ತುಮಕೂರು :
ತುಮಕೂರಿನ ರೈಲ್ವೆ ಸ್ಟೇಷನ್ 24 ಗಂಟೆಯೂ ಜನಜನಿತ ವಾಗಿರುವ ಜಾಗವಾಗಿದ್ದು ಇಲ್ಲಿ ಸೋಲಾರ್ ಟ್ಯಾಂಕ್ ಗೆ ಅಳವಡಿಸಿರುವ ಕಾಪರ್ ಟ್ಯಾಂಕ್ ಗಳನ್ನು ಒಂದು ವಾರದಲ್ಲಿ ಎರಡು ಕಳವು ಮಾಡಿ ಕಳ್ಳರು ಹೊತ್ತೊಯ್ದಿದ್ದಾರೆ.
ತುಮಕೂರಿನ ಪತಿಷ್ಠಿತ ಬಡಾವಣೆ ಗಾಂಧಿನಗರದ ಕೆ ವಿ ನಟರಾಜು ರವರ ಮನೆಯ ಮೇಲೆ ಅಳವಡಿಸಿದ್ದ ಸೋಲಾರ್ ಟ್ಯಾಂಕ್ ನ ಕಾಪರ್ ಟ್ಯಾಂಕನ್ನು ಕಳ್ಳರು ಕಲವುಮಾಡಿದ್ದರು ಹಾಗೂ ಇತ್ತೀಚೆಗೆ ಈ ಬಡಾವಣೆಯಲ್ಲಿ ಸಣ್ಣ ಪುಟ್ಟ ಕಳ್ಳತನವಾಗುತ್ತಿದ್ದರು ಇಲ್ಲಿನ ಪೊಲೀಸ್ ವ್ಯವಸ್ಥೆ ಜಾಣ ಮೌನ ವಹಿಸಿರುವುದು ಕಳ್ಳರಿಗೆ ಸಲೀಸಾಗಿದೆ ಎಂದು ಇಲ್ಲಿನ ಪ್ರಜ್ಞಾವಂತ ನಾಗರೀಕರು ಮಾತನಾಡುತ್ತಿದ್ದಾರೆ.
ಈ ಬಗ್ಗೆ ಬಾಡಿಗೆದಾರರು ದೂರು ನೀಡಲು ಹೋದಾಗ ಮನೆಯ ಮಾಲೀಕರೆ ದೂರು ನೀಡಬೇಕು ಎಂದು ಸಬೂಬು ಹೇಳಿ ವಾಪಸ್ಸು ಕಳಿಸಿರುವುದು ವಿಪರ್ಯಾಸದ ಸಂಗತಿ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ವಾಸವಿರುವ ಈ ಬಡಾವಣೆಯಲ್ಲೇ ಹೀಗಾದರೆ ಇನ್ನು ತುಮಕೂರು ನಗರಾದ್ಯಂತ ಏನು ರಕ್ಷಣೆಯಾಗಬಹುದು.