ಸೋಮಣ್ಣ ಸೋಲು-ಗೆಲುವಿನ ಬಗ್ಗೆ ಕಾಂಗ್ರೆಸ್‌ ಅಭ್ಯರ್ಥಿ ಭವಿಷ್ಯ…!

ಚಾಮರಾಜನಗರ :

    ಎರಡು ಕ್ಷೇತ್ರಗಳಲ್ಲಿ ಟಿಕೆಟ್‌ ಸಂಪಾದಿಸಿರುವ ಕೆಲವೇ ನಾಯಕರಲ್ಲಿ ವಿ ಸೋಮಣ್ಣ ಕೂಡ ಒಬ್ಬರು ಇವರು  ವರುಣ ಹಾಗೂ ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ನಿಂತಿದ್ದಾರೆ ಮತ್ತು ಇವರು ಖಂಡಿತವಾಗಿ ಈ ಎರಡೂ ಕಡೆ  ಸೋಲ್ತಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ಭವಿಷ್ಯವನ್ನು ವಿಸ್ವಾಸ ಪೂರಕವಾಗಿ ನುಡಿದಿದ್ದಾರೆ.

    ತಾಲೂಕಿನ ಬಿಸಲವಾಡಿಯಲ್ಲಿ ಮಾಧ್ಯಮದವರೊಟ್ಟಿಗೆಸಿ‌.ಪುಟ್ಟರಂಗಶೆಟ್ಟಿಮಾತನಾಡಿ, ಬಿಜೆಪಿಯವರು ಬರೀ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡಿದ್ದಾರೆ, ಕಾಂಗ್ರೆಸ್ ಅಭಿವೃದ್ಧಿ ಪರದ ಸರ್ಕಾರ ನೋಡಿದ್ದಾರೆ ಆದ್ದರಿಂದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲಿದ್ದು ಕಾಂಗ್ರೆಸ್ ಗೆಲ್ಲಲಿದೆ ಎಂದರು.

ಅಲ್ಲದೆ, ನಾವು ಅಭಿವೃದ್ಧಿಪರ ಇದ್ದೇವೆ, ನಮಗೆ ಜನರು ಆಶೀರ್ವಾದ ಮಾಡಲಿದ್ದಾದೆ, ಬಿಜೆಪಿ-ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿಯೇ ಇಲ್ಲಾ, ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ವಿ ಸೋಮಣ್ಣ ಅವರು ವರುಣ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಕಮಲಪಾಳಯದ ಮೂಲಕ ಸ್ಪರ್ಧೆ ಮಾಡುತ್ತಿದ್ದಾರೆ. ಬಾದಾಮಿ ನಂತರ ಸಿದ್ದರಾಮಯ್ಯ ಅವರು ಕೋಲಾರದಿಂದ ವಿಧಾನಸಭೆ ಚುನಾವಣೆ ಕಣಕ್ಕಿಳಿಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ನಂತರ ವರುಣ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡುವುದಾಗಿ ಖಚಿತವಾಗಿತ್ತು. ಇದೀಗ ಸಿದ್ದರಾಮಯ್ಯ ಮತ್ತು ವಿ ಸೋಮಣ್ಣ ನಡುವೆ ನೇರ ಹಣಾಹಣಿ ನಡೆಯಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap