ಮಧುಗಿರಿ:

ಕಳೆದ ತಿಂಗಳ ಹಿಂದೆ ಸುರಿದ ಮಳೆಯಿಂದಾಗಿ ಬೇಸತ್ತಿದ್ದ ಜನರು ಮಳೆ ಬಾರದೆ ಹಿನ್ನೆಲೆಯಲ್ಲಿ ಕಲುಷಿತ ಗಾಳಿಯ ದೂಳಿ ನಿಂದಾಗಿ ಅನೇಕ ರೀತಿಯ ರೋಗ ರುಜನೆಗಳಿಗೆ ತುತ್ತಾಗಿದ್ದಾರೆ.
ತಾಲ್ಲೂಕಿನ ಪುರವರ-ಬ್ಯಾಲ್ಯ ನಡುವೆ ನಡೆಯುತ್ತಿರುವ ರಸ್ತೆ ಕಾಮಗಾರಿ ಯಿಂದಾಗಿ ದ್ವಿಚಕ್ರವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿರುವುದಲ್ಲದೇ ರಸ್ತೆ ಯ ಅಕ್ಕಾಪಕ್ಕಾದ ಗ್ರಾಮಸ್ಥರು ಗಳಿಗಂತೂ ದೂಳಿನಿಂದಾಗಿ ಅನಾರೋಗ್ಯಕ್ಕೆ ಅನುಭವಿಸುತ್ತಿದ್ದು ಮನೆಯಲ್ಲಿರುವವರಿಗೆ ಗಂಟಲು ಕೆರೆತ,
ಗಂಟಲು ನೋವು, ಮೈ ಕೈ ನೋವು ಜ್ವರ ಶೀತ ಕೆಮ್ಮ ಮತ್ತಿತರ ಕಾಯಿಲೆಗಳನ್ನು ಎದುರಿಸುತ್ತಾ ಆಸ್ಪತ್ರೆಗಳಲ್ಲಿ ಸರಥಿ ಸಾಲಿನಲ್ಲಿ ನಿಂತು ಕೊಳ್ಳುವಂತಹ ವಾತವರಣ ಸೃಷ್ಟಿಯಾಗಿದೆ.
ಸಕಾಲಕ್ಕೆ ನೀರು ಹಾಕದ ಕಾರಣ ಧೂಳಿನಿಂದಈ ರಸ್ತೆ ಕಾಮಗಾರಿಯಲ್ಲಿನ ಮಣ್ಣಿನಿಂದಾಗಿ ಸಾಕಷ್ಟು ಧೂಳೂ ಮೇಲೆಳುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಕ್ಷಿಪ್ರವಾಗಿ ಹರಡಲು ಕಾರಣವಾಗಿದೆ ಎಂಬುದು ಗ್ರಾಮಸ್ಥರ ನೇರ ಆರೋಪವಾಗಿದೆ.
ಮಕ್ಕಳಿಗಂತೂ ಧೂಳಿನಿಂದಾಗಿ ಬೇಗ ಕಾಯಿಲೆಗಳಿಗೆ ತುತ್ತಾಗುತ್ತಿದ್ದು ಪ್ರತಿ ಮನೆಯಲ್ಲೂ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಈ ಬಗ್ಗೆ ಯಾರಿಗೆ ದೂರು ನೀಡಬೇಕೆಂಬ ಎಂಬುದೇ ಗೊತ್ತಾಗದ ಸ್ಥಿತಿಯಲ್ಲಿ ಗ್ರಾಮಸ್ಥರು ಗಳಿದ್ದು ಕೊನೆಗೆ ಗುತ್ತಿಗೆದಾರನಾದರೂ ಸ್ಥಳಕ್ಕೆ ಬಂದೂ ಸಮಸ್ಯೆಯನ್ನಾದರೂ ಬಗೆಹರಿಸುತ್ತಾನೆಂದು ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ.
ಕಾಮಗಾರಿ ನಡೆಯುತ್ತಿರುವ ರಸ್ತೆಗೆ ನೀರನ್ನು ಹಾಕುತ್ತಾರಷ್ಟೆ. ಅದಾದ ಮೇಲೆ ಅವರನ್ನು ಯಾರೂ ಕೇಳದೇ ಇದ್ದರೆ ಆತ ತಿರುಗೂ ಸಹ ನೋಡಲ್ಲ ಈಗ ಬೇಸಿಗೆಯ ಸಂದರ್ಭವಾಗಿರುವುದರಿಂದ ಸಾಕಷ್ಟು ಧೂಳು ಹಬ್ಬುತ್ತಿದೆ .
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು ಇಲ್ಲವಾದಲ್ಲಿ ಶಾಸಕ ಡಾ.ಜಿ.ಪರಮೇಶ್ವರ ಗಮನಕ್ಕೆ ತಂದು ರಸ್ತೆ ತಡೆ ನಡೆಸಿ ಪ್ರತಿಭಟಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








