ತುಮಕೂರು : ಒಂದೇ ದಿನ 1308 ಮಂದಿಗೆ ಕೊರೊನಾ ದೃಢ ; 6 ಸಾವು!!

 ತುಮಕೂರು : 

      ಜಿಲ್ಲೆಯಲ್ಲಿ ಹೊಸದಾಗಿ 1308 ಮಂದಿಯಲ್ಲಿ ಬುಧವಾರ ಸೋಂಕು ದೃಢಪಟ್ಟಿದ್ದು,ಕೋವಿಡ್‍ನಿಂದ ಇಬ್ಬರು, ಕೋವಿಡ್ ಜೊತೆಗೆ ಅನ್ಯಕಾರಣದಿಂದ ನಾಲ್ವರು ಸೇರಿ ಆರು ಮಂದಿ ಮೃತರಾಗಿದ್ದಾರೆ.

      ಸೋಂಕಿತರ ಪೈಕಿ ಚಿ.ನಾ.ಹಳ್ಳಿ 50, ಗುಬ್ಬಿ 36, ಕೊರಟಗೆರೆ 129, ಕುಣಿಗಲ್ 30, ಮಧುಗಿರಿ 54, ಪಾವಗಡ 57, ಶಿರಾ 140, ತಿಪಟೂರು 131, ತುಮಕೂರು 650, ತುರುವೇಕೆರೆಯಲ್ಲಿ 31 ಪ್ರಕರಣಗಳು ಕಂಡುಬಂದಿದ್ದು, ಸೋಂಕಿತರ ಪೈಕಿ 735 ಪುರುಷರು, 573 ಮಹಿಳೆಯರಿದ್ದು, 5 ಷರ್ವದೊಳಗಿನ ಹತ್ತು ಮಕ್ಕಳು, 201 ಹಿರಿಯ ನಾಗರಿಕರು ಸೇರಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 10,794ಕ್ಕೆ ಏರಿಕೆಯಾಗಿದ್ದು, 465 ಮಂದಿ ಬಿಡುಗಡೆ ಹೊಂದಿದ್ದಾರೆ.

      ಮೃತರ ಪೈಕಿ ಗುಬ್ಬಿ ತಾಲೂಕು ಮಹಾಲಕ್ಷ್ಮೀ ನಗರದ 62 ವರ್ಷದ ವ್ಯಕ್ತಿ , ಮಧುಗಿರಿ ತಾಲೂಕು ಕತ್ತಿಗಾನಹಳ್ಳಿ ಗ್ರಾಮದ 41 ವರ್ಷದ ಮಹಿಳೆ, ತುಮಕೂರಿನ ಸೋಮೇಶ್ವರಬಡಾವಣೆ 60 ವರ್ಷದ ಮಹಿಳೆ, ಸರಸ್ವತಿ ಪುರಂನ 60 ವರ್ಷದ ವ್ಯಕ್ತಿ, ಶಿರಾಗೇಟ್‍ನ 46 ವರ್ಷದ ಪುರುಷ, ತುಮಕೂರು ತಾಲೂಕು ಕೊತ್ತಿಹಳ್ಳಿ ಗ್ರಾಮದ 47 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap