ನವದೆಹಲಿ:
ಕಳೆದ 24 ಗಂಟೆಗಳಲ್ಲಿ 22 ಸಾವಿರ ಮಂದಿಗೆ ಸೋಂಕು
ಜ.1- ದೇಶದಲ್ಲಿ 3 ನೆ ಅಲೆಯ ಭೀತಿ ನಡುವೆಯೇ ಕೊರೊನಾ ಸ್ಫೋಟಗೊಂಡಿದ್ದು ಕಳೆದ 24 ಗಂಟೆಗಳಲ್ಲಿ 22,775 ಮಂದಿ ಸೋಂಕು ಕಂಡುಬಂದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸಚಿವಾಲಯ ವರದಿ ಮಾಡಿದೆ.
ಕಳೆದ ಅಕ್ಟೋಬರ್ 3 ರಂದು ದೇಶದಲ್ಲಿ 22,842 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸೋಂಕು ಕಾಣಿಸಿಕೊಳ್ಳುವ ಮೂಲಕ ದೇಶದಲ್ಲಿ ಸೋಂಕಿತರ ಪ್ರಮಾಣ 3,48,61,579 ಕ್ಕೇರಿದೆ.
ಕಳೆದ 24 ಗಂಟೆಗಳಲ್ಲಿ 406 ಮಂದಿ ಮೃತಪಟ್ಟರೆ ಇದುವರೆಗೂ 4,81,486 ಮಂದಿ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ.ಇದೇ ವೇಳೆ ಕಳೆದ 24 ಗಂಟೆಗಳಲ್ಲಿ 8949 ಮಂದಿ ಗುಣಮುಖರಾಗುವ ಮೂಲಕ ಇದುವರೆಗೂ 3,42,75,312 ಮಂದಿ ಗುಣಮುಖರಾಗಿದ್ದರೆ, 1,04,781ಸಕ್ರಿಯ ಪ್ರಕರಣಗಳಿವೆ.
ಇದೇ ವೇಳೆ ಓಮಿಕ್ರಾನ್ ಸೋಂಕು ಪ್ರಮಾಣ ಕೂಡ ಹೆಚ್ಚಾಗಿದ್ದು ಸೋಂಕಿನ ಪ್ರಮಾಣ 1400 ರೆ ಗಡಿ ಮುಟ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸಚಿವಾಲಯ ವರದಿ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ