ಬೆಂಗಳೂರು:
ಕಳಪೆ ಹೆಲ್ಮೆಟ್ ಧರಿಸಿದ್ದ ಬೈಕ್ ಸವಾರನಿಂದ 100 ರೂ. ದಂಡ ಪಡೆದು ನಂತರ ವಾಪಸ್ ಕೊಟ್ಟ ಪೊಲೀಸ್ ಪೇದೆಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಎಚ್ಎಎಲ್ ಸಂಚಾರ ಠಾಣೆ ಕಾನ್ಸ್ಟೇಬಲ್ ಪವನ್ ದ್ಯಾಮಣ್ಣನವರ್ ಅಮಾನತಿಗೆ ಒಳಗಾದವರು.
ಕಳಪೆ ಹೆಲ್ಮೆಟ್ ಧರಿಸಿದ್ದ ಬೈಕ್ ಸವಾರನಿಂದ 100 ರೂ. ದಂಡ ಪಡೆದಿದ್ದರು. ಬೈಕ್ ಸವಾರ ಆಕ್ಷೇಪ ವ್ಯಕ್ತಪಡಿಸಿದ ಕಾರಣ ದಂಡವನ್ನು ಪೇದೆ ವಾಪಸ್ ಕೊಟ್ಟಿದ್ದರು. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು.
ಸ್ಥಳದಲ್ಲಿ ದಂಡ ವಿಧಿಸುವ ಅಧಿಕಾರ ಎಎಸ್ಐ ಮತ್ತು ಮೇಲ್ದರ್ಜೆ ಅಧಿಕಾರಿಗಳಿಗೆ ಮಾತ್ರ ನೀಡಲಾಗಿದೆ. ಕಾನ್ಸ್ಟೇಬಲ್ ಮತ್ತು ಹೆಡ್ ಕಾನ್ಸ್ಟೇಬಲ್ಗಳಿಗೆ ಈ ಅಧಿಕಾರ ಇಲ್ಲ. 15 ದಿನಗಳಿಂದ ಐಎಸ್ಐ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ.
ಆದರೆ, ಇಲ್ಲಿಯವರೆಗೂ ಸವಾರರಿಗೆ ದಂಡ ವಿಧಿಸುವಂತೆ ಯಾವುದೇ ಆದೇಶ ನೀಡಿಲ್ಲ. ಆಂತರಿಕ ವರದಿ ಪಡೆಯಲಾಗಿದೆ. ಕಾನ್ಸ್ಟೇಬಲ್ ತಪ್ಪು ಮಾಡಿರುವುದು ಕಂಡುಬಂದಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ.ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ