ಹೊಸಪೇಟೆ :
ಮಾಜಿ ಸಚಿವ, ಶಾಸಕ ಶಾಮನೂರು ಶಿವಶಂಕ್ರಪ್ಪ ನಿಧನ ಆಗಿದ್ದಕ್ಕೆ ಹೊಸಪೇಟೆಯ ಕಾಂಗ್ರೆಸ್ ಶಾಸಕ ಗವಿಯಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಿವಶಂಕ್ರಪ್ಪ ಕಾಂಗ್ರೆಸ್ ಪಕ್ಷದ ದೊಡ್ಡ ಲೀಡರ್ ಆಗಿದ್ರು. ಪಕ್ಷಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅಂತವರನ್ನ ಕಳೆದುಕೊಂಡಿದ್ದು ಪಕ್ಷಕ್ಕೆ, ಸಮಾಜಕ್ಕೆ ದೊಡ್ಡ ಅನ್ಯಾಯ ಅಂತ ಕಳವಳ ವ್ಯಕ್ತಪಡಿಸಿದಾರೆ.
ಶಾಮನೂರು ಅವರು, ಶಿಕ್ಷಣ, ಆಸ್ಪತ್ರೆ ಸೇರಿ ದಾವಣಗೆರೆ ಭಾಗದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದರು. ಹಿರಿಯರು, ಶಾಸಕರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಕೋರುತ್ತೇನೆ ಅಂತ ಶಾಸಕ ಗವಿಯಪ್ಪ ಹೇಳಿದರು








