ತುಮಕೂರು:
ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಹೊತ್ತಿನಲ್ಲಿ ರಾಜಕೀಯ ಮುಖಂಡರು ಮತದಾರರನ್ನು ಸೆಳೆಯಲು ಆಮೀಷ ಒಡ್ಡಲು ಮುಂದಾಗುತ್ತಿದ್ದಾರೆ. ಕುಣಿಗಲ್‍ನಲ್ಲಿ ಮತದಾರರಿಗೆ ಹಂಚಲು ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ 73 ಕುಕ್ಕರ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕುಕ್ಕರ್ ಬಾಕ್ಸ್ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಸಂಸದ, ಶಾಸಕರ ಭಾವಚಿತ್ರಗಳಿವೆ. ಜೊತೆಗೆ ಬಾಕ್ಸ್ ಮೇಲೆ ಹೊಸ ವರ್ಷ ಹಾಗೂ ಸಂಕ್ರಾತಿ ಶುಭಾಶಯಗಳು ಎಂದು ಮುದ್ರಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಇದೀಗ ಎಲ್ಲಾ ಕುಕ್ಕರ್‍ಗಳನ್ನು ವಶಕ್ಕೆ ಪಡೆದಿದ್ದಾರೆ