ದೇಶಾದ್ಯಂತ ಒಂದೇ ದಿನ 59,118 ಮಂದಿಗೆ ಕೊರೋನಾ ದೃಢ!!

ನವದೆಹಲಿ : 

      ದೇಶದಲ್ಲಿ ಕೊರೋನಾ ಅಬ್ಬರ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 59,118 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. 

     ಈ ಕುರಿತಂತೆ ಕೇಂದ್ರ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು 59,118 ಜನರಿಗೆ ಹೊಸ ಕೋವಿಡ್-19 ಪ್ರಕರಣಗಳು ಭಾರತದಲ್ಲಿ ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 32,987 ಚೇತರಿಕೆ ಹಾಗೂ 257 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

     ಹೊಸ ಏರಿಕೆಯೊಂದಿಗೆ, ಭಾರತದ ಕೇಸ್ ಸಂಖ್ಯೆ 1,18,46,652 ಕ್ಕೆ ತಲುಪಿದೆ. ಇದುವರೆಗೆ 1,12,64,637 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ದೇಶಾದ್ಯಂತ 4,21,066 ಸಕ್ರೀಯ ಕೊರೋನಾ ಸೋಂಕಿತರು ಇರುವುದಾಗಿ ತಿಳಿಸಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap