ಸತ್ಯೇಂದ್ರ ಜೈನ್‌ ಮಧ್ಯಂತರ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್

ನವದೆಹಲಿ: 

    ಅಕ್ರಮ ಹಣವರ್ಗಾವಣೆ ಆರೋಪದಲ್ಲಿ ಬಂಧನದಲ್ಲಿರುವ ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್ ಮಧ್ಯಂತರ ಜಾಮೀನು ಅರ್ಜಿಯನ್ನು ದೆಹಲಿಯ ನ್ಯಾಯಾಲಯವೊಂದು ತಿರಸ್ಕರಿಸಿದೆ.

    ಗಾಯಗೊಂಡ ಪತ್ನಿ ಹಾಗೂ ಅನಾರೋಗ್ಯಕ್ಕೀಡಾಗಿರುವ ಮಗಳ ಕಾಳಜಿ ವಹಿಸುವುದಕ್ಕಾಗಿ ಸತ್ಯೇಂದ್ರ ಜೈನ್ 4 ವಾರಗಳ ಮಧ್ಯಂತರ ಜಾಮೀನು ಅರ್ಜಿ ಕೋರಿದ್ದರು. ಜೈನ್ ಅರ್ಜಿಯ ಪ್ರಕಾರ, ಪ್ರಕರಣದ ಆರೋಪಿಯೂ ಆಗಿರುವ ಜೈನ್ ಪತ್ನಿ ಪೂನಮ್ ಜೈನ್, ಬಲಗಾಲಿನ ಮೂಳೆ ಮುರಿದಿದ್ದು, ನಿರಂತರವಾಗಿ ವೈಯಕ್ತಿಕವಾಗಿ ಸಹಾಯ ಮಾಡುವವರು ಅಗತ್ಯವಿದ್ದಾರೆ. ಮಗಳಿಗೂ ನಿರಂತರವಾಗಿ ಕಾಳಜಿ ವಹಿಸುವಷ್ಟು ಅನಾರೋಗ್ಯ ಉಂಟಾಗಿದೆ.

   ‘ಅರ್ಜಿದಾರರ (ಜೈನ್) ಪತ್ನಿ ತನ್ನನ್ನು ನೋಡಿಕೊಳ್ಳುವ ಮತ್ತು ಇತರ ವ್ಯವಹಾರಗಳನ್ನು ನಿರ್ವಹಿಸುವುದರ ಹೊರತಾಗಿ, ತನ್ನ ಪ್ರಸ್ತುತ ಪರಿಸ್ಥಿತಿಯ ಕಾರಣದಿಂದಾಗಿ ತನ್ನ ಕಿರಿಯ ಮಗಳನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮತ್ತೋರ್ವ ಮಗಳು ಮದುವೆಯಾಗಿ ತನ್ನ ಸಾಂಸಾರಿಕ ಮನೆಯಲ್ಲಿಯೇ ಇದ್ದು, 7 ತಿಂಗಳ ಮಗುವನ್ನು ನೋಡಿಕೊಳ್ಳಲು ಕುಟುಂಬದಲ್ಲಿ ಆಕೆಯ ಬೆಂಬಲಕ್ಕೆ ಬೇರೆ ಯಾರೂ ಇಲ್ಲ,’ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

   ಅರವಿಂದ್ ಕೇಜ್ರಿವಾಲ್ ಸರ್ಕಾರದ ಮಾಜಿ ಕ್ಯಾಬಿನೆಟ್ ಸಚಿವ ಜೈನ್ ಅವರನ್ನು ನಾಲ್ಕು ಕಂಪನಿಗಳ ಮೂಲಕ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಮೇ 30, 2022 ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು,

    ಭ್ರಷ್ಟಾಚಾರ ತಡೆ ಕಾಯ್ದೆಯಡಿ 2017ರಲ್ಲಿ ಜೈನ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದ ಆಧಾರದ ಮೇಲೆ ಜೈನ್ ಅವರನ್ನು ಬಂಧಿಸಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap