ಚುನಾವಣಾ ಬಾಂಡ್‌ : ಕೇಂದ್ರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

ನವದೆಹಲಿ: 

   ಚುನಾವಣಾ ಬಾಂಡ್‌ಗಳ ವಿಚಾರದಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಸೋಮವಾರ ಮೋದಿ ಅವರದ್ದು ಹಫ್ಸಾ ವಸೂಲಿ ಸರ್ಕಾರ ಆರೋಪಿಸಿದೆ. ಅಲ್ಲದೇ ಸಿಬಿಐ, ಇಡಿ ಅಥವಾ ಐಟಿಯಿಂದ ತನಿಖೆ ಎದುರಿಸಿದ ಒಟ್ಟು 21 ಸಂಸ್ಥೆಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದ್ದಾರೆ ಎಂದು ಹೇಳಿದೆ.

   ಪ್ರತಿ ದಿನ ಕಳೆದಂತೆ ಚುನಾವಣಾ ಬಾಂಡ್ ಹಗರಣದ ನೈಜ ಆಳದ ಬಗ್ಗೆ ಹೆಚ್ಚಿನ ಉದಾಹರಣೆಗಳು ಹೊರಹೊಮ್ಮುತ್ತಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. “ಇಂದು, ನಾವು ‘ಪ್ರಧಾನ ಮಂತ್ರಿ ಹಫ್ತಾ ವಸೂಲಿ ಯೋಜನೆ ಕುರಿತು ಹೆಚ್ಚಿನ ಗಮನ ನೀಡುತ್ತೇವೆ. ಇದು ಚುನಾವಣಾ ಬಾಂಡ್ ಹಗರಣದಲ್ಲಿ ಭ್ರಷ್ಟಾಚಾರದ ನಾಲ್ಕು ಚಾನಲ್‌ಗಳಲ್ಲಿ ಎರಡನೆಯದು: 1ಚಂದಾ ದೋ, ದಂಧಾ ಲೋ 2.ಹಫ್ತಾ ವಸೂಲಿ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದಾರೆ. 

   ದೆಹಲಿ ಸರ್ಕಾರದ ಮದ್ಯ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನವೆಂಬರ್ 10, 2022 ರಂದು ಅರಬಿಂದೋ ಫಾರ್ಮಾದ ನಿರ್ದೇಶಕ ಪಿ ಶರತ್ ಚಂದ್ರ ರೆಡ್ಡಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತು. ಆದರೆ ಐದು ದಿನಗಳ ನಂತರ ನವೆಂಬರ್ 15 ರಂದು ಅರಬಿಂದೋ ಫಾರ್ಮಾ 5 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ದೇಣಿಗೆ ನೀಡಿದೆ ಎಂದು ಅವರು ಹೇಳಿದ್ದಾರೆ. 2018 ರ ಅಕ್ಟೋಬರ್‌ನಲ್ಲಿ “ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಆದಾದ ಆರು ತಿಂಗಳ ನಂತರ, 2019 ರ ಏಪ್ರಿಲ್‌ನಲ್ಲಿ ಆ ಕಂಪನಿ 30 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.

    ಡಿಸೆಂಬರ್ 7, 2023 ರಂದು ರಾಮ್‌ಗಢ್‌ನಲ್ಲಿರುವ ರುಂಗ್ಟಾ ಸನ್ಸ್ ಲಿಮಿಟೆಡ್‌ನ ಮೇಲೆ ಮೂರು ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತು. ಆದರೆ ಜನವರಿ 11, 2024 ರಂದು ಈ ಕಂಪನಿಯು ತಲಾ 1 ಕೋಟಿ ರೂಪಾಯಿ ಮೌಲ್ಯದ 50 ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದೆ ಎಂದು ರಮೇಶ್ ಆರೋಪಿಸಿದ್ದಾರೆ. ಹೈದರಾಬಾದ್ ಮೂಲದ ಶಿರಡಿ ಸಾಯಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಡಿಸೆಂಬರ್ 20, 2023 ರಂದು ಐಟಿ ದಾಳಿಗೊಳಗಾಗಿತ್ತು.

   ಜನವರಿ 11, 2024 ರಂದು ಕಂಪನಿಯು 40 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದೆ. ಇವು ಕೇವಲ ಪ್ರಮುಖ ಉದಾಹರಣೆಗಳಷ್ಟೇ. ಸಿಬಿಐ, ಇಡಿ ಅಥವಾ ಐಟಿಯಿಂದ ತನಿಖೆ ಎದುರಿಸಿದ ಒಟ್ಟು 21 ಸಂಸ್ಥೆಗಳು ವಾಸ್ತವದ ನಂತರ ಚುನಾವಣಾ ಬಾಂಡ್‌ಗಳನ್ನು ದೇಣಿಗೆ ನೀಡಿವೆ ಎಂದು ರಮೇಶ್ ಹೇಳಿದ್ದಾರೆ.

   ಏಪ್ರಿಲ್ 1, 2019 ಮತ್ತು ಫೆಬ್ರವರಿ 15 ರ ನಡುವೆ ದಾನಿಗಳಿಂದ ವಿವಿಧ ಮುಖಬೆಲೆಯ ಒಟ್ಟು 22,217 ಚುನಾವಣಾ ಬಾಂಡ್‌ಗಳನ್ನು ಖರೀದಿಸಲಾಗಿದೆ, ಅವುಗಳಲ್ಲಿ 22,030 ಬಾಂಡ್ ಗಳನ್ನು ರಾಜಕೀಯ ಪಕ್ಷಗಳು ಮರು ಖರೀದಿಸಿವೆ (ರಿಡೀಮ್ ) ಎಂದು ಎಸ್ ಬಿಐ ಹೇಳಿದೆ.

Recent Articles

spot_img

Related Stories

Share via
Copy link