ಕಲ್ಬುರ್ಗಿ:
ಸಂಪಾದಕರಾದ ಎಸ್. ನಾಗಣ್ಣ, ಹುಣಸವಾಡಿ ರಾಜನ್‍ಸೇರಿ ಸಾಧಕ ಪತ್ರಕರ್ತರಿಗೆ ಸನ್ಮಾನ
ರಾಜ ಸರಕಾರ ಸಣ್ಣ ಮತ್ತು ಜಿಲ್ಲಾ ಪತ್ರಿಕೆ ಗಳನ್ನು ಜೀವಂತವಾಗಿರಿಸಲು ಸದಾ ಬದ್ಧವಿದ್ದು, ಜಾಹೀರಾತು ಸಹಕಾರ, ಗ್ರಾಮೀಣ ಪತ್ರಕರ್ತ ರಿಗೆ ಬಸ್ ಪಾಸ್, ಹೆಲ್ತ್ ಕಾರ್ಡ್ ನೀಡಲು ಪ್ರಸಕ್ತ ಬಜೆಟ್ ನಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕರ್ನಾಟಕ ಕಾರ್ಯ ನಿರತ ಪತ್ರ ಕರ್ತರ ಸಂಘದ ರಾಜ್ಯ ಹಾಗೂ ಕಲ್ಬುರ್ಗಿ ಜಿಲ್ಲಾ ಘಟಕದಿಂದ
ಏರ್ಪಡಿಸಿದ್ದ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿ ದರು
ಪತ್ರಿಕೆ ಯನ್ನು ನಡೆಸುವುದು ತುಂಬಾ ಕಷ್ಟದ ಸಂಗತಿ ಎಂಬುದು ಅರಿವಿದೆ. ಅನೇಕ ಸವಾಲುಗಳ ನಡುವೆಯೇ ಪತ್ರ ಕರ್ತರು ಕಾರ್ಯನಿರ್ವಹಿಸುತ್ತಿದ್ದು, ರಾಜಕಾರಣಿಗಳು-ಪತ್ರಕರ್ತರ ನಡುವೆ ಸುದ್ದಿ ಸಮಾಚಾರಕ್ಕಾಗಿ ಸದಾ ನಂಟು ಇದ್ದೇ ಇರುತ್ತದೆ.
ಸಾಮಾಜಿಕ ಅರಿವು ನೊಂದಿಗೆ ಸಮಾಜದ ಅಭ್ಯುದಯ ಕ್ಕಾಗಿ ನಾವೆಲ್ಲರೂ ಜೊತೆ ಗೂಡಿ ಸಾಗಬೇಕಿದೆ ಎಂದರು.
ಪ್ರಸರಣದ ಆಧಾರದಲ್ಲಿ ಸುದ್ದಿ ಪತ್ರಿಕೆ ಯನ್ನು ಅಳೆಯಲಾಗದು. ಸುದ್ದಿ ಯ ಮೌಲ್ಯದ ಆಧಾರದ ಲ್ಲಿ ಪತ್ರಿಕೆ ಯ ಘನತೆಯನ್ನು ಓದುಗರು ನಿರ್ಣಯಿಸುತ್ತಾರೆ. ಅಂತಃಕರಣ ದ ವಿಷಯವನ್ನು ಸಮಾಜಕ್ಕೆ ಮುಟ್ಟಿಸಬೇಕು ಎಂದರು.
ಪತ್ರಿಕಾ ರಂಗಕ್ಕೆ ಮೌಲ್ಯಗಳನ್ನು ಪುನರ್ ಪ್ರತಿಷ್ಠಾಪಿಸುವ ಅವಶ್ಯಕತೆ ಇದೆ ಎಂದ ಸಿಎಂ ಅವರು ಕೋವಿಡ್ ವಾರಿಯರ್ಸ್ ಗಳಾಗಿ ಪತ್ರ ಕರ್ತರು ಉತ್ತಮ ಕೆಲಸ ಮಾಡಿದ್ದಾರೆಂದರು.
ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷ ತೆ ವಹಿಸಿದ್ದರು. ಪೂಜ್ಯ ಬಸವರಾಜ ಪ್ಪ ಅಪ್ಪ ಶ್ರೀ ಗಳು ಸಾನಿಧ್ಯ ವಹಿಸಿದ್ದರು. ಹಿರಿಯ ಪತ್ರಕರ್ತ ರಾದ ಹರಿಪ್ರಕಾಶ್ ಕೋಣೆಮನೆ ಮೊದಲ ಮಾತು, ಚನ್ನೇಗೌಡರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಚಿವ ಮುರುಗೇಶ್ ನಿರಾಣಿ, ಸಂಸದ ಉಮೇಶ್ ಜಾದವ್, ಶಾಸಕ ಅಜಯ್ ಸಿಂಗ್,
ರಾಷ್ಟ್ರೀಯ ಅಧ್ಯಕ್ಷ ಬಿ. ವಿ. ಮಲ್ಲಿಕಾ ರ್ಜುನಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾ ರ್ಜುನ್, ಲೋಕೇಶ್, ಕಲ್ಬುರ್ಗಿ ಜಿಲ್ಲಾ ಧ್ಯಕ್ಷರಾದ ಭವಾನಿ ಸಿಂಗ್,
ತುಮಕೂರು ಜಿಲ್ಲಾಧ್ಯಕ್ಷ ಚಿ. ನಿ. ಪುರುಷೋತ್ತಮ್ ಪದಾಧಿಕಾರಿಗಳಾದ ಎನ್. ಡಿ. ರಂಗರಾಜು, ಮಾರುತಿ ಪ್ರಸಾದ್, ಶಾಂತರಾಜು, ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯ ಆರ್. ನಾಗರಾಜ್ ಸೇರಿದಂತೆ ಹಲವು ನಿರ್ದೇಶಕ ರು ಗಳು
ಇದೇ ವೇಳೆ ಪ್ರಜಾಪ್ರಗತಿ ಸಂಪಾದಕರೂ ರಾಜ್ಯ ರೆಡ್ ಕ್ರಾಸ್ ಸಭಾಪತಿ ಗಳೂ ಆದ ಎಸ್. ನಾಗಣ್ಣ, ಹಿರಿಯ ಸಂಪಾದಕರಾದ ಹುಣಸವಾಡಿ ರಾಜನ್ ಸೇರಿದಂತೆ ಹಲವು ಹಿರಿಯ ಪತ್ರಕರ್ತ ರಿಗೆ ಸಂಘದ ಪ್ರಶಸ್ತಿ ಯನ್ನು ಸಿಎಂ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಿದರು.
ಸಂಜೆ ಸಮಾರೋಪ ನಡೆಯಿತು.. ಮೊದಲ ದಿನ ಸೋಮವಾರ ಸಂಘದ ಸರ್ವ ಸದಸ್ಯರ ಸಭೆ ನಡೆದು ಫೆಬ್ರವರಿ 26ರೊಳಗೆ ರಾಜ್ಯ ಹಾಗೂ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಸಲು ತೀರ್ಮಾನಿಸಲಾಯಿತು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಗೆ 3000ಕೋಟಿ ಅನುದಾನ ಒದಗಿಸಲು ಸರಕಾರ ಕ್ರಿಯಾಯೋಜನೆ ರೂಪಿಸಿದ್ದು ವರ್ಷದ ಕಾಲಮಿತಿ ಯೊಳಗೆ ಅನುಷ್ಠಾನ ಗೊಳಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ನುಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ