ತುಮಕೂರು :
ಸಿ.ಎಸ್.ಪುರ ಹೋಬಳಿ ಮಾವಿನಹಳ್ಳಿ ಹತ್ತಿರ ಹೊಸಹಳ್ಳಿ ಗೇಟ್ ನಲ್ಲಿ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಗೆ ಪೈಪ್ ಗಳನ್ನೂ ಲಾರಿಯಲ್ಲಿ ಪ್ರತಿಭಟನೆಯ ನಡುವೆಯೂ ಸಾಗಿಸಲಾಗುತ್ತಿದೆ
ತುಮಕೂರು ಜಿಲ್ಲೆಗೆ ಹರಿಯುವ ಹೇಮಾವತಿ ನದಿ ನೀರನ್ನು ರಾಮನಗರ ಜಿಲ್ಲೆಗೆ ತೆಗೆದುಕೊಂಡು ಹೋಗುತ್ತಿರುವ ಹಿನ್ನೆಲೆ ಮೇ 16 ರಂದು ಪ್ರತಿಭಟನೆ ನಡೆಸಿದ್ದರು ಕೂಡಾ ಯಾವುದಕ್ಕೂ ಜಗ್ಗದ ಸರಕಾರ ಕಾಮಗಾರಿ ಮುಂದುವರಿಸಲು ಲಾರಿಗಳ ಮುಖಾಂತರ ಬೃಹತ್ ಗಾತ್ರದ ಪೈಪ್ ಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗುಬ್ಬಿ ಶಾಸಕರು ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದು, ಇದೀಗ ಲಾರಿಯ ಮೂಲಕ ಲಿಂಕ್ ಕೆನಾಲ್ ಕಾಮಗಾರಿ ಪೈಪ್ ಸಾಗಣೆ ಆಗುತ್ತಿದ್ದು, ಕಳೆದ ಮೇ 16 ರಂದು ನಡೆದ ರೈತರ ಪ್ರತಿಭಟನೆಗೆ ಬೆಲೆ ಕೊಡದೆ ಯಾರು ಏನಾದರೂ ಮಾಡಿಕೊಳ್ಳಲ್ಲಿ ಎಂಬಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಬಂದಂತೆ ಕಾಣುತ್ತದೆ.
ಜೂನ್ 05 ವರೆಗೆ ಸರ್ಕಾರಕ್ಕೆ ಹೋರಾಟಗಾರರು ಕಾಲಾವಕಾಶ ಕೊಟ್ಟರೆ ಅದಕ್ಕೂ ಜಗ್ಗದೇ ಇರುವುದು ಮಾಡುವ ಕೆಲಸ ಮಾಡೆ ಮಾಡುತ್ತೇವೆ ಎಂಬ ದೃಢ ನಿರ್ಧಾರ ಮಾಡಿರುವಂತೆ ಕಾಣುತ್ತದೆ. ಇದಕ್ಕೆ ಸಚಿವರ ರಿಯಾಕ್ಷನ್ ಏನು ಎಂಬುದನ್ನು ತಿಳಿಯಬೇಕಿದೆ.