ಕಡತ ವಿಲೇವಾರಿ ವಿಳಂಬದ ಹಿಂದೆ ಭ್ರಷ್ಟಾಚಾರ : 2. 17 ಲಕ್ಷ ಕಡತಗಳನ್ನು ಬಾಕಿ ಉಳಿಸಿದ ಅಧಿಕಾರಶಾಹಿ ವ್ಯವಸ್ಥೆ

ಬೆಂಗಳೂರು :

ಕಡತ ವಿಲೇವಾರಿ ವಿಳಂಬದ ಹಿಂದೆ ಭ್ರಷ್ಟಾಚಾರವಿದೆ . ಉದ್ದೇಶಪೂರ್ವಕವಾಗಿ ಕಡತಗಳನ್ನು ಸಚಿವಾಲಯಗಳಲ್ಲಿ ಉಳಿಸಿಕೊಳ್ಳಲಾಗಿದೆ . ಅಭಿವೃದ್ಧಿ ಮಾಯವಾಗಿದೆ , ವರ್ಗಾವಣೆ ದಂಧೆ ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬರುತ್ತಿರುವ ನಡುವೆಯೂ 41 ಆಡಳಿತ ಇಲಾಖೆಗಳ ವ್ಯಾಪ್ತಿಯಲ್ಲಿ ಒಟ್ಟಾರೆ 2,17,015 ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದಿವೆ .ಇದರಲ್ಲಿ ಆಡಳಿತ ಇಲಾಖೆಗಳ ಮಧ್ಯೆ ಅಭಿಪ್ರಾಯ , ಅನುಮೋದನೆ , ಸಹಮತಿಗೆಂದು ಕಳಿಸಿರುವ 1,31,470 ಮತ್ತು ಆಯಾ ಇಲಾಖೆ ಹಂತದಲ್ಲೇ 85,545 ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದಿವೆ .

ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರದ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು , ಮತ್ತು ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿಗಳೊಂದಿಗೆ 20220 ಏಪ್ರಿಲ್ 11 ರಂದು ನಡೆದ ಸಭೆಯಲ್ಲಿ ಕಡತಗಳು ಧೂಳು ತಿನ್ನುತ್ತಿರುವ ವಿಚಾರವು ಬಹಿರಂಗವಾಗಿದೆ . ಈ ಸಭೆಗೆ ಇಲಾಖೆಗಳು ಮಂಡಿಸಿದ್ದ ಅಂಕಿ ಅಂಶಗಳು ‘ ದಿ ಫೈಲ್ ‘ ಗೆ ಲಭ್ಯವಾಗಿದೆ .

ಡಾ.ಬಿ.ಆರ್.ಅಂಬೇಡ್ಕರ್‌ ಅವರ 131ನೇ ಜಯಂತಿ : ಸಂವಿಧಾನ ಶಿಲ್ಪಿಯನ್ನು ಸ್ಮರಿಸಿದ ಪ್ರಧಾನಿ ಮೋದಿ, ರಾಹುಲ್

ಅಹಿತಕರ ಘಟನೆ , ಕೋಮುಗಲಭೆಗೆ ದಾರಿಮಾಡಿಕೊಡುವಂತಹ ಚಟುವಟಿಕೆಗಳು ನಡೆಯುತ್ತಿದ್ದರೂ ಮೌನ ವಹಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲಾಖೆ , ಅವರು ನಿಭಾಯಿಸುತ್ತಿರುವ ನಗರಾಭಿವೃದಿ ್ಧ ಇಲಾಖೆ ಧಾರ್ಮಿಕ ದ್ವೇಷ , ಅಸಹಿಷ್ಣುತೆ , ಪ್ರಚೋದಕ ಭಾಷಣಗಳಲ್ಲೇ ಕೋಮು ಮುಳುಗಿರುವ ಕೆ ಎಸ್ ಈಶ್ವರಪ್ಪ ಅವರು ನಿಭಾಯಿಸುತ್ತಿರುವ ಗ್ರಾಮೀಣಾಭಿವೃದ್ಧಿ ಪಂಚಾಯತ್‍ರಾಜ್ ಇಲಾಖೆ , ಪ್ರಕರಣಗಳ ಗಂಭೀರತೆ ಅರಿಯದೇ ಕೋಮು ಉದ್ವಿಗ್ನತೆಗೆ ಕಾರಣವಾಗುವ ಹೇಳಿಕೆ ನೀಡುವ ಅರಗ ಜ್ಞಾನೇಂದ್ರ ಅವರು ವಹಿಸಿಕೊಂಡಿರುವ ಗೃಹ ಇಲಾಖೆಯಲ್ಲಿಯೂ ಸಾವಿರಾರು ಸಂಖ್ಯೆಯಲ್ಲಿ ಕಡತಗಳು ಧೂಳು ತಿನ್ನುತ್ತಿವೆ .

ಹಿಜಾಬ್ , ಹಲಾಲ್ , ಜಟ್ಕಾ ಕಟ್ , ವಾಣಿಜ್ಯ ವಹಿವಾಟುಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ , ಧಾರ್ಮಿಕ ದ್ವೇಷ ಬಿತ್ತುವಂತಹ ಅಭಿಯಾನಗಳು ರಾಜ್ಯದಲ್ಲಿ ವೇಗ ಪಡೆದುಕೊಂಡಿರುವ ಹೊತ್ತಿನಲ್ಲೇ ಇಲಾಖೆಗಳ ಹಂತದಲ್ಲೇ 85,545 ಕಡತಗಳು ವಿಲೇವಾರಿಯಾಗದೇ ಆಡಳಿತವು ಬಾಕಿ ಉಳಿದಿರುವುದು ಚಲನಶೀಲತೆಯನ್ನೇ ಕಳೆದುಕೊಂಡಿದೆ ಎಂಬುದಕ್ಕೆ ಸಾಕ್ಷ್ಯ . ಒದಗಿಸಿಕೊಟ್ಟಂತಾಗಿದೆ .

ಪ್ರಾಥಮಿಕ ತನಿಖೆ ಆಗುವವರೆಗೂ ಈಶ್ವರಪ್ಪ ರಾಜೀನಾಮೆ ಪಡೆಯಲ್ಲ: ಸಿಎಂ ಬೊಮ್ಮಾಯಿ

2022 ರ ಫೆ .24 ರಿಂದ 2022 ರ ಏಪ್ರಿಲ್ 7 ರ ಇಷ್ಟೊಂದು ಅಂತ್ಯಕ್ಕೆ ಇ – ಆಫೀಸ್‍ನಲ್ಲಿಯೇ ಸಂಖ್ಯೆಯಲ್ಲಿ ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದಿರುವುದು ಭ್ರಷ್ಟಾಚಾರಕ್ಕೆ ಅನುಮಾನಗಳಿಗೆ ಆಸ್ಪದವಾಗಿದೆ ಎಂಬ ದಾರಿಮಾಡಿಕೊಟ್ಟಿದೆ .

2022 ರ ಫೆ .24 ರಿಂದ ಫೆ .24 ರಿಂದ 2022 ರ ಏಪ್ರಿಲ್ 7 ರ ಇಷ್ಟೊಂದು ಅಂತ್ಯಕ್ಕೆ ಇ – ಆಫೀಸ್‍ನಲ್ಲಿಯೇ ಸಂಖ್ಯೆಯಲ್ಲಿ ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದಿರುವುದು ಭ್ರಷ್ಟಾಚಾರಕ್ಕೆ ಆಸ್ಪದವಾಗಿದೆ ಅನುಮಾನಗಳಿಗೆ ಎಂಬ ದಾರಿಮಾಡಿಕೊಟ್ಟಿದೆ .

ಕಡತಗಳ ವಿಲೇವಾರಿಗೆ ಸಂಬಂಧಿಸಿದಂತೆ 12 ಇಲಾಖೆಗಳು ‘ ಸಿ ‘ ವರ್ಗದಲ್ಲಿದ್ದರೆ , 35 ಇಲಾಖೆಗಳು ‘ ಬಿ ‘ ವರ್ಗ , ಇನ್ನುಳಿದ 6 ಇಲಾಖೆಗಳು ಮಾತ್ರ ‘ ಎ ‘ ವರ್ಗದಲ್ಲಿವೆ . ಬೇರೆ ಬೇರೆ ಇಲಾಖೆಗಳಿಗೆ 1,31,470 ಕಡತಗಳ ಪೈಕಿ ಕಳಿಸಿರುವ ಎಫ್‍ಎಂಎಸ್‍ನಲ್ಲಿ 43,516 ಕಡತಗಳು ಎಫ್‍ಎಂಎಸ್‍ನಲ್ಲಿದ್ದರೆ ಇ – ಆಫೀಸ್‍ನಲ್ಲಿ 87,954 ಕಡತಗಳು ಬಾಕಿ ಇವೆ .

 ದ್ವಿಚಕ್ರ ವಾಹನ ಸವಾರರೇ ಗಮನಿಸಿ : 2 ಕಡೆ ಮಿರರ್, ಇಂಡಿಕೇಟರ್ ಇಲ್ಲದಿದ್ರೆ 500 ರೂ. ದಂಡ ಫಿಕ್ಸ್!

ಇಲಾಖೆ ಹಂತದಲ್ಲೇ ಇರುವ 85,545 ಕಡತಗಳ ಪೈಕಿ 43,516 ಕಡತಗಳು ಎಫ್‍ಎಂಎಸ್‍ನಲ್ಲಿ ಬಾಕಿ ಇದ್ದರೆ ಇನ್ನುಳಿದ 42,209 ಕಡತಗಳು ಇ – ಆಫೀಸ್ ನಲ್ಲಿ ಇಲಾಖಾ ಹಂತದಲ್ಲೇ ಬಾಕಿ ಉಳಿದಿವೆ .ಅಭಿಪ್ರಾಯ , ಸಹಮತ , ಅನುಮೋದನೆಗೆಂದು ಕಳಿಸಿರುವ ಕಡತಗಳಲ್ಲಿ ಅತಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಪೈಕಿ ನಗರಾಭಿವೃದ್ಧಿ ಇಲಾಖೆಯು ಅಗ್ರ ಸ್ಥಾನದಲ್ಲಿದೆ . 2022 ರ ಏಪ್ರಿಲ್ 7 ರ ಅಂತ್ಯಕ್ಕೆ ಈ ಇಲಾಖೆಯಲ್ಲಿ 12,465 ಕಡತಗಳು ಬಾಕಿ ಇವೆ

ಅದೇ ರೀತಿ ಎರಡನೇ ಸ್ಥಾನದಲ್ಲಿರುವ ಕಂದಾಯ ಇಲಾಖೆಯಲ್ಲಿ 11,221 ಕಡತಗಳು ಬಾಕಿ ಇವೆ . ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಒಳಾಡಳಿತ 10,366 , ಇಲಾಖೆಯಲ್ಲಿ 8,317 , ಆರ್ಥಿಕ ಇಲಾಖೆಯಲ್ಲಿ 7,364 , ಪ್ರಾಥಮಿಕ ಪ್ರೌಢಶಿಕ್ಷಣ ಇಲಾಖೆಯಲ್ಲಿ 8,362 , ಜಲ ಸಂಪನ್ಮೂಲ ಇಲಾಖೆಯಲ್ಲಿ 6,018 , ವಾಣಿಜ್ಯ ಕೈಗಾರಿಕೆ ಇಲಾಖೆಯಲ್ಲಿ 5,564 , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 5,431 , ಅರಣ್ಯ ಪರಿಸರ ಜೀವಿಶಾಸ್ತ್ರ ಇಲಾಖೆಯಲ್ಲಿ 5,972 ಕಡತಗಳು ಬಾಕಿ ಇವೆ

ಗುತ್ತಿಗೆದಾರ ಸಂತೋಷ್ ಮೃತದೇಹ ಹುಟ್ಟೂರು ತಲುಪುತ್ತಿದ್ದಂತೆ​ ಪೊಲೀಸರು ಮತ್ತು ಕುಟುಂಬಸ್ಥರ ಮಧ್ಯೆ ವಾಗ್ವಾದ

ಇಲಾಖಾ ಹಂತದಲ್ಲಿ 85,545 ಕಡತಗಳು ಬಾಕಿ ನಗರಾಭಿವೃದ್ಧಿ ಇಲಾಖೆಯಲ್ಲಿ 8,596 , ಕಂದಾಯ ಇಲಾಖೆಯಲ್ಲಿ 8,778 , ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ 7,990 , ಆರ್ಥಿಕ ಇಲಾಖೆಯಲ್ಲಿ 6,536 , ಪ್ರಾಥಮಿಕ , ಪ್ರೌಢಶಿಕ್ಷಣ ಇಲಾಖೆಯಲ್ಲಿ 6,655 , ಒಳಾಡಳಿತ ಇಲಾಖೆಯಲ್ಲಿ 5,315 , ಅರಣ್ಯ ಪರಿಸರ ಜೀವಿಶಾಸ್ತ್ರ ಇಲಾಖೆಯಲ್ಲಿ 4,387 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯಲ್ಲಿ 3,363 , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಲ್ಯಾಣ ಇಲಾಖೆಯಲ್ಲಿ 3,815 , ಜಲಸಂಪನ್ಮೂಲ ಇಲಾಖೆಯಲ್ಲಿ 2,994 ಕಡತಗಳು ವಿಲೇವಾರಿಯಾಗದೇ ಧೂಳು ತಿನ್ನುತ್ತಿವೆ ಎಂಬುದು ಅಂಕಿ ಅಂಕಿ ಸಂಖ್ಯೆಯಿಂದ ತಿಳಿದು ಬಂದಿದೆ .

ಡಾ: ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕಡತಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಇ – ಆಫೀಸ್ ತಂತ್ರಾಂಶವನ್ನು ಅನುಷ್ಠಾನಗೊಳಿಸಿದ್ದರೂ ಕಡತಗಳು ಕರಗುತ್ತಿಲ್ಲ ಬದಲಿಗೆ ಬೆಟ್ಟದಂತೆ ಬೆಳೆಯುತ್ತಿದೆ . ರಾಜ್ಯದ ಕೇಂದ್ರಗಳಲ್ಲಿ ದಿನಪೂರ್ತಿ ಮೊಕ್ಕಂ ಹೂಡಿ ಬಾಕಿ ಉಳಿದ ಎಲ್ಲಾ ಜಿಲ್ಲಾ ಅಲ್ಲಿಯೇ ಕಡತಗಳ ವಿಲೇವಾರಿ ಅಭಿಯಾನ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್ . ಅಶೋಕ್ ಅವರು 2 ತಿಂಗಳ ಹಿಂದೆಯಷ್ಟೇ ಪ್ರಕಟಿಸಿದ್ದರು .

ಆದರೆ 2 ತಿಂಗಳು ಕಳೆದ ನಂತರವೂ ಅವರದೇ ಇಲಾಖೆಯಲ್ಲಿ 11,221 ಕಡತಗಳು ಬಾಕಿ ಇವೆ . ಕಡತ ವಿಲೇವಾರಿ ರಾಜ್ಯಾದ್ಯಂತ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು , ಸ್ವತಃ ತಾವೇ ಜಿಲ್ಲೆಯ ಕೇಂದ್ರ ಸ್ಥಾನಕ್ಕೆ ತೆರಳಿ , ಕಂದಾಯ ಇಲಾಖೆಯ ಪ್ರಧಾನ ಜಿಲ್ಲಾಧಿಕಾರಿ , ಕಾರ್ಯದರ್ಶಿಗಳು , ಅಲ್ಲಿನ ತಹಶೀಲ್ದಾರರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಬಾಕಿ ಉಳಿದ ಕಡತಗಳ ಇತ್ಯರ್ಥ ಮಾಡಲಾಗುವುದು ಎಂದು ನೀಡಿದ್ದ ಹೇಳಿಕೆಯೂ ಗೋಡೆ ಮೇಲಿನ ಬರಹದಂತಾಗಿದೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap