ಕಿಚ್ಚ ಸುದೀಪ್‌ಗೆ ಅವಮಾನ : ಕಾಂಗ್ರೆಸ್, ಜೆಡಿಎಸ್‌ಗೆ ಜನರಿಂದ ತಕ್ಕ ಉತ್ತರ

ಬೆಂಗಳೂರು:

     ಕನ್ನಡಿಗರ ನೆಚ್ಚಿನ ನಟ ಕಿಚ್ಚ ಸುದೀಪ್ ಅವರ ನಿಲುವನ್ನು ಪ್ರಶ್ನಿಸುವ ಮತ್ತು ಅವರನ್ನು ಅವಮಾನಿಸುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ ಕಾಂಗ್ರೆಸ್- ಜೆಡಿಎಸ್ ಪಕ್ಷಕ್ಕೆ ಪ್ರಜ್ಞಾವಂತ ಜನತೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀ ಯ ವಕ್ತಾರ ಗೌರವ್ ಭಾಟಿಯ ಅವರು ವಿಶ್ವಾಸದಿಂದ ನುಡಿದರು.

    ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರು ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಮಗೆ ಬೇಕಾದಂತೆ ವಿಶ್ಲೇಷಿಸಿ ಬಳಸುತ್ತಾರೆ ಎಂದು ಟೀಕಿಸಿದರು.

    ಕಿಚ್ಚ ಸುದೀಪ್ ಅವರು ಪ್ರಜಾಸತ್ತೆಯ ಸ್ವಾತಂತ್ರ್ಯ ದ ಆಧಾರದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಮತ್ತು ಬಿಜೆಪಿ ಬೆಂಬಲಿಸುವ ನಿರ್ಣಯ ತೆಗೆದುಕೊಂಡಿದ್ದಾರೆ. ಆದರೆ, ಇವೆರಡು ಪಕ್ಷಗಳು ಕಿಚ್ಚ ಸುದೀಪ್ ವಿರುದ್ಧ ಟೀಕೆ ಮಾಡುತ್ತಿವೆ. ವಿವಿಧ ಏಜೆನ್ಸಿಗಳಿಂದ ತನಿಖೆ ತಪ್ಪಿಸಿಕೊಳ್ಳಲು ಹೀಗೆ ಮಾಡಿದ್ದಾಗಿ ಟೀಕಿಸುತ್ತಿವೆ ಎಂದು ಆಕ್ಷೇಪಿಸಿದರು.

   ಕಾಂಗ್ರೆಸ್ ಸಮರ್ಥನೆ ಮಾಡುವವರಾದರೆ ಅದು ಪ್ರಜಾಸತ್ತೆಗೆ ಪೂರಕ ಎನ್ನುವ ನಿಲುವು ಆ ಪಕ್ಷದ ಮುಖಂಡರದು. ಬಿಜೆಪಿಯಲ್ಲಿ ಪ್ರಚಾರಕ್ಕೆ ಹೊರಗಿನ ಅಗತ್ಯವಿದೆ ಎಂದು ಆಕ್ಷೇಪಿಸಿದ್ದಾರೆ. ಇದು ಸರಿಯಲ್ಲ. ಭಾರತ್ ಜೋಡೋ ಹೆಸರಿನ ಭಾರತ್ ತೋಡೋ ಯಾತ್ರೆ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಜೊತೆ ದೇಶದ್ರೋಹಿಗಳು, ತುಕ್ಡೇ ತುಕ್ಡೇ ಗ್ಯಾಂಗಿನವರು ಹೆಜ್ಜೆ ಹಾಕಿದ್ದರು. ರಾಹುಲ್ ಗಾಂಧಿಯವರಿಗೆ ಜನಪ್ರಿಯತೆ ಇಲ್ಲದ ಕಾರಣ ಸ್ವರಾ ಭಾಸ್ಕರ್ ಅವರಂಥವರು ಬೇಕಾಯಿತೇ ಎಂದು ಪ್ರಶ್ನಸಿದರು. ದೇಶದ ವಿರುದ್ಧ ಘೋಷಣೆ ಕೂಗುವವರು ಅವರಿಗೆ ಬೇಕಾಯಿತು ಎಂದು ಆರೋಪಿಸಿದರು.

    ಕಾಂಗ್ರೆಸ್- ಜೆಡಿಎಸ್‌ನದು ಅನಾರೋಗ್ಯದ ಮನಸ್ಥಿತಿ, ಬೂಟಾಟಿಕೆ ಎಂದು ಟೀಕಿಸಿದ ಅವರು, ಕಿಚ್ಚ ಸುದೀಪ್ ಅವರು ಪರಿಶ್ರಮದಿಂದ ಸ್ವತಃ ಜನರ ನಡುವೆ ಬೆಳೆದು ಅಪಾರ ಜನಪ್ರಿಯತೆ ಗಳಿಸಿದವರು. ರಾಹುಲ್ ಗಾಂಧಿಯಂತೆ ಕುಟುಂಬದ ಆಧಾರದಲ್ಲಿ ಬಂದವರಲ್ಲ. ಈ ಬುಡಕಟ್ಟು ಸಮಾಜದವರನ್ನು ಟೀಕಿಸುತ್ತಿದ್ದಾರೆ. ಇದು ಕನ್ನಡಿಗರಿಗೆ ಮಾಡಿದ ಅವಮಾನವಲ್ಲವೇ ಎಂದು ಪ್ರಶ್ನಿಸಿದರು.

    ರಾಹುಲ್ ಗಾಂಧಿ ವಿದೇಶದಲ್ಲಿ ಭಾರತದ ಪ್ರಜಾಪ್ರಭುತ್ವದ ವಿರುದ್ಧ ಮಾತನಾಡಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ÷್ಯ ಎಂದು ಕಾಂಗ್ರೆಸ್ ಹೇಳುತ್ತದೆ. ಆದರೆ, ಕಿಚ್ಚ ಸುದೀಪ್ ಅವರಂಥ ಸಿನಿತಾರೆ ತಮ್ಮ ಬೆಂಬಲವನ್ನು ಯಾರಿಗೆ ಕೊಡಬೇಕೆಂದು ಆಯ್ಕೆ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ÷್ಯ ಅಲ್ಲವೇ ಎಂದು ಕೇಳಿದರು. ಬಿಜೆಪಿ ರಾಷ್ಟçಪತಿ ಸ್ಥಾನವನ್ನು ಬುಡಕಟ್ಟು ಸಮುದಾಯಕ್ಕೆ ಕೊಟ್ಟಿದೆ ಎಂದು ನೆನಪಿಸಿದರು.

    ಡಿ.ಕೆ.ಶಿವಕುಮಾರ್, ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿ ತಮಗೆ ಬೆಂಬಲ ಕೊಡಲು ಕೋರಿದ್ದರು ಎಂಬ ಮಾಹಿತಿ ಇದೆ ಎಂದ ಅವರು, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರಕ್ಕೆ ಮತ್ತು ಕುಟುಂಬ ರಾಜಕೀಯಕ್ಕೆ ಸ್ಪಷ್ಟ ಉದಾಹರಣೆ. ಕರ್ನಾಟಕದ ಜನತೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಕಡೆ ಆದ್ಯತೆ ಕೊಟ್ಟ ಬಿಜೆಪಿಯ ಕಡೆ ಒಲವು ತೋರುತ್ತಿದ್ದಾರೆ.

    ದುರ್ಬಲ ಸಮುದಾಯಕ್ಕೆ ಒಳ ಮೀಸಲಾತಿ ಕೊಟ್ಟ ಸರಕಾರ ನಮ್ಮ ಬಿಜೆಪಿಯದು. ಕಿಚ್ಚ ಸುದೀಪ್ ಅವರ ಬೆಂಬಲದಿAದ ಕಾಂಗ್ರೆಸ್ -ಜೆಡಿಎಸ್ ಇನ್ನಷ್ಟು ದುರ್ಬಲವಾಗುವ ಆತಂಕ ಅವೆರಡು ಪಕ್ಷದವರಲ್ಲಿದೆ. ಅವರ ವಿರುದ್ಧ ಮಾಡಿದ ಟೀಕೆ ಕನ್ನಡಿಗರಿಗೆ ಮಾಡಿದ ಅವಮಾನ ಎಂದು ತಿಳಿಸಿದರು.

   ಜನಪ್ರಿಯ ವ್ಯಕ್ತಿಯೊಬ್ಬರು ನಿರ್ದಿಷ್ಟ ತತ್ವ, ಸಿದ್ಧಾಂತವನ್ನು ಬೆಂಬಲಿಸಬಾರದು ಎಂದಿಲ್ಲ. ಕಾಂಗ್ರೆಸ್‌ನವರು ಚುನಾವಣಾ ನೀತಿ ಸಂಹಿತೆಯನ್ನು ಇನ್ನೊಮ್ಮೆ ಅಭ್ಯಸಿಸಲಿ. ದೇಶ ವಿರೋಧಿಗಳು, ಟುಕ್ಡೇ ಟುಕ್ಡೇ ಗ್ಯಾಂಗ್ ಜೊತೆ ಇರುವ ವ್ಯಕ್ತಿಗಳು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕುತ್ತಾರೆ ಎಂದು ಟೀಕಿಸಿದ ಅವರು, ಕರ್ನಾಟಕದ ಕುವರ ಬಿಜೆಪಿ ಬೆಂಬಲಿಸಿದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಆತಂಕ ಯಾಕೆ? ಕಾಂಗ್ರೆಸ್ ಜೆಡಿಎಸ್ ವಿನಾಶ ಸನ್ನಿಹಿತ.ವಾಗಿದೆ. ಇವೆರಡು ಪಕ್ಷಗಳಿಗೆ ಪ್ರಜ್ಞಾವಂತ ಜನತೆ ಸಮರ್ಥ ಉತ್ತರವನ್ನು ನೀಡಲಿದ್ದಾರೆ ಎಂದು ನುಡಿದರು.

    ಈ ಚುನಾವಣಾ ಸಮರ ರಾಷ್ಟ್ರ ಹಿತ ವಿಚಾರಧಾರೆಯ ಆಧಾರದಲ್ಲಿ ಮುಂದುವರಿಯಲಿದೆ ಎಂದು ಅವರು ತಿಳಿಸಿದರು. ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಮತ್ತು ರಾಜ್ಯ ಹಾಲು ಉತ್ಪಾದಕರ ಪ್ರಕೋಷ್ಠದ ರಾಜ್ಯ ಸಂಚಾಲಕ ವೆಂಕಟೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap