ಮೋದಿ ವಿರುದ್ಧ ಕಾಂಗ್ರೆಸ್‌ ಸಂಸದೆಯಿಂದ ಮಾನ ನಷ್ಟ ಮೊಕ್ಕದಮೆ..!

ಹೊಸದಿಲ್ಲಿ:

     2018ರ ಸಂಸತ್‌ ಅಧಿವೇಶನದ ವೇಳೆ  ಪ್ರಧಾನಿ ನರೇಂದ್ರ ಮೋದಿಯವರು ‘ಶೂರ್ಪನಖಿ’ ಎಂದು ನನ್ನನನ್ನು ಸಂಬೋಧಿಸಿದ್ದರು ಎನ್ನಲಾದ ಘಟನೆ ಹಿನ್ನೆಲೆಯಲ್ಲಿ ಪ್ರಧಾನಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಪ್ರಕಟಿಸಿದ್ದಾರೆ.

    “ನ್ಯಾಯಾಲಯಗಳು ಎಷ್ಟು ತ್ವರಿತವಾಗಿ ವಿಚಾರಣೆ ನಡೆಸುತ್ತವೆ ಎಂದು ನೋಡೋಣ” ಎಂದು ಕೇಂದ್ರದ ಮಾಜಿ ಸಚಿವೆಯೂ ಆಗಿರುವ ಅವರು ಟ್ವೀಟ್ ಮಾಡಿದ್ದಾರೆ.

ರಾಮಾಯಣ ಧಾರಾವಾಹಿ ಪ್ರಸಾರವಾಗುತ್ತಿದ್ದ ಕೆಲ ದಿನಗಳ ಬಳಿಕ ರೇಣುಕಾಚೌಧರಿ ಮಾತು ಮುಂದುವರಿಸಲು ಅವಕಾಶ ನೀಡುವಂತೆ ರಾಜ್ಯಸಭೆಯ ಅಧ್ಯಕ್ಷರಿಗೆ ನರೇಂದ್ರ ಮೋದಿ ಕೇಳಿಕೊಳ್ಳುತ್ತಿರುವ ತುಣುಕನ್ನು ಟ್ವೀಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಗುವುದು ಕೇಳಿಸುತ್ತಿದೆ.

   “ಈ ವರ್ಗರಹಿತ ಆತ್ಮವೈಭವದ ವ್ಯಕ್ತಿ ನನ್ನನ್ನು ಸದನದಲ್ಲಿ ಶೂರ್ಪನಖಿ ಎಂದು ಕರೆದಿದ್ದಾರೆ” ಎಂದು 2019ರ ಮಾನನಷ್ಟ ಪ್ರಕರಣದಲ್ಲಿ ರಾಹುಲ್‌ಗಾಂಧಿಗೆ ಶಿಕ್ಷೆಯಾದ ಬಳಿಕ ಚೌಧರಿ ಟ್ವೀಟ್ ಮಾಡಿದ್ದಾರೆ. ಎಲ್ಲ ಕಳ್ಳರಿಗೆ ಮೋದಿ ಅಡ್ಡ ಹೆಸರು (ಸರ್‌ನೇಮ್) ಏಕೆ ಬರುತ್ತದೆ ಎಂದು ರಾಹುಲ್ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ರಾಹುಲ್‌ಗೆ ಶಿಕ್ಷೆ ವಿಧಿಸಲಾಗಿದೆ.

ಆದರೆ ನರೇಂದ್ರ ಮೋದಿಯವರು ಶೂರ್ಪನಖಿ ಎಂದು ಹೇಳಿಕೆ ನೀಡಿಲ್ಲ ಹಾಗೂ ಸಂಸತ್ತಿನಲ್ಲಿ ನೀಡಿದ ಹೇಳಿಕೆಗೆ ಅವರು ನ್ಯಾಯಾಲಯದ ಮೊರೆ ಹೋಗುವಂತಿಲ್ಲ ಎಂದು ಸಾಮಾಜಿಕ ಜಾಲತಾಣಿಗರು ಕಾಂಗ್ರೆಸ್ ನಾಯಕಿಗೆ ನೆನಪಿಸಿದ್ದಾರೆ.

“ಭ್ರಷ್ಟಾಚಾದ ವಿರುದ್ಧದ ಹೋರಾಟಕ್ಕಾಗಿ ರಾಹುಲ್‌ಗಾಂಧಿ ಕ್ಷಮೆ ಯಾಚಿಸಿಲ್ಲ. ಫ್ಯಾಸಿಸಂ ವಿರುದ್ಧದ ಹೋರಾಟದ ಸಲುವಾಗಿ ಅವರು ಕ್ಷಮೆ ಯಾಚಿಸಿಲ್ಲ. ಸತ್ಯ ಹೇಳಿದ ಕಾರಣದಿಂದ ಅವರು ಕ್ಷಮೆ ಯಾಚಿಸಲು ಮುಂದಾಗಿಲ್ಲ” ಎಂದು ಚೌಧರಿ ಟ್ವೀಟ್ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link