI Women (@BCCIWomen) January 24, 2019
ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ ಮಹಿಳಾ ತಂಡ 192 ರನ್ ಗಳಿಗೆ ಆಲೌಟ್ ಆಗಿತ್ತು. 193 ರನ್ ಗಳ ಗುರಿ ಬೆನ್ನಟ್ಟಿದ ಭಾರತ ಮಹಿಳಾ ತಂಡದ ಪರ ಸ್ಫೋಟಕ ಬ್ಯಾಟ್ಸ್ ಮನ್ ಸ್ಮೃತಿ ಮಂದಾನ(105) ಭರ್ಜರಿ ಶತಕ ಸಿಡಿಸಿದ್ದು ಪರಿಣಾಮ ಭಾರತ ತಂಡ 1 ವಿಕೆಟ್ ನಷ್ಟಕ್ಕೆ 193 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿತು.
ಕಿವೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪುರುಷರ, ಮಹಿಳೆಯರ ತಂಡ ಸುಲಭ ಜಯ ಸಾಧಿಸಿದ್ದು ವಿಶೇಷ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








