ಶಿವಕುಮಾರ ಶ್ರೀಗಳಿಗೆ ವಿಧಾನಸಭೆಯಲ್ಲಿ ಸಂತಾಪ!

ಬೆಂಗಳೂರು :

      ರಾಜ್ಯಪಾಲರು ತಮ್ಮ ಜಂಟಿ ಅಧಿವೇಶನದ ಭಾಷಣ ಮೊಟಕುಗೊಳಿಸಿದ ನಂತರ ಸಭಾಧ್ಯಕ್ಷರು ಅಗಲಿದ ಗಣ್ಯರಿಗೆ ಸಂತಾಪ ಸೂಚಕ ನೀಲುವಳಿ ಮಂಡಿಸಿದರು.

      ಇತ್ತೀಚೆಗಷ್ಟೇ ಲಿಂಗೈಕ್ಯರಾದ ಶಿವಕುಮಾರ ಸ್ವಾಮೀಜಿ ಅವರ ಗುಣಗಾನ ಮಾಡಿದರು. ಇದರ ಜೊತೆ ಮತ್ತೊಬ್ಬ ನಾಯಕ ಜಾರ್ಜ್ ಫರ್ನಾಂಡೀಸ್ ಸೇರಿದಂತೆ ಅಗಲಿದ ನಾಯಕರಿಗೆ ಸಂತಾಪ ಸೂಚಿಸಿದರು.

      ಸಂತಾಪ ಸೂಚಕ ನಿಲುವಳಿ ಬಳಿಕ ಮಾತನಾಡಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ರಮ ಪೂಜ್ಯ ಶಿವಕುಮಾರ ಸ್ವಾಮೀಜಿ ಅವರು ನಾಡಿಗೆ ನೀಡಿದ ಕೊಡುಗೆಯನ್ನ ಬಣ್ಣಿಸಿದರು.  ಶ್ರೀಗಳು ರಾಜಕೀಯ ಮಾಡದೆ ಎಲ್ಲರನ್ನೂ ಒಂದೇ ತರಹ ನೋಡುತ್ತಿದ್ದರು. ಇನ್ನು ತ್ರಿವಿಧ ದಾಸೋಹ,  ಮಕ್ಕಳಿಗೆ ಶಿಕ್ಷಣ, ವಸತಿ ಮತ್ತು ಊಟ ನೀಡುವ ಮೂಲಕ ರಾಜ್ಯದ ಜನರ ಆಶಾ ಕಿರಣವಾಗಿದ್ದರು. ಅವರಿಲ್ಲದ ರಾಜ್ಯ ಬರಡಾಗಿದೆ ಎಂದರು. 

     ಇನ್ನು ಜಾರ್ಜ್ ಫರ್ನಾಂಡೀಸ್ ಅವರು ಹಲವು ನಾಯಕರನ್ನು ಹುಟ್ಟುಹಾಕಿದರು. ಹೋರಾಟದ ಮೂಲಕವೇ ಖ್ಯಾತರಾದ ಜಾರ್ಜ್ ಫರ್ನಾಂಡೀಸ್ ಅದ್ಭುತ ವ್ಯಕ್ತಿ ಎಂದು ಗುಣಗಾನ ಮಾಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link