ಬನವಾಸಿ:
ಇಂದು ಬೆಳಿಗ್ಗೆ ಬನವಾಸಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣಪತಿ ಈರಪ್ಪ ನಾಯ್ಕ, 79 ನೇ ಧ್ವಜಾರೋಹಣ ನೆರವೇರಿಸಿದರು.ಇದೇ ಸಂದರ್ಭದಲ್ಲಿ,” ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ ” ಅನ್ನುವ ಘೋಷಣೆಯೊಂದಿಗೆ ಪಥ ಸಂಚಲನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಸಿ.ಎಫ್.ನಾಯ್ಕ, ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ಬಸವರಾಜ ದೊಡ್ಮನಿ, ಮಹಿಳಾ ಅಧ್ಯಕ್ಷೆ ಶ್ರೀಮತಿ ಶ್ರೀಲತಾ ಕಾಳೇರಮನೆ,ಶ್ರೀಮತಿ ರೂಪಾ ನಾಯ್ಕ,ದ್ಯಾಮಣ್ಣ ದೊಡ್ಮನಿ, ಕಿರಣ ನಾಯ್ಕ್,ರಘು ನಾಯ್ಕ,ಭೂ ನ್ಯಾಯ ಮಂಡಳಿ ಸದಸ್ಯರಾದ ರವಿ ನಾಯ್ಕ,ಸುಧಾಕರ ನಾಯ್ಕ, ಘಟಕಾಧ್ಯಕ್ಷರಾದ ಆನಂದ ನಾಯ್ಕ, ಸತೀಶ ನಾಯ್ಕ, ಅಲ್ತಾಫ್, ಬಿ.ಶಿವಾಜಿ , ಪ್ರಶಾಂತ್ ಗೌಡ ಸೇರಿದಂತೆ ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪದಾಧಿಕಾರಿಗಳು ಭಾಗವಹಿಸಿದ್ದರು.








