17ನೇ ದಿನವೂ ಮುಂದುವರಿದ ‘ಕೆಜಿಎಫ್ 2’ ಅಬ್ಬರ; ಯಶ್ ಎದುರು ಮಂಕಾದ ಅಜಯ್​ ದೇವಗನ್, ಟೈಗರ್ ಸಿನಿಮಾ

ಕೆಜಿಎಫ್ 2:

‘ಕೆಜಿಎಫ್ 2’ ಚಿತ್ರದ 17ನೇ ದಿನದ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದೆ. ಅಜಯ್​ ದೇವಗನ್ ನಟನೆಯ ‘ರನ್​ವೇ 34’ ಹಾಗೂ ‘ಹೀರೋಪಂತಿ 2’ ಚಿತ್ರವನ್ನು ‘ಕೆಜಿಎಫ್ 2’ ಕಲೆಕ್ಷನ್ ಹಿಂದಿಕ್ಕಿದೆ.ಈ ಸಿನಿಮಾದ ಕಲೆಕ್ಷನ್​ಗೆ ಸರಿಸಾಟಿಯಾಗಿ ನಿಲ್ಲೋಕೆ ಹೊಸ ಸಿನಿಮಾಗಳಿಂದ ಸಾಧ್ಯವಾಗುತ್ತಿಲ್ಲ.
ಈಗಾಗಲೇ ಹಿಂದಿ ಬಾಕ್ಸ್ ಆಫೀಸ್​​ನಲ್ಲಿ 360 ಕೋಟಿ ರೂಪಾಯಿ ಗಳಿಸಿರುವ ಈ ಸಿನಿಮಾ 400 ಕೋಟಿ ರೂಪಾಯಿಯತ್ತ ಧಾಪುಗಾಲು ಹಾಕುತ್ತಿದೆ. ಶೀಘ್ರವೇ ಈ ಚಿತ್ರ ‘ದಂಗಲ್’ ಕಲೆಕ್ಷನ್ ಹಿಂದಿಕ್ಕುವ ಸಾಧ್ಯತೆ ಇದೆ. ಈ ಮಧ್ಯೆ, ಈ ವಾರ ತೆರೆಗೆ ಬಂದ ಹೊಸ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ದುಡ್ಡು ಮಾಡಲು ಒದ್ದಾಡುತ್ತಿರುವ ಈ ಸಂದರ್ಭದಲ್ಲಿ ಕೆಜಿಎಫ್ 2 ಒಳ್ಳೆಯ ಗಳಿಕೆ ಮಾಡುತ್ತಿದೆ.

‘ಕೆಜಿಎಫ್ 2’ ತೆರೆಗೆ ಬಂದು ಇಂದಿಗೆ (ಮೇ 1​) 18 ದಿನ ಕಳೆದಿದೆ. ಯಶ್ ಸಿನಿಮಾ ಅಬ್ಬರ 18ನೇ ದಿನವೂ ಜೋರಾಗಿಯೇ ಇದೆ. ಸದ್ಯ, 17ನೇ ದಿನದ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದೆ. ಅಜಯ್​ ದೇವಗನ್ ನಟನೆಯ ‘ರನ್​ವೇ 34’ ಹಾಗೂ ‘ಹೀರೋಪಂತಿ 2’ ಚಿತ್ರವನ್ನು ‘ಕೆಜಿಎಫ್ 2’ ಕಲೆಕ್ಷನ್ ಹಿಂದಿಕ್ಕಿದೆ. ಈ ಮೂಲಕ ಯಶ್ ಸಿನಿಮಾ ಮೇಲುಗೈ ಸಾಧಿಸಿದೆ.

ಪಿಎಸ್‌ಐ ಪರೀಕ್ಷೆ ಅಕ್ರಮ: ಬೆಂಗಳೂರಿನಲ್ಲಿ 22 ಅಭ್ಯರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲು

‘ರನ್​ವೇ 34’ ಹಾಗೂ ‘ಹೀರೋಪಂತಿ 2’ ಚಿತ್ರಕ್ಕೆ ಏಪ್ರಿಲ್ 30 ಎರಡನೇ ದಿನ. ಆದರೆ, ಯಶ್ ಚಿತ್ರಕ್ಕೆ ಇದು 17ನೇ ದಿನ. ಹಾಗಿದ್ದರೂ ಎರಡೂ ಚಿತ್ರಗಳ ಕಲೆಕ್ಷನ್​ಅನ್ನು ಕನ್ನಡದ ಸಿನಿಮಾ ಹಿಂದಿಕ್ಕಿದೆ. ‘ಕೆಜಿಎಫ್ 2’ ಸಿನಿಮಾ ಹಿಂದಿ ವರ್ಷನ್​ನಿಂದ ಶನಿವಾರ 7.25 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಗಳಿಕೆ 360.31 ಕೋಟಿ ರೂಪಾಯಿ ಆಗಿದೆ.

ಇಂದಿನಿಂದ ಪ್ರಧಾನಿ ಮೋದಿ 3 ದಿನ ವಿದೇಶ ಪ್ರವಾಸ: ಜರ್ಮನಿ, ಡೆನ್ಮಾರ್ಕ್, ಫ್ರಾನ್ಸ್ ಗೆ ನಮೋ ಭೇಟಿ

‘ರನ್​ವೇ 34’ ಸಿನಿಮಾ 5 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನಲಾಗುತ್ತಿದೆ. ‘ಹೀರೋಪಂತಿ 2’ ಸಿನಿಮಾ ಗಳಿಕೆ 5.50 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಚಿತ್ರದ ಕಲೆಕ್ಷನ್ ಅನುಕ್ರಮವಾಗಿ 8 ಕೋಟಿ ರೂಪಾಯಿ ಹಾಗೂ 12.50 ಕೋಟಿ ರೂಪಾಯಿ ಆಗಿದೆ.

ಬಾಲಿವುಡ್​ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿ ‘ಬಾಹುಬಲಿ 2’ ಚಿತ್ರಕ್ಕೆ ಇದೆ. ಈ ಸಿನಿಮಾ 500+ ಕೋಟಿ ರೂಪಾಯಿ ಗಳಿಸಿತ್ತು. ಇನ್ನು, ದಂಗಲ್​ ಸಿನಿಮಾ 387 ಕೋಟಿ ರೂಪಾಯಿ ಗಳಿಸಿ, ಎರಡನೇ ಸ್ಥಾನದಲ್ಲಿದೆ. ಈ ಸ್ಥಾನವನ್ನು ‘ಕೆಜಿಎಫ್ 2’ ಕಿತ್ತುಕೊಳ್ಳುವ ಸಾಧ್ಯತೆ ಇದೆ.

ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನಲ್ಲಿ ಬ್ರಿಡ್ಜ್ ಕೋರ್ಸ್‌

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap