ಬೆಂಗಳೂರು:
ಬಾಹ್ಯಾಕಾಶದಲ್ಲಿ ಸುದೀರ್ಘ ಒಂಬತ್ತು ತಿಂಗಳುಗಳನ್ನು ಕಳೆದ ನಂತರ ಸುನೀತಾ ವಿಲಿಯಮ್ಸ್ ಇಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಮನೆಗೆ ಮರಳಲಿದ್ದಾರೆ. ಕೇವಲ ಎಂಟು ದಿನಗಳ ಪ್ರಾಯೋಗಿಕ ಯಾನಕ್ಕಾಗಿ ಹೋದವರು ತಾಂತ್ರಿಕ ತೊಂದರೆಗೆ ಸಿಲುಕಿ ಬರೋಬ್ಬರಿ ಒಂಬತ್ತು ತಿಂಗಳು ಅಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಾಸಾ ಗಗನಯಾತ್ರಿಗಳಾದ ನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಂಗಳವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಅನ್‌ಡಾಕ್ ಮಾಡಲಿದ್ದು, ಇದು ಬಾಹ್ಯಾಕಾಶದಲ್ಲಿ ಒಂಬತ್ತು ತಿಂಗಳ ಅಸಾಧಾರಣ ಪ್ರಯಾಣವನ್ನು ಅಂತ್ಯಗೊಳಿಸಲಿದೆ. ವಿಲಿಯಮ್ಸ್, ವಿಲ್ಮೋರ್ ಮತ್ತು ಇತರ ಇಬ್ಬರು ಕ್ರೂ-9 ಸದಸ್ಯರೊಂದಿಗೆ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಹಿಂತಿರುಗುತ್ತಿದ್ದಾರೆ.
ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಚೊಚ್ಚಲ ಮಾನವ ಸಹಿತ ಕಾರ್ಯಾಚರಣೆಯ ನಂತರ, ಗಗನಯಾತ್ರಿಗಳು ಕಳೆದ ವರ್ಷ ಜೂನ್‌ನಿಂದ ISS ನಲ್ಲಿದ್ದಾರೆ. ಸ್ಟಾರ್‌ಲೈನರ್ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ ಕಾರಣ ಅದನ್ನು ಹಿಂದಿರುಗುವ ಪ್ರಯಾಣಕ್ಕೆ ಅನರ್ಹವೆಂದು ಪರಿಗಣಿಸಲಾಯಿತು. ಸ್ಟಾರ್‌ಲೈನರ್‌ನ ಪ್ರೊಪಲ್ಷನ್ ಸಮಸ್ಯೆಗಳಿಂದಾಗಿ ಪರ್ಯಾಯ ಯೋಜನೆ ಅನಿವಾರ್ಯವಾಯಿತು. ಹೀಗಾಗಿ ರೂಪುಗೊಂಡಿದ್ದೇ ಕ್ರೂ-9 ಕಾರ್ಯಾಚರಣೆಯಲ್ಲಿ.








