ಕೊರೊನಾದಿಂದ ಮೃತಪಟ್ಟ ಪೊಲೀಸರ​ ಕುಟುಂಬಕ್ಕೆ 30 ಲಕ್ಷ !!

 ಬೆಂಗಳೂರು:

      ಮಹಾಮಾರಿ ಕೊರೊನಾ ಗೆ ಮೃತಪಟ್ಟ ಮೂವರು ಪೊಲೀಸರ ಕುಟುಂಬಕ್ಕೆ 30 ಲಕ್ಷ ಪರಿಹಾರ ಘೋಷಣೆಯಾಗಿದ್ದು, ಇನ್ನೆರಡು ದಿನದಲ್ಲಿ ಬಿಡುಗಡೆಯಾಗಲಿದೆ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

      ಇತ್ತೀಚೆಗೆ ಪೊಲೀಸ್ ರಲ್ಲಿ ಕೊರೊನಾ ಸೋಂಕು ಹೆಚ್ಚಳಗೊಂಡಿರುವ ಹಿನ್ನೆಲೆ ಯಲ್ಲಿ‌ ಈ ಕುರಿತು ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆ ಫೋರ್​ಫ್ರಂಟ್​ನಲ್ಲಿದ್ದು, ಸಾವು, ಕಂಟೈನ್​ಮೆಂಟ್​ ಪ್ರದೇಶ ನಿಯಂತ್ರಣ ಮಾಡುವುದರ ಜೊತೆಗೆ ಜನರ ರಕ್ಷಣೆ ಮಾಡುವ ಹೊಣೆಯೂ ಪೊಲೀಸರ ಮೇಲಿದೆ. ಆದ್ದರಿಂದ ನಮ್ಮ ಸಿಬ್ಬಂದಿಯಲ್ಲಿ ಅಧಿಕ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಅವರು ತಿಳಿಸಿದರು.

      ಬೆಂಗಳೂರಿನಲ್ಲಿ ಪೊಲೀಸರಿಗಾಗಿಯೇ ಪ್ರತ್ಯೇಕ ಚಿಕಿತ್ಸೆ ನೀಡಲು ಐದು ಕೋವಿಡ್-19 ಆಸ್ಪತ್ರೆ ಗುರುತಿಸಲಾಗಿದೆ. ಸೋಂಕಿತರಿಗೆ ಉತ್ತಮ ಚಿಕಿತ್ಸೆ ದೊರಕಬೇಕು. ಅಲ್ಲದೇ, ತಪಾಸಣೆ ತಡವಾಗಬಾರದು ಎಂಬ ಉದ್ದೇಶದಿಂದ ಪೊಲೀಸರಿಗೆ ಹೆಚ್ಚು ತಪಾಸಣೆ ಸೆಂಟರ್ ಕೇಳಲಾಗಿದ್ದು, ಈ ಕುರಿತು ಎಸಿಎಸ್ ಅವರೊಂದಿಗೆ ಮಾತನಾಡಿದ್ದೇನೆ ಎಂದ ಅವರು ಪ್ರತ್ಯೇಕ ಆಸ್ಪತ್ರೆ, ಟೆಸ್ಟಿಂಗ್ ಘಟಕ ನೀಡಲಿದ್ದಾರೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap