ನವದೆಹಲಿ:
ಇಂದು ಸದನದಿಂದ ಅನರ್ಹತೆಗೊಳಗಾದ ರಾಹುಲ್ ಗಾಂಧಿಯವರನ್ನು ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಕಾನೂನು ಮತ್ತು ರಾಜಕೀಯವಾಗಿ ಹೋರಾಟ ನಡೆಸುವುದಾಗಿ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ನಾವು ಹೆದರುವುದು ಅಥವಾ ಮೌನವಾಗಿರುವುದಿಲ್ಲ, ಪ್ರಧಾನಿ ಮೋದಿ- ಅದಾನಿ ನಡುವಿನ ಮಹಾ ಮೆಗಾ ಹಗರಣದ ಬಗ್ಗೆ ಜೆಪಿಸಿ ತನಿಖೆಗೆ ವಹಿಸುವ ಬದಲು ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿದೆ. ಭಾರತದ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂದಿದ್ದಾರೆ.