ಕೊರೊನಾ ನಾಲ್ಕನೇ ಅಲೆಗೆ ಈ ದೇಶ ತತ್ತರ, ನಿತ್ಯ 20 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿ

ನವದೆಹಲಿ:

 ಭಾರತದಲ್ಲಿ ಕೋವಿಡ್- 19 ನಾಲ್ಕನೇ ಅಲೆಯ ಬೆದರಿಕೆ ನಿರಂತರವಾಗಿ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನ್ಯೂಜಿಲೆಂಡ್ ದೇಶದಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

ನ್ಯೂಜಿಲೆಂಡ್ ನಲ್ಲಿ ಮಂಗಳವಾರ (ಮಾರ್ಚ್ 22, 2022) ಕರೋನವೈರಸ್‌ನ 20,907 ಹೊಸ ಪ್ರಕರಣಗಳನ್ನು ವರದಿಯಾಗಿವೆ. ದೇಶದಲ್ಲಿ ಕೊರೊನಾ ವೈರಸ್‌ನಿಂದ 15 ಜನರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 199 ಕ್ಕೆ ತಲುಪಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮಳೆ ಮುನ್ಸೂಚನೆ

ನ್ಯೂಜಿಲ್ಯಾಂಡ್ ನ ಅತಿ ದೊಡ್ಡ ಪಟ್ಟಣದಲ್ಲಿ ಅತಿ ಹೆಚ್ಚು ಪ್ರಕರಣಗಳು

ನ್ಯೂಜಿಲೆಂಡ್‌ನ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, 4,291 ಹೊಸ ಸಮುದಾಯ ಸೋಂಕು ಪ್ರಕರಣಗಳು ದೇಶದ ಅತಿದೊಡ್ಡ ನಗರವಾಗಿರುವ ಆಕ್ಲೆಂಡ್‌ ನಿಂದ ವರದಿಯಾಗಿವೆ ಎನ್ನಲಾಗಿದೆ. ಕ್ಯಾಂಟರ್ಬರಿಯಲ್ಲಿ 3,488 ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಉಳಿದ ಪ್ರಕರಣಗಳನ್ನು ಗುರುತಿಸಲಾಗಿದೆ ಎನ್ನಲಾಗಿದೆ. ನ್ಯೂಜಿಲೆಂಡ್ ಗಡಿಯಲ್ಲಿ 34 ಹೊಸ ಸೋಂಕುಗಳು ಕಂಡುಬಂದಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಆಸ್ಪತ್ರೆಗಳಲ್ಲಿನ ಪರಿಸ್ಥಿತಿ ಹೇಗಿದೆ?

ಪ್ರಸ್ತುತ ನ್ಯೂಜಿಲೆಂಡ್ ಆಸ್ಪತ್ರೆಗಳಲ್ಲಿ 1,016 ಕೋವಿಡ್-19 ರೋಗಿಗಳಿದ್ದಾರೆ, ಇದರಲ್ಲಿ 25 ಜನರು ಐಸಿಯು ಅಥವಾ ಹೈ ಡಿಪೆಂಡೆನ್ಸಿ ಯುನಿಟ್ ಗಳಲ್ಲಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳಿಂದಾಗಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ.

ಅಮೆರಿಕನ್ ಭೂತದ ಬಾಯಿಯಲ್ಲಿ ಭಗವದ್ಗೀತೆ

15 ರೋಗಿಗಳಲ್ಲಿ ಓರ್ವ ರೋಗಿಯ ಸಾವು

ನ್ಯೂಜಿಲೆಂಡ್ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಕೋವಿಡ್ -19 ನಿಂದ ಒಟ್ಟು 15 ಜನ ಮರಣಹೊಂದಿದ್ದಾರೆ ಎನ್ನಲಾಗಿದೆ, ಇದು ದೇಶದಲ್ಲಿನ ಒಟ್ಟು ಸಾವಿನ ಸಂಖ್ಯೆಯನ್ನು 199 ಕ್ಕೆ ಏರಿಸಿದೆ. ಸಾಂಕ್ರಾಮಿಕ ರೋಗದ ಹಾವಳಿ ಆರಂಭವಾದಾಗಿನಿಂದ ನ್ಯೂಜಿಲೆಂಡ್ ನಿಂದ ಇದುವರೆಗೆ 5,17,495 ಕರೋನವೈರಸ್ ಪ್ರಕರಣಗಳು ವರದಿಯಾಗಿವೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link