ಬೆಂಗಳೂರು;
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ರಾಜ್ಯ ಗುತ್ತಿಗೆ ಶುಕ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೌಕರರ ಬೇಡಿಕೆಗಳನ್ನು ನೀಡಲು ಸರ್ಕಾರ ಗಂಭೀರವಾಗಿ ಪರಿಗಣಿಸಿರುವುದಿಲ್ಲ ಯಾವುದೇ ತೃಪ್ತಿಕರ ಪರಿಹಾರವನ್ನು ವಿಫಲವಾಗಿದ್ದಾರೆ .
ಆದರಿಂದ ದಿನಾಂಕ: 24-02-2025 ‘ರಂದು ಸಂಘದ ಹಕ್ಕುಗಳನ್ನು ಈವರೆಗೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಶಾಂತಿಯುತ ಹೋರಟವನ್ನು ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆಯನ್ನು ಆರಂಭಿಸುತ್ತೀದ್ದೇವೆ ಎಂದು ರಾಜ್ಯಾಧ್ಯಕ್ಷರಾದ ರಾಧಾಸುರೇಶ್ ಪಿ. ಎನ್, ಕಾರ್ಯದರ್ಶಿ ಸೌಮ್ಯ, ಸಂಘಟನೆ ಕಾರ್ಯದರ್ಶಿ ಯುವರಾಜ್ ದೊಡ್ಡಮನೆ, ತಿಳಿಸಿದರು
ಬೇಡಿಕೆಗಳು;
1. ನಮ್ಮ “ಸೇವೆಯನ್ನು ಖಾಯಂ” ಮಾಡಬೇಕು.
2. ಸುಪ್ರಿಂ ಕೋಟ್ರ್ ನ ಆದೇಶದಂತೆ “ಸಮಾನ ಕೆಲಸಕ್ಕೆ ಸಮಾನ ವೇತನ” ನಿಗಧಿಪಡಿಸಬೆಕು. [ಕನಿಷ್ಠ ಪಕ್ಷ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ಶುಕ್ರೂಷಾಧಿಕಾರಿಗಳಿಗೆ ಮೂಲ ವೇತನ ಕೊಟ್ಟಂತೆ ನಿಗದಿ ಪಡಿಸಬೇಕು.]
3. ಮುಂಬರುವ ವಿಶೇಷ ನೇರ ನೇಮಕಾತಿಯಲ್ಲಿ ಜೇಷ್ಠತೆಯ ಆಧಾರದ ಮೇಲೆ ಕೃಪಾಂಕ ಮತ್ತು ವಯೋಮಿತಿ ಸಡಲಿಕೆಯನ್ನು ನೀಡಬೇಕು.
4. ಜಿಲ್ಲೆ ಯಿಂದ ಜಿಲ್ಲೆಗೆ ವರ್ಗವಣೆ ನಿಡಬೇಕು.
