ನವದೆಹಲಿ :
ಒಂದೇ ದಿನ 1,94,720 ಕೇಸ್ ಪತ್ತೆ, 442 ಮಂದಿ ಸಾವು
ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ (Corona Virus) ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,94,720 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,94,720 ಕೊರೊನಾ ಕೇಸ್ ಪತ್ತೆಯಾಗಿದ್ದು, 442 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಸದ್ಯಕ್ಕೆ ದೇಶದಲ್ಲಿ 9,55,319 ಕೊರೊನಾ ಸಕ್ರಿಯ ಪ್ರಕರಣಗಳಿವೆ.
ಕಳೆದ 24 ಗಂಟೆಗಳಲ್ಲಿ 1,94,720 ಹೊಸ ಕೋವಿಡ್ ಪ್ರಕರಣಗಳು, 60,405 ಚೇತರಿಕೆಗಳು ಮತ್ತು 442 ಸಾವುಗಳು ಎಂದು ಭಾರತ ವರದಿ ಮಾಡಿದೆ
ಸಕ್ರಿಯ ಪ್ರಕರಣ: 9,55,319
ಪಾಸಿಟಿವಿಟಿ ದರ : 11.05%
ಒಮೈಕ್ರಾನ್ ನ ದೃಢೀಕೃತ ಪ್ರಕರಣಗಳು: 4,868
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ