ಚಿಕ್ಕನಾಯಕನಹಳ್ಳಿ:
ಕಳೆದ ಹತ್ತು ವರ್ಷಗಳಿಂದ ಕಾಂಗ್ರೇಸ್ ಪಕ್ಷದ ಸದಸ್ಯತ್ವ ಅಭಿಯಾನ ಆಗಿರುವುದಿಲ್ಲ ಈಗ ಸೋನಿಯಾ ಗಾಂದಿ ನೇತೃತ್ವದಲ್ಲಿ ಮತ್ತೆ ಸದಸ್ಯತ್ವ ಪ್ರಾರಂಭ ಮಾಡಲಾಗಿದೆ ಎಂದು ಕ್ಷೇತ್ರ ವೀಕ್ಷಕ ಮುರಳೀಧರ ಹಾಲಪ್ಪ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಿ.ಬಸವರಾಜುರವರ ನಿವಾಸಲ್ಲಿ ನೆಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರ ಆದೇಶದಂತೆ ಜಿಪಂ,ತಾಪಂ,ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಬೂತ್ ಮಟ್ಟದಲ್ಲಿ 200 ಜನರ ಸದಸ್ಯತ್ವ ನೊಂದಾಯಿಸಲು ಗುರಿ ಹೊಂದಿದ್ದು ಪ್ರತಿ ಬೂತ್ ಮಟ್ಟದಲ್ಲಿ ಒಬ್ಬಬ್ಬ ಮಹಿಳೆ ಮತ್ತು ಪುರಷರನ್ನು ನೇಮಿಸಿ ಪಕ್ಷದ ಬೆಳವಣಿಗೆಗೆ ಸದಸ್ಯತ್ವ ನೊಂದಣೆ ಕಾರ್ಯ ಮಾಡುವ ಜವಾಬ್ದಾರಿ ನೀಡಲಾಗುತ್ತದೆ ಎಂದರು.
ನ.14ರಂದು ಅಧಿಕೃತವಾಗಿ ಸದಸ್ಯತ್ವ ನೊಂದಣೆ ನೊಂದಾಯಿಸುವ ಅಭಿಯಾನಕ್ಕೆ ಮೈಸೂರಿನಲ್ಲಿ ನೀಡಲಾಗಿತ್ತು, ಅಂದು ಸದಸ್ಯತ್ವವನ್ನು ನೊಂದಾಯಿಸಲು ರಸೀದಿ ಪುಸ್ತಕದಲ್ಲಿ ನೆಡೆಯುತ್ತಿತ್ತು ಇದು ಸರಿಯಾದ ವ್ಯೆವಸ್ಥೆಯಲ್ಲ ಎಂದು ತಿಳಿದು ಪಕ್ಷವು ಈಗ ಡಿಜಿಟಲ್ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ತಾಲ್ಲೂಕಿನಲ್ಲಿ ಕನಿಷ್ಟ 25ಸಾವಿರ ಸದಸ್ಯತ್ವ ನೊಂದಾಯಿಸಲು ಗುರಿ ಹೊಂದಲಾಗಿದ್ದು ಕಾಂಗ್ರಾಸ್ ಪಕ್ಷದ ಸಿದ್ಧಾಂತ ಪಕ್ಷದ ನಿಷ್ಠೆ ಇರುವವರನ್ನು ಮಾತ್ರ ನೊಂದಾಯಿಸಿಕೊಳ್ಳಲಾಗುವುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ರಾಮಕೃಷ್ಣಪ್ಪ, ಜಿ.ಪಂ.ಮಾಜಿ ಸದಸ್ಯ ವೈಸಿ.ಸಿದ್ದರಾಮಯ್ಯ, ಹುಳಿಯಾರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಿಕ್ಕಣ್ಣ, ಉಪಾಧ್ಯಕ್ಷ ಸಿ.ಡಿ.ಚಂದ್ರಶೇಖರ್, ಮಾತನಾಡಿದರು. ಮಾಜಿ ಶಾಸಕ ಬಿ.ಲಕ್ಕಪ್ಪ,ತಾ.ಬ್ಲಾಕ್ ಅಧ್ಯಕ್ಷ ಸಿ.ಬಸವರಾಜು,ಪ್ರಧಾನ ಕಾರ್ಯದರ್ಶಿ ಬ್ರಹ್ಮಾನಂದ್, ವಕ್ತಾರ ಕೆ.ಜಿ.ಕೃಷ್ಣೇಗೌಡ ಹೋಯ್ಸಲಕಟ್ಟೆ ಗಿರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
