ಮಧುಗಿರಿ :
ಪುರಸಭೆಯ ವತಿಯಿಂದ ಕಲುಷಿತ ನೀರು ಸರಬರಾಜು ಮಾಡಲಾಗಿದೆ ಎಂದು ವಾರ್ಡಿನ ನಾಗರೀಕರು ಆರೋಪಿಸಿದ್ದಾರೆ.
ಪಟ್ಟಣದ ರಾಘವೇಂದ್ರ ಕಾಲನಿಯ ಶಂಕರ ಮಠದ ಸುತ್ತ ಮುತ್ತಲಾ ಮನೆಗಳಿಗೆ ಎರಡು ದಿನಗಳಿಂದ ಕಲುಷಿತ ಗೊಂಡಿರುವ ನೀರನ್ನು ಕೊಳಾಯಿ ಮೂಲಕ ಸರಬರಾಜು ಮಾಡಲಾಗಿದೆ.ಇತ್ತೀಚೆಗೆ ರಾಘವೇಂದ್ರ ಕಾಲನಿಗೆ ಸರಬರಾಜು ಮಾಡುವ ಟ್ಯಾಂಕ್ ನ್ನು ಪುರಸಭೆಯ ಸಿಬ್ಬಂದಿಗಳು ಸ್ವಚ್ಚಗೊಳಿಸಿದ್ದಾರೆಂದು ಆ ನೀರನ್ನು ಹೊರ ಹಾಕದೆ ಅದೇ ನೀರನ್ನು ನಾಗರೀಕರ ಮನೆಗಳಿಗೆ ಸರಬರಾಜು ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಈ ಬಗ್ಗೆ ಪ್ರಜಾ ಪ್ರಗತಿಯ ವರದಿಗಾರರಿಗೆ ಸ್ಥಳೀಯ ನಾಗರೀಕರು ಕರೆ ಮಾಡಿ ಕಲುಷಿತಗೊಂಡಿರುವ ನೀರು ಸರಬರಾಜು ಮಾಡಿರುವ ಬಗ್ಗೆ ವಾಸ್ತಾವಂಶವನ್ನು ವಿವರಿಸಿದ್ದಾರೆ.
ಕಳೆದ ತಿಂಗಳು ಚಿನ್ನೇನಹಳ್ಳಿಯ ಕಲುಷಿತ ನೀರು ಕುಡಿದು ಸಣ್ಣ ಮಗು ಸೇರಿದಂತೆ ಸುಮಾರು 11 ಜನರು ಮೃತಪಟ್ಟಿದ್ದರು ಈ ಘಟನೆ ಮಾಸುವ ಮುನ್ನಾವೆ ಈ ರೀತಿಯ ನೀರನ್ನೂ ಪುರಸಭೆ ಪೂರೈಕೆ ಮಾಡಿದ್ದಾರೆ.ನೀರು ಪೂರೈಕೆ ಮಾಡಿದ್ದರು ಪುರಸಭೆಯವರು ಇನ್ನೂ ಎಚ್ಚೆತ್ತು ಕೊಂಡಿಲ್ಲ ನಾಗರೀಕರಿಗೆ ನೀರು ಬಳಸದಂತೆ ಯಾವುದೇ ಎಚ್ಚರಿಕೆಯನ್ನು ನೀಡದೆ ಪುರಸಭೆಯ ಕೆಲ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.
ಈಗ ಪೂರೈಕೆ ಮಾಡಿರುವ ನೀರು ಮನೆಗಳಲ್ಲಿನ ನೀರಿನ ಸಂಪುಗಳಲ್ಲಿ ಕಂಡು ಬಂದಿದೆ. ನೀರನ್ನು ಹೊರ ಹಾಕಲು ಸಾವಿರ ರೂಪಾಯಿ ಗಳು ಖರ್ಚು ತಗುಲಲಿದೆ ನಾವು ಈ ವಾಸನೆಯಿಂದ ಕೂಡಿರುವ ನೀರನ್ನು ಬಳಸಲಿಕ್ಕೆ ಆಗುವುದಿಲ್ಲ ವೆಂದು ಹೆಸರು ಹೇಳಲಿಚ್ಚಿಸದ ಗೃಹಿಣಿ ಯೊಬ್ಬರು ತಿಳಿಸಿದ್ದಾರೆ.