ಚೀನಾ ಲಸಿಕೆ ಪಡೆದ ಎರಡೇ ದಿನಕ್ಕೆ ಇಮ್ರಾನ್ ಖಾನ್​ಗೆ ಕೊರೊನಾ ಪಾಸಿಟಿವ್!!

ಇಸ್ಲಾಮಾಬಾದ್:

     ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಮನೆಯಲ್ಲೇ ಐಸೋಲೇಶನ್ ಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

     ಅಚ್ಚರಿಯ ಸಂಗತಿ ಎಂದರೆ ಇಮ್ರಾನ್ ಖಾನ್ ಇತ್ತೀಚೆಗೆ ಚೀನಾದ ಸಿನೋಫಾರ್ಮ್ ವ್ಯಾಕ್ಸಿನ್ ಪಡೆದುಕೊಂಡಿದ್ದು, ಲಸಿಕೆ ಪಡೆದ 48 ಗಂಟೆಯೊಳಗಾಗಿ ಕೊರೊನಾ ಪಾಸಿಟಿವ್ ಬಂದಿದೆ.

     ಇಮ್ರಾನ್ ಖಾನ್ಗೆ ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ಸಹ ಮುಂಜಾಗೃತಾ ಕ್ರಮವಾಗಿ ಐಸೋಲೇಶನ್ ಗೆ ಒಳಗಾಗಿದ್ದು, ವೈದ್ಯರು ಅವರ ಆರೋಗ್ಯದ ಕುರಿತು ತೀವ್ರ ನಿಗಾ ಇರಿಸಿದ್ದಾರೆ. ಪಾಕಿಸ್ತಾನದಲ್ಲಿ ಈ ಮೊದಲು ಸಹ ಕೊರೊನಾ ಸೋಂಕು ಉಲ್ಬಣಿಸಿದ್ದು, ಇತ್ತೀಚೆಗಷ್ಟೇ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಲಸಿಕೆಯನ್ನು ಕಳುಹಿಸಿಕೊಟ್ಟಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ